Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಏಕಕಾಲಕ್ಕೆ 15 ಕತ್ತರಿ ಬಳಸಿ ಹೇರ್​ಕಟ್

Thursday, 07.12.2017, 3:01 AM       No Comments

ಕೆಲತಿಂಗಳ ಹಿಂದೆ ಪಾಕಿಸ್ತಾನದ ಸೆಲೂನ್ ಒಂದರಲ್ಲಿ ತಲೆಕೂದಲಿಗೆ ಬೆಂಕಿ ಹಚ್ಚಿ ಕಟ್ಟಿಂಗ್ ಮಾಡುವ ಫೈರ್ ಕಟ್ಟಿಂಗ್ ವಿಧಾನ ಬಹಳ ಜನಪ್ರಿಯತೆ ಗಳಿಸಿತ್ತು. ಅದಾದ ಸ್ವಲ್ಪ ಸಮಯದಲ್ಲೇ ಬೆಂಗಳೂರಿಗೂ ಫೈರ್ ಕಟ್ಟಿಂಗ್ ಸ್ಟೈಲ್ ಕಾಲಿಟ್ಟಿತ್ತು. ಇದೀಗ ಪಾಕಿಸ್ತಾನದ ಲಾಹೋರ್​ನ ಪುಟ್ಟ ಸೆಲೂನ್ ಮಾಲೀಕ, ಹೇರ್ ಕಟ್ಟಿಂಗ್ ಮಾಡಲು ಏಕಕಾಲಕ್ಕೆ 15 ಕತ್ತರಿ ಬಳಸಿ ತನ್ನ ಕೌಶಲ ಪ್ರದರ್ಶಿಸಿದ್ದಾನೆ. ಈತ 15 ಕತ್ತರಿ ಬಳಸಿ ಕಟ್ಟಿಂಗ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಆನ್​ಲೈನ್​ನಲ್ಲಿ ವೈರಲ್ ಆಗಿದೆ.

ವಿಶಿಷ್ಟ ವಿಧಾನದ ಹೇರ್ ಕಟ್ಟಿಂಗ್ ಜನಪ್ರಿಯವಾಗುತ್ತಲೇ, ಕ್ಷೌರಿಕ ಸಾದಿಕ್ ಅಲಿಯನ್ನು ಹುಡುಕಿಕೊಂಡು ಗ್ರಾಹಕರು ಆತನ ಅಂಗಡಿಗೆ ಬರುತ್ತಿದ್ದಾರಂತೆ.

ಐದು ವರ್ಷಗಳಿಂದ ಸಾದಿಕ್ ಈ ನೂತನ ವಿಧಾನವನ್ನು ಪರಿಚಯಿಸಲು ಶ್ರಮಿಸಿದ್ದಾನೆ. ಒಂದೊಂದಾಗಿ ಕತ್ತರಿಗಳ ಸಂಖ್ಯೆ ಹೆಚ್ಚಿಸುತ್ತಾ, ಪ್ರಸ್ತುತ ಒಮ್ಮೆಗೆ 15 ಕತ್ತರಿ ಹಿಡಿಯಲು ಸಾಧ್ಯವಾಗುತ್ತಿದೆಯಂತೆ.

ಅಲಿ ಜನಪ್ರಿಯತೆ ಹೆಚ್ಚಾಗುತ್ತಲೇ, ಗುಣಮಟ್ಟ ಮತ್ತು ಕೌಶಲ ಕಾಯ್ದುಕೊಳ್ಳುವ ಸಲುವಾಗಿ ದಿನಕ್ಕೆ 20 ಜನರಿಗೆ ಮಾತ್ರ ಹೇರ್​ಕಟ್ ಮಾಡುತ್ತಾನೆ. ಅದಕ್ಕಿಂತ ಹೆಚ್ಚು ಜನರ ಹೇರ್​ಕಟ್​ಗೆ ಅಲಿ ಒಪ್ಪುವುದಿಲ್ಲ. ಹೀಗಾಗಿ ಈತನ ಅಂಗಡಿಯಲ್ಲಿ ಮುಂಗಡ ಬುಕಿಂಗ್ ಕೂಡ ಆರಂಭವಾಗಿದೆ. ಏಕಕಾಲಕ್ಕೆ 16 ಕತ್ತರಿ ಹಿಡಿದು ಹೇರ್​ಕಟ್ ಮಾಡಿ ಗಿನ್ನೆಸ್ ದಾಖಲೆ ನಿರ್ವಿುಸುವ ಅಭಿಲಾಷೆ ಸಾದಿಕ್ ಅಲಿಯದ್ದು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top