Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಏಷ್ಯಾಕಪ್​ನಿಂದ ಭಾರತ ಔಟ್

Wednesday, 15.11.2017, 3:00 AM       No Comments

ಕೌಲಾಲಂಪುರ: ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಲೀಗ್ ಹಂತದಲ್ಲೆ ನಿರ್ಗಮಿಸಿದೆ. ಉಪಾಂತ್ಯಕ್ಕೇರಲು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದ್ದ ಭಾರತ ತಂಡ ಮೂರನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 8 ವಿಕೆಟ್​ಗಳಿಂದ ಶರಣಾಯಿತು. ಇದರೊಂದಿಗೆ ಸತತ 4ನೇ ಬಾರಿಗೆ ಪ್ರಶಸ್ತಿ ಜಯಿಸುವ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡದ ಕನಸು ಈಡೇರಲಿಲ್ಲ.

ಮಂಗಳವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ತಲಾ 32 ಓವರ್​ಗಳ ಪಂದ್ಯ ನಡೆಸಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 8 ವಿಕೆಟ್​ಗೆ 187ರನ್​ಗಳಿಸಿದರೆ, ಪ್ರತಿಯಾಗಿ ಬಾಂಗ್ಲಾದೇಶ ತಂಡ 28 ಓವರ್​ಗಳಲ್ಲಿ 2 ವಿಕೆಟ್​ಗೆ 191ರನ್​ಗಳಿಸಿ ಜಯ ನಗೆ ಬೀರಿತು. ಭಾರತದ ಪರ ಅನುಜ್ ರಾವತ್ (34) ಹಾಗೂ ಸಲ್ಮಾನ್ ಖಾನ್ (39*) ಬಿರುಸಿನ ಬ್ಯಾಟಿಂಗ್ ನಡೆಸಿದರು. ಪ್ರತಿಯಾಗಿ ಭಾರತ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ, ಆರಂಭಿಕರಾದ ಪಿನಾಕ್ ಘೋಷ್ (81*) ಹಾಗೂ ನೈಮ್ ಶೇಖ್ (38) ಜೋಡಿ ಮೊದಲ ವಿಕೆಟ್​ಗೆ 82ರನ್ ಪೇರಿಸುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿತು. ಟೊವ್ಹಿಡ್ ಹ್ರಿಡೊಯ್ (48*ರನ್, 32ಎಸೆತ, 2 ಬೌಂಡರಿ, 4ಸಿಕ್ಸರ್) ಬಿರುಸಿನ ಬ್ಯಾಟಿಂಗ್​ನಿಂದ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಭಾರತದ ಪರ ಮಂದೀಪ್ ಸಿಂಗ್ 2 ವಿಕೆಟ್ ಪಡೆದರು.-ಏಜೆನ್ಸೀಸ್

ಭಾರತ: 8 ವಿಕೆಟ್​ಗೆ 187 (ರೊಬಿಯುಲ್ 43ಕ್ಕೆ 3, ನಾಯಿಮ್ 38ಕ್ಕೆ 2), ಬಾಂಗ್ಲಾ: 2 ವಿಕೆಟ್​ಗೆ 191 (ಘೋಷ್ 81*, ಹ್ರಿಡೊಯ್ 48*).

Leave a Reply

Your email address will not be published. Required fields are marked *

Back To Top