Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಒಂದು ಮುತ್ತಿನ ಕಥೆ!

Monday, 17.07.2017, 3:03 AM       No Comments

ಸಾರ್ವಜನಿಕವಾಗಿಯೇ ಕತ್ರಿನಾ ಕೈಫ್ ಕೆನ್ನೆಗೆ ಸಲ್ಮಾನ್ ಖಾನ್ ಸಿಹಿ ಮುತ್ತು ನೀಡಿದ್ದಾರೆ! ಅದೂ ಭಾರತದಲ್ಲಲ್ಲ, ನ್ಯೂಯಾರ್ಕ್​ನಲ್ಲಿ. ಅಲ್ಲೇನು ಮಾಡುತ್ತಿದ್ದಾರೆ ಇವರಿಬ್ಬರು? ಸಿನಿಮಾ ನೆಪದಲ್ಲಿ ಜಾಲಿ ಮೂಡ್​ನಲ್ಲಿದ್ದಾರಾ, ಇಬ್ಬರ ನಡುವಿನ ಹಳೇ ಪ್ರೇಮ ಮತ್ತೆ ಚಿಗುರೊಡೆಯಿತಾ? ಇಂಥ ಅನುಮಾನಗಳಿಗೆಲ್ಲ ಅವಕಾಶವಿಲ್ಲ. ಬದಲಿಗೆ, ಶನಿವಾರ ನಡೆದ ಐಫಾ ಅವಾರ್ಡ್ (ಇಂಟರ್​ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್) ಕಾರ್ಯಕ್ರಮಕ್ಕಾಗಿ ನ್ಯೂಯಾರ್ಕ್​ನಲ್ಲಿದೆ ಈ ಜೋಡಿ.

ಇವರಷ್ಟೇ ಅಲ್ಲ, ಬಾಲಿವುಡ್​ನಲ್ಲಿ ಸದ್ಯ ಪ್ರಣಯ ಪಕ್ಷಿಗಳೆಂದು ಉಳಿದವರ ಕಣ್ಣಿಗೆ ಆಹಾರವಾಗುತ್ತಿರುವ ಸುಶಾಂತ್ ಸಿಂಗ್- ಕೃತಿ ಸನೋನ್, ವರುಣ್ ಧವನ್- ಆಲಿಯಾ ಭಟ್ ಕೂಡ ನ್ಯೂಯಾರ್ಕ್​ನಲ್ಲಿ ಬೀಡುಬಿಟ್ಟಿದ್ದಾರೆ. ಅವರೆಲ್ಲರಿಗಿಂತಲೂ ಹೆಚ್ಚಾಗಿ ಕಣ್ಣು ಕುಕ್ಕಿದ್ದು ಸಲ್ಲು ಮತ್ತು ಕ್ಯಾಟ್. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮುಂಚಿನ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಠೀಕು ಠಾಕು ಸೂಟು ಧರಿಸಿ ಬಂದಿದ್ದ ಸಲ್ಮಾನ್ ಖಾನ್, ವೇದಿಕೆ ಮೇಲೆ ಮಾಜಿ ಪ್ರೇಯಸಿ ಕತ್ರಿನಾರನ್ನು ಕಂಡೊಡನೆ ಹಾಡೊಂದನ್ನು ಹಾಡಿದ್ದಾರೆ. ಅದಕ್ಕೆ ಕಾರಣ ಕತ್ರಿನಾ ಜನ್ಮದಿನ. ಜು. 16ರಂದು ಮಾಜಿ ಗೆಳತಿಯ ಹುಟ್ಟುಹಬ್ಬ ಇತ್ತು. ಅದನ್ನು ನೆನಪಿನಲ್ಲಿಟ್ಟುಕೊಂಡು ವೇದಿಕೆ ಮೇಲೆಯೇ ಬರ್ತ್ ಡೇ ಶುಭಾಶಯ ತಿಳಿಸಿದ್ದರು. ಇಷ್ಟಕ್ಕೆ ಮುಗಿದಿಲ್ಲ, ಕತ್ರಿನಾರ ಕೆನ್ನೆ ಬಳಿಬಂದು ಏರ್ ಕಿಸ್ ನೀಡಿದ್ದಾರೆ. ಇದಕ್ಕೂ ಮುನ್ನ ಇದೇ ಐಫಾ ಅವಾರ್ಡ್ ಕಾರ್ಯಕ್ರಮದ ನಿಮಿತ್ತ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೂ ಕತ್ರಿನಾರನ್ನು ನೆನೆದಿದ್ದರು ಸಲ್ಮಾನ್. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top