Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಐಸಿಸಿ ಹೊಸ ನಿಯಮದ ಅರಿವಿಲ್ಲದೆ ಆಸೀಸ್​ಗೆ ಹಿನ್ನಡೆ!

Monday, 09.10.2017, 3:00 AM       No Comments

ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಐಸಿಸಿ ಇತ್ತೀಚೆಗಷ್ಟೇ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಬಗ್ಗೆ ಹೆಚ್ಚಿನ ಅರಿವು ಹೊಂದಿರದ ಕಾರಣ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿನ್ನಡೆ ಎದುರಿಸಿದೆ. ಏಕದಿನ ಸರಣಿಯ ನಡುವೆ ಜಾರಿಗೆ ಬಂದಿದ್ದ ಈ ನಿಯಮಗಳು ಟಿ20ಯಿಂದ ಉಭಯ ತಂಡಗಳ ಸರಣಿಗೂ ಅನ್ವಯಿಸಿವೆ. ಇದರಂತೆ ಚುಟುಕು ಕ್ರಿಕೆಟ್​ಗೂ ಈಗ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್​ಎಸ್) ಇದ್ದರೆ, 10 ಓವರ್​ಗಿಂತ ಕಡಿಮೆಗೆ ಇಳಿಸಲ್ಪಟ್ಟ ಟಿ20 ಪಂದ್ಯದಲ್ಲಿ ಬೌಲರ್ ಒಬ್ಬನ ಗರಿಷ್ಠ ಓವರ್ ಮಿತಿ 2ಕ್ಕಿಂತ ಕಡಿಮೆಗೊಳಿಸುವಂತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಅರವಿರಲಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಆರನ್ ಫಿಂಚ್ 9 ವಿಕೆಟ್ ಸೋಲಿನ ಬಳಿಕ ಬೇಸರಿಸಿದರು.

ಆಸೀಸ್ 18.4 ಓವರ್​ಗಳಲ್ಲಿ 8 ವಿಕೆಟ್​ಗೆ 118 ರನ್ ಗಳಿಸಿದ್ದಾಗ ಮಳೆ ಬಂದಿದ್ದರಿಂದ ಬಳಿಕ ಡಕ್ವರ್ತ್-ಲೂಯಿಸ್ ನಿಯಮದಂತೆ ಭಾರತಕ್ಕೆ 6 ಓವರ್​ಗಳಲ್ಲಿ 48 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಇದರಿಂದ ಆಸೀಸ್ ಬೌಲರ್​ಗಳಿಗೆ ತಲಾ 2 ಓವರ್ ಎಸೆಯುವ ಅವಕಾಶವಿತ್ತು. ಆದರೆ ಹಿಂದಿನಂತೆ ಓರ್ವ ಬೌಲರ್ ಮಾತ್ರ 2 ಓವರ್ ಎಸೆಯಬಹುದೆಂದು ತಿಳಿದ ಆಸೀಸ್ ಕೌಲ್ಟರ್ ನಿಲ್​ಗೆ ಮಾತ್ರ ಆ ಅವಕಾಶ ನೀಡಿತು. ಇತರರು ತಲಾ 1 ಓವರ್ ಎಸೆದರು. ನಾಯಕ ವಿರಾಟ್ ಕೊಹ್ಲಿ (22*) ಆಸರೆಯಲ್ಲಿ ಭಾರತ 5.3 ಓವರ್​ಗಳಲ್ಲೇ 1 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಆಸೀಸ್ ಕಂಗೆಡಿಸಿದ್ದ ಕುಲದೀಪ್ ಯಾದವ್ (16ಕ್ಕೆ 2) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

‘ಟಿ20ಗೂ ಡಿಆರ್​ಎಸ್ ಬಂದಿದೆ ಎಂದು ನಮಗೆ ಗೊತ್ತೇ ಇರಲಿಲ್ಲ. 5 ಓವರ್ ವೇಳೆ ಡ್ರಿಂಕ್ಸ್ ಬ್ರೇಕ್​ನಲ್ಲಿ ಮೈದಾನಕ್ಕೆ ಬಂದಿದ್ದ ಸ್ಟೀವನ್ ಸ್ಮಿತ್ ಈ ವಿಷಯ ತಿಳಿಸಿದರು. ಓವರ್ ಕೋಟಾದ ಬಗ್ಗೆಯೂ ಸರಿಯಾದ ಮಾಹಿತಿ ಇರಲಿಲ್ಲ. ಪ್ರವಾಸದ ನಡುವೆ ಈ ರೀತಿ ಭಿನ್ನ ನಿಯಮಗಳಡಿ ಆಡಬೇಕಾಗಿರುವುದು ವಿಪರ್ಯಾಸ’ ಎಂದು ಫಿಂಚ್ ಹೇಳಿದರು. ಇದಕ್ಕೆ ಪ್ರತಿಯಾಗಿ ಭಾರತ ತಂಡದಿಂದ ಪತ್ರಿಕಾಗೋಷ್ಠಿಗೆ ಬಂದಿದ್ದ ಆರಂಭಿಕ ಶಿಖರ್ ಧವನ್ ಕೂಡ, ತಮಗೂ ಹೊಸ ನಿಯಮಗಳ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ ಎಂದರು. -ಪಿಟಿಐ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಸತತ 7 ಗೆಲುವು ದಾಖಲಿಸಿದೆ. 2012ರ ವಿಶ್ವಕಪ್ ಬಳಿಕ ಭಾರತ ಆಸೀಸ್ ಎದುರು ಚುಟುಕು ಕ್ರಿಕೆಟ್​ನಲ್ಲಿ ಸೋತಿಲ್ಲ.

ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕೊಹ್ಲಿ

ಪ್ರತಿ ಕ್ರಿಕೆಟ್ ಪ್ರಕಾರಕ್ಕೆ ತಕ್ಕಂತೆ ಆಟಗಾರರನ್ನು ಆರಿಸುವ ಟೀಮ್ ಮ್ಯಾನೇಜ್​ವೆುಂಟ್ ನಿರ್ಧಾರವೇ ಭಾರತ ತಂಡದ ಇತ್ತೀಚೆಗಿನ ಯಶಸ್ಸಿಗೆ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಬಹಿರಂಗ ಪಡಿಸಿದ್ದಾರೆ. ಸೀಮಿತ ಓವರ್ ಕ್ರಿಕೆಟ್​ನಲ್ಲಿ ಮಿಸ್ಟರಿ ಸ್ಪಿನ್ನರ್ ಕುಲದೀಪ್ ಯಾದವ್​ಗೆ ಅವಕಾಶ ನೀಡುವ ನಿರ್ಧಾರ ಲಾಭ ತರುತ್ತಿದೆ ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

Back To Top