Saturday, 21st October 2017  

Vijayavani

1. ತೀವ್ರಗೊಂಡ ಟಿಪ್ಪು ಜಯಂತಿ ಆಚರಣೆ ವಿವಾದ – ಅನಂತ ಹೆಗಡೆ ನಿಲುವಿಗೆ ಪ್ರತಾಪ್ ಸಿಂಹ ಸಹಮತ – ಇದೇ ಕೊನೆ ಆಚರಣೆ ಅಂತಾ ಕಿಡಿ 2. ಗೌರಿ ಲಂಕೇಶ್​ ಹಂತಕರ ರೇಖಾಚಿತ್ರ ವಿವಾದ – ಹಿಂದೂಗಳ ಮೇಲೆ ಎಸ್‌ಐಟಿಯಿಂದ ಷಡ್ಯಂತ್ರ – ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಆರೋಪ 3. ಬೆಂಗಳೂರಿನಲ್ಲಿ ಧನದಾಹಿ ಆಸ್ಪತ್ರೆ ಅಟ್ಟಹಾಸ – ಬಿಲ್‌ ಪಾವತಿಸದ ತಾಯಿಗೆ ಮಕ್ಕಳನ್ನ ತೋರಿಸದ ಸಿಬ್ಬಂದಿ – ಚಿಕಿತ್ಸೆಗಾಗಿ ನೊಂದ ಪೋಷಕರ ಪರದಾಟ 4. ಮೆರ್ಸಲ್ ಚಿತ್ರದ ಬೆಂಬಲಕ್ಕೆ ನಿಂತ ಕಮಲ್ – ಮೋದಿಗೆ ಪರೋಕ್ಷ ಟಾಂಗ್ ನೀಡಿದ ರಾಹುಲ್ – ವಿವಾದದ ಸುಳಿಯಲ್ಲಿ ಒದ್ದಾಡ್ತಿದೆ ತಮಿಳು ಚಿತ್ರ ಮೆರ್ಸಲ್ 5. ಹೆಣ್ಣು ಉಡಕ್ಕಾಗಿ ಗಂಡು ಉಡಗಳ ಕಾದಾಟ – ಕೆಸರಿನಲ್ಲಿ ನಡೀತು ಭಾರಿ ಕಾಳಗ – ಮಂಗಳೂರಿನಲ್ಲಿ ರೋಚಕ ಫೈಟ್​
Breaking News :

ಐ ಲೈಕ್ ಇಟ್ ತೈಮೂರ್!

Monday, 20.03.2017, 10:10 AM       No Comments

ಶ್ರೀಮಂತರ ಮಕ್ಕಳು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟುತ್ತಾರೆ! ಈ ಉಕ್ತಿಯ ಅರ್ಥ, ಧನಿಕರ ಮಕ್ಕಳಿಗೆ ಸಕಲ ಸುಖ- ಸವಲತ್ತುಗಳು ಅನಾಯಾಸವಾಗಿ ಲಭ್ಯವಿರುತ್ತದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ದಂಪತಿಯ ಮುದ್ದಿನ ಮಗ ತೈಮೂರ್ ವಿಷಯದಲ್ಲೂ ಇದು ಮತ್ತೊಮ್ಮೆ ಸಾಬೀತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್​ಗಿಂತ ಹೆಚ್ಚಿನ ಲೈಕ್ಸ್​ಗಳನ್ನು 3 ತಿಂಗಳ ತೈಮೂರ್ ಪಡೆದುಕೊಳ್ಳುತ್ತಿದ್ದಾನೆ!

ಆಶ್ಚರ್ಯವಾದರೂ ನಿಜ. ಹುಟ್ಟುವ ಮೊದಲೇ, ಹುಟ್ಟಿದಾಗ ಹಾಗೂ ನಾಮಕರಣದ ವೇಳೆ ಹೆಚ್ಚಿನ ಸುದ್ದಿಗೆ ಒಳಗಾಗಿದ್ದ ತೈಮೂರ್ ಇದೀಗ ಮತ್ತೆ ಅಖಾಡಕ್ಕಿಳಿದಿದ್ದಾನೆ. ಕಳೆದ ಶನಿವಾರ ತೈಮೂರ್​ಗೆ ವಾತ್ಸಲ್ಯದ ಮುತ್ತಿಡುತ್ತಿರುವ ಚಿತ್ರವನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದು, ಲಕ್ಷಾಂತರ ಲೈಕ್​ಗಳನ್ನು ಪಡೆದುಕೊಂಡಿದೆ. ಅಮ್ಮನ ತೋಳಿನಲ್ಲಿ 3 ತಿಂಗಳ ತೈಮೂರ್ ನಸು ನಗುತ್ತಿರುವುದು ನೋಡುಗರ ಮನಸ್ಸನ್ನು ಕದಿಯುವಂತಿದೆ.

ಇದೇನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತೈಮೂರ್ ಲೈಕ್ಸ್​ಗಳನ್ನು ಪಡೆಯುತ್ತಿಲ್ಲ. ಹುಟ್ಟಿದ ದಿನದಂದು ಕರೀನಾ ಕಪೂರ್ ಹಾಗೂ ಆಸ್ಪತ್ರೆಯಿಂದ ಹೊರಡುವ ವೇಳೆ ಸೈಫ್ ಅಲಿ ಖಾನ್ ಅಪ್​ಲೋಡ್ ಮಾಡಿದ ಚಿತ್ರಗಳಲ್ಲಿಯೂ ತೈಮೂರ್ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್​ಗಳನ್ನು ಪಡೆದಿದ್ದ.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top