Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಐರನ್ ಮ್ಯಾನ್ ಲವ್ ಕಹಾನಿ

Saturday, 17.06.2017, 3:00 AM       No Comments

ಪ್ರೀತಿ, ಪ್ರೇಮ, ವಿವಾಹದ ವಿಚಾರದಲ್ಲಿ ಬಾಲಿವುಡ್ ಮಂದಿ ಭಿನ್ನ. ಇಲ್ಲಿ ವಯಸ್ಸಿನ ಅಂತರಕ್ಕೆ ಮಹತ್ವವೇ ಇಲ್ಲ. ಬೋನಿ ಕಪೂರ್- ಶ್ರೀದೇವಿ, ಸೈಫ್ ಅಲಿ ಖಾನ್- ಕರೀನಾ ಕಪೂರ್ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಇದಕ್ಕೆ ಪೂರಕ ಎಂಬಂತೆ ಎರಡು ದಿನದ ಹಿಂದಷ್ಟೇ 44ರ ಹರೆಯದ ನಿರ್ದೇಶಕ ಅನುರಾಗ್ ಕಶ್ಯಪ್ 23ರ ಹರೆಯದ ಗರ್ಲ್​ಫ್ರೆಂಡ್ ಶುಭ್ರಾ ಶೆಟ್ಟಿ ಜತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಈ ಸಾಲಿಗೆ ವಿದೇಶಿ ಮೂಲದ ಭಾರತೀಯ ನಟ ಮಿಲಿಂದ್ ಸೋಮನ್ ಸೇರಿದ್ದಾರೆ. 1990ರ ದಶಕದಲ್ಲಿ ಯುವತಿಯರ ಹೃದಯ ಗೆದ್ದ ನಟ ಮಿಲಿಂದ್ 51ರ ಹರೆಯದಲ್ಲೂ ಯುವತಿಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕಿತಾ ಕೊನ್ವಾರ್ ಎಂಬ ಯುವತಿಯೊಂದಿಗೆ ಏಕಾಂತದಲ್ಲಿರುವ ಫೋಟೋಗಳನ್ನು ಐರನ್ ಮ್ಯಾನ್ ಎಂದೇ ಜನಪ್ರಿಯರಾದ ಮಿಲಿಂದ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಟೋಗಳು ವೈರಲ್ ಆಗಿವೆ. ಅಷ್ಟಕ್ಕೂ ಈ ಯುವತಿ ಮಿಲಿಂದ್​ಗಿಂತ ಅರ್ಧ ವಯಸ್ಸಿನವರು ಎಂದು ಹೇಳಲಾಗಿದೆ. ಕಳೆದ ವರ್ಷವೇ ಈ ಯುವತಿ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಮಿಲಿಂದ್ ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಪುಣೆಯ ರಸ್ತೆ ಬದಿಯ ಹೋಟೆಲ್​ವೊಂದರಲ್ಲಿ ಈ ಜೋಡಿ ಲಸ್ಸಿ ಸೇವಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಜಪಾನ್ ಮೂಲದ ನಟಿ ಮೈಲೆನ್​ಗೆ 2009ರಲ್ಲಿ ಮಿಲಿಂದ್ ವಿಚ್ಛೇದನ ನೀಡಿದ್ದರು. ಬಳಿಕ 21ರ ಹರೆಯದ ನಟಿ ಶಬಾನಾ ಗೋಸ್ವಾಮಿ ವಯಸ್ಸಿನ ಅಂತರ ನೀಡಿ ಈ ಹಿರಿಯ ನಟನಿಂದ ದೂರವಾಗಿದ್ದರು. ಇದೀಗ ಮಿಲಿಂದ್ ಮತ್ತೆ ತನಗಿಂತ ಹಲವು ವರ್ಷ ಕಿರಿಯ ಯುವತಿಯೊಂದಿಗೆ ಡೇಟಿಂಗ್ ನಡೆಸುವ ಮೂಲಕ ವೈವಾಹಿಕ ಜೀವನಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ.

– ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top