Wednesday, 24th May 2017  

Vijayavani

ಒಣ ಹಣ್ಣುಗಳಿಂದ ಆರೋಗ್ಯ

Saturday, 20.05.2017, 3:00 AM       No Comments

ಪ್ರತಿದಿನ ದ್ರಾಕ್ಷಿ, ಗೋಡಂಬಿ ಮತ್ತಿತರ ಒಣ ಹಣ್ಣುಗಳ ಸೇವನೆ ಮಾಡಿದರೆ ದೊಡ್ಡ ಕರುಳಿನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅಮೆರಿಕ ತಜ್ಞರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಗೋಡಂಬಿ ಸಹಿತ ಒಣ ಹಣ್ಣುಗಳನ್ನು ವಾರಕ್ಕೆ ಕನಿಷ್ಠ 50 ಗ್ರಾಂ ಸೇವನೆ ಮಾಡಿದರೆ ದೊಡ್ಡ ಕರುಳಿನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಶೇ. 42 ಕಡಿಮೆ. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಶೇ. 57 ಕಡಿಮೆ ಎಂದು ತಜ್ಞರು ತಿಳಿಸಿದ್ದಾರೆ. ದೊಡ್ಡ ಕರುಳಿನ ಕ್ಯಾನ್ಸರ್ ಇರುವ ರೋಗಿಗಳನ್ನು ತಜ್ಞರು ಅಧ್ಯಯನಕ್ಕೆ ಒಳಪಡಿಸಿದ್ದರು. ಈ ವೇಳೆ ಒಣ ಹಣ್ಣುಗಳ ಸೇವನೆಯಿಂದ ಈ ರೋಗಿಗಳಲ್ಲಿ ಸಾವು ಸಂಭವಿಸುವ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು ಎಂದಿದೆ ವರದಿ. ಈ ರೀತಿ ಕಾಯಿಲೆಗೆ ತುತ್ತಾದವರು ತಮಗೆ ಸಾವು ಕಟ್ಟಿಟ್ಟ ಬುತ್ತಿ ಎಂದು ಭಾವಿಸಿ, ಜೀವನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡು ಬಿಡುತ್ತಾರೆ. ಆದರೆ ಆಹಾರದ ಪದ್ಧತಿಯಿಂದ ಸಾವನ್ನು ಮುಂದೂಡಬಹುದು. ನಿತ್ಯ ಚಟುವಟಿಕೆಯಿಂದ ಇರುವುದು ಹೆಚ್ಚು ಸಹಕಾರಿಯಾಗಲಿದೆ ಎಂದಿದ್ದಾರೆ.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top