Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಒಡೆಯರ್ ಆ.16ಕ್ಕೆ ಶುರು

Thursday, 14.06.2018, 3:01 AM       No Comments

ಬೆಂಗಳೂರು: ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಆಚರಿಸಿ ಖುಷಿ ಪಟ್ಟ ಮರುದಿನವೇ, ಅಂದರೆ ಆ.16ರಂದು ಕೂಡ ಮತ್ತೆ ಸಿಹಿ ಹಂಚಿ ಸಂಭ್ರಮಿಸಲು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿಮಾನಿಗಳಿಗೆ ಹೊಸ ಕಾರಣವೊಂದು ಸಿಕ್ಕಿದೆ. ಅಂದು ದರ್ಶನ್ ನಟನೆಯ ಯಾವುದಾದರೂ ಸಿನಿಮಾ ತೆರೆಕಾಣಲಿದೆಯೇ? ಇಲ್ಲ! ಬದಲಿಗೆ, ಹೊಸ ಚಿತ್ರ ಸೆಟ್ಟೇರಲಿದೆ. ಈಗಾಗಲೇ ಘೋಷಣೆ ಆಗಿರುವ ‘ಒಡೆಯರ್’ ಸಿನಿಮಾವನ್ನು ಆ. 16ಕ್ಕೆ ಲಾಂಚ್ ಮಾಡಲು ನಿರ್ಧರಿಸಲಾಗಿದೆಯಂತೆ. ಈ ಮೊದಲೇ ಸುದ್ದಿ ಆದಂತೆ ‘ಒಡೆಯರ್’ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನ ಮಾಡಬೇಕಿತ್ತು. ಆದರೆ, ‘ಒಡೆಯರ್’ಗೆ ಆಕ್ಷನ್-ಕಟ್ ಹೇಳುವ ಹೊಣೆ ಎಂ.ಡಿ. ಶ್ರೀಧರ್ ಪಾಲಾಯಿತು. ಅಂದಹಾಗೆ, ಎಂ.ಡಿ. ಶ್ರೀಧರ್ ಮತ್ತು ದರ್ಶನ್ ಜತೆಯಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ಪೊರ್ಕಿ’ ಮತ್ತು ‘ಬುಲ್​ಬುಲ್’ ಸಿನಿಮಾಗಳಲ್ಲಿ ಈ ನಟ-ನಿರ್ದೇಶಕನ ಜೋಡಿ ಒಂದಾಗಿತ್ತು. ಈಗ ಮೂರನೇ ಬಾರಿ ಅದೇ ಕಾಂಬಿನೇಷನ್​ನಲ್ಲಿ ‘ಒಡೆಯರ್’ ಸಿದ್ಧವಾಗಲಿದೆ. ಅಷ್ಟಕ್ಕೂ ಆ. 16ರಂದೇ ‘ಒಡೆಯರ್’ ಸೆಟ್ಟೇರಲು ಕಾರಣವೇನು ಗೊತ್ತ? ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವ ನಿರ್ವಪಕ ಸಂದೇಶ್ ನಾಗರಾಜ್ ಅವರ ಜನ್ಮದಿನ ಅಂದು. ಅದೇ ಖುಷಿಯಲ್ಲೇ ಚಿತ್ರ ಲಾಂಚ್ ಆಗುವುದು ಒಳಿತು ಎಂಬುದು ತಂಡದ ಉದ್ದೇಶ ಎನ್ನುತ್ತಿವೆ ಮೂಲಗಳು. ಆದರೆ ಈ ಬಗ್ಗೆ ತಂಡದ ಯಾರೊಬ್ಬರೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಪ್ರಸ್ತುತ ‘ಕುರುಕ್ಷೇತ್ರ’ ಮತ್ತು ‘ಯಜಮಾನ’ ಸಿನಿಮಾದ ಕೆಲಸಗಳಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಅವು ಪೂರ್ಣಗೊಳ್ಳುತ್ತಿದ್ದಂತೆಯೇ ಅವರು ‘ಒಡೆಯರ್’ ಬಳಗ ಸೇರಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಜತೆ ಬೇರೆ ಯಾವೆಲ್ಲ ಕಲಾವಿದರು ತೆರೆಹಂಚಿಕೊಳ್ಳಲಿದ್ದಾರೆ? ನಾಯಕಿ ಯಾರು? ಈ ಯಾವ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರವಿಲ್ಲ.

Leave a Reply

Your email address will not be published. Required fields are marked *

Back To Top