Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಏಕ್ ದೋ ತೀನ್​ಬೆಡಗಿಗೆ ಈಗ 50

Monday, 15.05.2017, 3:02 AM       No Comments

ಬಾಲಿವುಡ್ ಮಟ್ಟಿಗೆ ‘ಏಕ್ ದೋ ತೀನ್..’ ಎಂದಕೂಡಲೇ ನೆನಪಾಗುವುದು ನಟಿ ಮಾಧುರಿ ದೀಕ್ಷಿತ್. ‘ತೇಜಾಬ್’ ಚಿತ್ರದ ಈ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಬಾಲಿವುಡ್​ನ ಗಮನ ಸೆಳೆದು, ಆನಂತರ ಸಿನಿಪ್ರಿಯರ ದಿಲ್ ‘ಧಕ್ ಧಕ್ ಕರನೇ ಲಗಾ..’ ಎಂಬಷ್ಟರಮಟ್ಟಿಗೆ ಚಿತ್ರರಂಗದಲ್ಲಿ ಸದ್ದು ಮಾಡಿದವರು ಮಾಧುರಿ. ಹೀಗೆ ರೀಲ್ ಲೈಫ್​ನಲ್ಲಿ ‘ಏಕ್ ದೋ ತೀನ್’ ಎಂದು ಖ್ಯಾತರಾದ ಮಾಧುರಿ, ಈಗ ರಿಯಲ್ ಲೈಫ್​ನಲ್ಲಿ ‘ಪಚಾಸ್’ ವರೆಗೂ ಬಂದಿದ್ದಾರೆ. ಅರ್ಥಾತ್, ಮಾಧುರಿ ದೀಕ್ಷಿತ್ ಇಂದು (ಮೇ 15) 50 ವಸಂತಗಳನ್ನು ಪೂರೈಸಿ 51ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

1967ರಲ್ಲಿ ಜನಿಸಿದ ಮಾಧುರಿ ದೀಕ್ಷಿತ್, 1984ರಲ್ಲಿ ‘ಅಬೋಧ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆ ಬಳಿಕ ಕೆಲವು ಸಣ್ಣಪುಟ್ಟ ಪುತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಹೆಸರು ತಂದುಕೊಟ್ಟಿದ್ದು 1988ರಲ್ಲಿ ಬಿಡುಗಡೆ ಆಗಿರುವ ‘ತೇಜಾಬ್’. ಅದರಲ್ಲಿ ‘ಏಕ್ ದೋ ತೀನ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್​ನಲ್ಲಿ ದಾಪುಗಾಲು ಹಾಕಲಾರಂಭಿಸಿದ ಮಾಧುರಿ ಹಿಂತಿರುಗಿ ನೋಡಲೇ ಇಲ್ಲ. ‘ರಾಮ್ ಲಖನ್’, ‘ಪರಿಂದಾ’, ‘ದಿಲ್’, ‘ಸಾಜನ್’, ‘ಬೇಟಾ’, ‘ಖಳನಾಯಕ್’, ‘ಹಮ್ ಆಪ್ ಕೆ ಹೈ ಕೌನ್’, ‘ರಾಜಾ’, ‘ದಿಲ್ ತೊ ಪಾಗಲ್ ಹೈ’ ಮುಂತಾದ ಚಿತ್ರಗಳಲ್ಲಿ ಅವರ ಅಭಿನಯ ಸಿನಿಪ್ರಿಯರ ಮನಸೆಳೆದಿದ್ದಲ್ಲದೆ, ಆ ಚಿತ್ರಗಳು ಅವರಿಗೆ ಅಪಾರ ಯಶಸ್ಸು ತಂದುಕೊಟ್ಟವು. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ‘ಸಾಜನ್’, ‘ಖಳ್​ನಾಯಕ್’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಮಾಧುರಿ ಹಾಗೂ ಸಂಜಯ್ ದತ್ ಮಧ್ಯೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್ ಹಬ್ಬಿತ್ತು. ಈಗ ಸಂಜಯ್ ದತ್ ಜೀವನಾಧಾರಿತ ಸಿನಿಮಾ ಕೂಡ ನಿರ್ವಣವಾಗುತ್ತಿದ್ದು, ಅದರಲ್ಲಿ ಆ ಬಗ್ಗೆ ಯಾವುದೇ ಪ್ರಸ್ತಾಪ ಇರಬಾರದು ಎಂದು ಮಾಧುರಿ ಈ ಹಿಂದೆ ಕೋರಿದ್ದರು. ಆದರೆ ಇತ್ತೀಚೆಗೆ ಭೇಟಿಯಾದ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಜತೆ ಮಾತಾಡಿದಮಾಧುರಿ, ‘ಅದೆಲ್ಲ ಈಗ ಮುಗಿದ ಅಧ್ಯಾಯ’ ಎಂದಿದ್ದಾರೆ. ಹಾಗಾಗಿ ಸಂಜಯ್ ಬಯೋಪಿಕ್​ನಲ್ಲಿ ದತ್-ಮಾಧುರಿ ಪ್ರೇಮಪ್ರಸಂಗ ಇರಲಿದೆಯೋ ಇಲ್ಲವೋ ಎಂಬುದು ಸದ್ಯಕ್ಕೆ ನಿಗೂಢ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top