Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ಏಕದಿನ ಅಗ್ರಸ್ಥಾನಕ್ಕೆ ಜಿದ್ದಾಜಿದ್ದಿ

Wednesday, 13.09.2017, 3:03 AM       No Comments

ಮುಂಬೈ: ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಏಕದಿನ ಕ್ರಿಕೆಟ್ ಸರಣಿ ಐಸಿಸಿ ರ‍್ಯಾಂಕಿಂಗ್ ಪೈಪೋಟಿಯ ಕಾರಣದಿಂದಲೂ ಮಹತ್ವ ಪಡೆದುಕೊಂಡಿದೆ. ಐದು ಪಂದ್ಯಗಳ ಸರಣಿಯನ್ನು ಯಾವುದೇ ತಂಡ 4-1 ಅಂತರದಿಂದ ಗೆದ್ದುಕೊಂಡಲ್ಲಿ, ದಕ್ಷಿಣ ಆಫ್ರಿಕಾವನ್ನು ಕೆಳಗಿಳಿಸಿ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಲಿದೆ.

ಭಾನುವಾರ ಚೆನ್ನೈನಲ್ಲಿ ಐದು ಪಂದ್ಯಗಳ ಏಕದಿನ ಸರಣಿಗೆ ಚಾಲನೆ ಸಿಗಲಿದೆ. ರ್ಯಾಂಕಿಂಗ್​ನಲ್ಲಿ ಭಾರತ ಸದ್ಯ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ ಕೆಲ ದಶಾಂಶ ಲೆಕ್ಕಾಚಾರದಲ್ಲಿ ಮುನ್ನಡೆ ಕಾಣುವ ಮೂಲಕ 2ನೇ ಸ್ಥಾನ ಹೊಂದಿದೆ. ಭಾರತ ಅಥವಾ ಆಸ್ಟ್ರೇಲಿಯಾ ತಂಡ ಸರಣಿಯನ್ನು 4-1ರಿಂದ ಗೆದ್ದಲ್ಲಿ ಟ್ರೋಫಿ ಜತೆಗೆ ಅಗ್ರಸ್ಥಾನವನ್ನೂ ಬಾಚಿಕೊಳ್ಳಲಿದೆ.

ಭಾರತ-ಆಸ್ಟ್ರೇಲಿಯಾ ತಂಡಗಳು ಸದ್ಯ 117 ಅಂಕಗಳನ್ನು ಹೊಂದಿದ್ದರೆ, ದಕ್ಷಿಣ ಆಫ್ರಿಕಾ 119 ಅಂಕ ಹೊಂದಿದೆ. 4-1ರಿಂದ ಸರಣಿ ಗೆದ್ದ ತಂಡದ ಅಂಕ 120 ಆಗಲಿದೆ. ಆ ಮೂಲಕ ದಕ್ಷಿಣ ಆಫ್ರಿಕಾವನ್ನು ಅಗ್ರಸ್ಥಾನದಿಂದ ಕೆಳಗಿಳಿಸಲು ಸಾಧ್ಯವಾಗಲಿದೆ. ಹಾಗೇನಾದರೂ 5-0 ಕ್ಲೀನ್​ಸ್ವೀಪ್ ಫಲಿತಾಂಶ ಉಭಯ ತಂಡಗಳಿಂದ ದಾಖಲಾದಲ್ಲಿ ತಂಡದ ಅಂಕ 122ಕ್ಕೇರಲಿದೆ. ಭಾರತ 5-0ಯಿಂದ ಆಸ್ಟ್ರೇಲಿಯಾವನ್ನು ಕ್ಲೀನ್​ಸ್ವೀಪ್ ಮಾಡಿದಲ್ಲಿ, ಆಸೀಸ್ ಅಂಕ 113ಕ್ಕೆ ಕುಸಿಯಲಿದ್ದು, 3ನೇ ಸ್ಥಾನಕ್ಕೆ ಇಳಿಯಲಿದೆ. ಇನ್ನೇನಾದರೂ ಭಾರತ ತಂಡ ವೈಟ್​ವಾಷ್ ಅವಮಾನಕ್ಕೆ ತುತ್ತಾದಲ್ಲಿ, ವಿರಾಟ್ ಕೊಹ್ಲಿ ಟೀಮ್ ರೇಟಿಂಗ್ ಪಾಯಿಂಟ್ 112ಕ್ಕೆ ಕುಸಿಯಲಿದೆ.

3-2ರಿಂದ ಸರಣಿ ಗೆದ್ದರೆ ನಂ. 2 ಸ್ಥಾನ: ಆಸ್ಟ್ರೇಲಿಯಾವನ್ನು ಕನಿಷ್ಠ 3-2ರಿಂದ ಮಣಿಸಿದರೂ ಭಾರತ ತಂಡದ ರ‍್ಯಾಂಕಿಂಗ್ ಪ್ರಗತಿ ಕಾಣಲಿದ್ದು, 118 ಅಂಕದೊಂದಿಗೆ 2ನೇ ಸ್ಥಾನಕ್ಕೇರಲಿದೆ. ಇನ್ನೊಂದೆಡೆ ಆಸೀಸ್​ನ ಅಂಕ 116ಕ್ಕೆ ಕುಸಿಯಲಿದೆ. ಇದೇ ಅಂತರದಲ್ಲಿ ಆಸ್ಟ್ರೇಲಿಯಾ ಗೆದ್ದಲ್ಲಿ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಲಾರದು.


ಆಸ್ಟ್ರೇಲಿಯಾ ಸುಲಭ ಗೆಲುವಿನ ಅಭ್ಯಾಸ

ಚೆನ್ನೈ: ಆಸ್ಟ್ರೇಲಿಯಾ ತಂಡ ಸೀಮಿತ ಓವರ್​ಗಳ ಸರಣಿಯ ಭಾರತ ಪ್ರವಾಸವನ್ನು 103 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಏಕೈಕ ಏಕದಿನ ಅಭ್ಯಾಸ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಪ್ರಯಾಸವಿಲ್ಲದೆ ಜಯ ಸಾಧಿಸಿತು.

ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (76 ರನ್, 60 ಎಸೆತ, 4 ಬೌಂಡರಿ, 5 ಸಿಕ್ಸರ್) ಸೇರಿ ನಾಲ್ವರು ಬ್ಯಾಟ್ಸ್​ಮನ್​ಗಳ ಅರ್ಧಶತಕದಿಂದ 7 ವಿಕೆಟ್​ಗೆ 347 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಅಧ್ಯಕ್ಷರ ಇಲೆವೆನ್ ತಂಡ 48.2 ಓವರ್​ಗಳಲ್ಲಿ 244ರನ್​ಗೆ ಆಲೌಟ್ ಆಗಿ ಸೋಲು ಕಂಡಿತು. ಸ್ಪಿನ್ನರ್ ಆಶ್ಟನ್ ಅಗರ್ (44ಕ್ಕೆ 4) ಬೌಲಿಂಗ್​ನಲ್ಲಿ ಗಮನಸೆಳೆದರು.

ಅನನುಭವಿ ಅಧ್ಯಕ್ಷರ ಇಲೆವೆನ್ ತಂಡದ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ (42 ರನ್, 47 ಎಸೆತ, 4 ಬೌಂಡರಿ), ಆರಂಭಿಕ ಶ್ರೀವತ್ಸ ಗೋಸ್ವಾಮಿ (43), ಕುಶಾಂಗ್ ಪಟೇಲ್ ಹಾಗೂ ಅಕ್ಷಯ್ ಕರ್ನೆವರ್ ಮಾತ್ರವೇ 40 ಕ್ಕೂ ಅಧಿಕ ರನ್ ಬಾರಿಸಿದರು. 9ನೇ ವಿಕೆಟ್​ಗೆ ಕುಶಾಂಗ್ ಹಾಗೂ ಅಕ್ಷಯ್ 59 ಎಸೆತಗಳಲ್ಲಿ 66 ರನ್ ಜತೆಯಾಟವಾಡುವ ಮೂಲಕ ಹಾಜರಿದ್ದ 2 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಸೀಸ್ ತಂಡದ ಪರ ಡೇವಿಡ್ ವಾರ್ನರ್ (64ರನ್, 48 ಎಸೆತ, 11 ಬೌಂಡರಿ) ಹಾಗೂ ಸ್ಟೀವನ್ ಸ್ಮಿತ್ (55 ರನ್, 68 ಎಸೆತ, 4 ಬೌಂಡರಿ, 1 ಸಿಕ್ಸರ್) 2ನೇ ವಿಕೆಟ್​ಗೆ 87 ಎಸೆತಗಳಲ್ಲಿ 106 ರನ್ ಜತೆಯಾಟವಾಡಿ ತಂಡ ದೊಡ್ಡ ಮೊತ್ತ ಪೇರಿಸುವಲ್ಲಿ ನೆರವಾದರು. ತಂಡ 29ನೇ ಓವರ್ ವೇಳೆಗೆ 158 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜತೆಯಾದ ಟ್ರಾವಿಸ್ ಹೆಡ್ (65 ರನ್, 63 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಸ್ಟೋಯಿನಿಸ್ 5ನೇ ವಿಕೆಟ್​ಗೆ 70 ಎಸೆತಗಳಲ್ಲಿ 88 ರನ್ ಜತೆಯಾಟವಾಡುವ ಮೂಲಕ ಮೊತ್ತವನ್ನು ಉಬ್ಬಿಸಿದರು. ಆಸ್ಟ್ರೇಲಿಯಾ: 7 ವಿಕೆಟ್​ಗೆ 347 (ವಾರ್ನರ್ 64, ಸ್ಮಿತ್ 55, ಹೆಡ್ 65, ಸ್ಟೋಯಿನಿಸ್ 76, ವಾಷಿಂಗ್ಟನ್ 23ಕ್ಕೆ 2, ಕುಶಾಂಗ್ 58ಕ್ಕೆ 2), ಅಧ್ಯಕ್ಷರ ಇಲೆವೆನ್: 48.2 ಓವರ್​ಗಳಲ್ಲಿ 244 (ಶ್ರೀವತ್ಸ ಗೋಸ್ವಾಮಿ 43, ಮಯಾಂಕ್ 42, ಅಕ್ಷಯ್ 40, ಆಶ್ಟನ್ ಅಗರ್ 44ಕ್ಕೆ 4). -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top