Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಐಷಾರಾಮಿ ಮನೆಗೆ ಪ್ಲಾಟಿನಾ ವೆಂಚರ್ಸ್

Saturday, 09.09.2017, 3:00 AM       No Comments

ಲಕ್ಸುರಿ ಹಾಗೂ ಸೂಪರ್ ಲಕ್ಸುರಿ ಅಪಾರ್ಟ್ ಮೆಂಟ್​ಗಳ ನಿರ್ಮಾಣ ಮಾಡುತ್ತಿರುವ ಪ್ಲಾಟಿನಾ ವೆಂಚರ್ಸ್, ತನ್ನ ಯೋಜನೆಗಳಲ್ಲಿ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ.

ರಾಯಲ್ ಅಪಾರ್ಟ್​ವೆುಂಟ್​ಗಳನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆ, ನಗರದ ಪ್ರಮುಖ ರಿಯಾಲ್ಟಿ ತಾಣ ಕೆಂಗೇರಿಯಲ್ಲಿ ಪ್ರತಿಷ್ಠಿತ ವಸತಿ ಸಮುಚ್ಚಯ ಪ್ಲಾಟಿನಾ ಎಕ್ಸೊರ್ಟಿಕಾ ನಿರ್ಮಾಣ ಮಾಡುತ್ತಿದೆ.

2ಬಿಎಚ್​ಕೆ, 2.5ಬಿಎಚ್​ಕೆ, 3 ಬಿಎಚ್​ಕೆಯ ಮನೆಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಸ್ಯಾಟಲೈಟ್ ಬಸ್ ನಿಲ್ದಾಣ, ಆರ್.ವಿ. ಇಂಜಿನಿಯರಿಂಗ್ ಕಾಲೇಜು ಹಾಗೂ ಮೆಟ್ರೋ ಸಂಪರ್ಕಕ್ಕೆ ಹತ್ತಿರವಾಗಿರುವ ಯೋಜನೆ ಇದಾಗಿದ್ದು, ಕೆಂಗೇರಿ ರೈಲು ನಿಲ್ದಾಣಕ್ಕೂ ಸನಿಹದಲ್ಲಿದೆ.

2.5 ಬಿಎಚ್​ಕೆ ಮನೆ ಲಭ್ಯ

ಯೋಜನೆಯಲ್ಲಿ ಕೇವಲ 2, 3 ಬಿಎಚ್​ಕೆ ಮನೆಗಳಿಗೆ ಮಾತ್ರ ಸೀಮಿತ ಅಲ್ಲ. 2.5 ಬಿಎಚ್​ಕೆ ಫ್ಲ್ಯಾಟ್​ಗಳೂ ಇವೆ. 2 ಬೆಡ್ ರೂಂ ಹಾಗೂ ಒಂದು ಸಣ್ಣ ಬೆಡ್ ರೂಂ ಇದ್ದು, ಈ ರೀತಿಯ ಮನೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕೆಂಗೇರಿಯ ಪ್ಲಾಟಿನಾ ಎಕ್ಸೋರ್ಟಿಕಾ, ವರ್ತರು, ಮಾರತ್​ಹಳ್ಳಿ ಭಾಗದಲ್ಲಿ ‘ಎಟಿಝುಡ್ ಎಸ್ಟ್ರೆಲ್ಲ’ ಯೋಜನೆಗಳಲ್ಲಿ 2.5 ಬಿಎಚ್​ಕೆ ಫ್ಲ್ಯಾಟ್​ಗಳನ್ನು ನಿರ್ವಿುಸುತ್ತಿದೆ. ಪ್ಲಾಟಿನಾ ಎಕ್ಸೋರ್ಟಿಕಾದಲ್ಲಿ ಒಟ್ಟು 200ಕ್ಕೂ ಅಧಿಕ ಫ್ಲ್ಯಾಟ್​ಗಳು ಮಾರಾಟಕ್ಕೆ ಲಭ್ಯವಿದೆ. ವರ್ತರಿನ ಎಸ್ಟ್ರೆಲ್ಲ ಯೋಜನೆಯಲ್ಲಿ ಒಟ್ಟು 200 ಫ್ಲ್ಯಾಟ್​ಗಳು ನಿರ್ವಿುಸುತ್ತಿದೆ.

ಹೆಬ್ಬಾಳದಲ್ಲೂ ಐಷಾರಾಮಿ ಮನೆ

ಪ್ರಸ್ತುತ ರಿಯಾಲ್ಟಿ ಹಬ್ ಆಗಿ ಗುರುತಿಸಿಕೊಂಡಿರುವ ಹೆಬ್ಬಾಳದಲ್ಲೂ ಒಟ್ಟು 7 ವಸತಿ ಯೋಜನೆಗಳಲ್ಲಿ 400 ಕ್ಕೂ ಅಧಿಕ ಫ್ಲ್ಯಾಟ್​ಗಳನ್ನು ನಿರ್ವಿುಸುತ್ತಿದೆ. ಎರಡು ಹಾಗೂ ಮೂರು ಬಿಎಚ್​ಕೆ ಮನೆಗಳಿರುವ ಅಪಾರ್ಟ್​ವೆುಂಟ್​ಗಳು ಈ ಯೋಜನೆಗಳಲ್ಲಿ ಸಿಗಲಿದೆ.

ಐಷಾರಾಮಿ ಜೀವನಕ್ಕೆ ಅಗತ್ಯವಾದ ಎಲ್ಲ ರೀತಿಯ ಅಗತ್ಯತೆಗಳನ್ನು ವಸತಿ ಸಮುಚ್ಚಯ ಪೂರ್ತಿಗೊಳಿಸಲಿದ್ದು, ನೀರಿನ ಸೌಲಭ್ಯ, ರ್ಪಾಂಗ್, ಗಾರ್ಡನ್, ಈಜುಕೊಳ, ಫಿಟ್​ನೆಸ್ ಸೆಂಟರ್ ಇತ್ಯಾದಿ ವಿವಿಧ ಬಗೆಯ ಗ್ರಾಹಕರ ಅವಶ್ಯಕತೆಗಳನ್ನು ಅಚ್ಚುಕಟ್ಟಾಗಿ ನೀಡಿದೆ.

ಇದಲ್ಲದೆ ಎಟಿಝುಡ್ ಪ್ರಾಪರ್ಟೀಸ್ ಹೆಸರಲ್ಲಿ, ನಗರದ ವರ್ತರು ಭಾಗದಲ್ಲಿ ಎಟಿಝುಡ್ ಎಸ್ಟ್ರೆಲ್ಲ ಲಕ್ಸುರಿ ಅಪಾರ್ಟ್​ವೆುಂಟ್ ನಿರ್ವಿುಸಿದ್ದು, ಐಷಾರಾಮಿ ಜೀವನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದೆ.

ಸಂಸ್ಥೆಯ ಪ್ಲಾಟಿನಾ ಎಕ್ಸೋರ್ಟಿಕಾವು ಕೆಂಗೇರಿ ವಸತಿ ಸಮುಚ್ಚಯವು, ರೆಡಿ ಟು ಮೂವ್ ವಿಭಾಗಕ್ಕೆ ಸೇರಿದ್ದು, 2, 2.5 ಹಾಗೂ 3 ಬಿಎಚ್​ಕೆ ಮನೆಗಳನ್ನು ಗಾಹಕರಿಗೆ ನೀಡಲಿದೆ. ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಮನೆ ನೀಡಲಾಗುವುದು

| ಸಿಕಂದರ್, ಹಿರಿಯ ವ್ಯವಸ್ಥಾಪಕ

Leave a Reply

Your email address will not be published. Required fields are marked *

Back To Top