Wednesday, 26th April 2017  

Vijayavani

ಏಪ್ರಿಲ್​ನಲ್ಲಿ ಕೃಷ್ಣ ಬಿಜೆಪಿಗೆ

Monday, 20.03.2017, 8:37 AM       No Comments

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಜೆಪಿಗೆ ಸೇರ್ಪಡೆ ದಿನಾಂಕ ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಿಕೆಯಾಗಿದೆ. ಮಾ.15ರಂದು ಬಿಜೆಪಿಗೆ ಸೇರ್ಪಡೆಯಾಗಬೇಕಿದ್ದ ಕೃಷ್ಣ ನವದೆಹಲಿಗೆ ತೆರಳಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಬೇಕೆನ್ನುವಷ್ಟರಲ್ಲಿ 14ರ ರಾತ್ರಿ ಸಹೋದರಿ ಸುನೀತಾ ನಿಧನರಾಗಿದ್ದರು. ಅಮಿತ್ ಷಾ ಭೇಟಿಯನ್ನು ರದ್ದುಪಡಿಸಿ ಬೆಂಗಳೂರಿಗೆ ಆಗಮಿಸಿದ್ದರಿಂದ ಸೇರ್ಪಡೆ ಮುಂದೂಡಲ್ಪಟ್ಟಿತ್ತು. ಮಾರ್ಚ್ ಮೂರನೇ ವಾರದಲ್ಲಿ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದೆ ಎನ್ನಲಾಗಿತ್ತು. ಆದರೆ ಸಹೋದರಿ ಮನೆಯಲ್ಲಿ ಮಾ.25ರವರೆಗೆ ಸೂತಕವಿರಲಿದೆ. ಈ ಅವಧಿಯಲ್ಲಿ ಸೇರ್ಪಡೆ ಬೇಡ ಎಂದು ಕೃಷ್ಣ ತೀರ್ವನಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅದಕ್ಕೂ ಮೊದಲು ಬಿಜೆಪಿ ನಾಯಕ ಆರ್. ಅಶೋಕ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಕಪ್ಪು ಹಣ ನಿಯಂತ್ರಣ, ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನಡೆಸುತ್ತಿರುವ ಸಮರಕ್ಕೆ ಚ್ಯುತಿ ಬರಬಾರದು ಎಂದಿದ್ದರೆ, ಅಳಿಯ ವಿ.ಜಿ. ಸಿದ್ದಾರ್ಥ ಅಕ್ರಮ ವ್ಯವಹಾರಗಳಿಗೆ ಸಂರಕ್ಷಣೆ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಎಸ್.ಎಂ. ಕೃಷ್ಣ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು.

| ಎಸ್.ಆರ್. ಹಿರೇಮಠ ಸಂಸ್ಥಾಪಕ, ಸಮಾಜ ಪರಿವರ್ತನ ಸಮುದಾಯ

Leave a Reply

Your email address will not be published. Required fields are marked *

Back To Top