Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಎ ಪ್ಲಸ್ ಸಂಗೀತಾ!

Monday, 27.08.2018, 3:00 AM       No Comments

ಬೆಂಗಳೂರು: ನಟಿ ಸಂಗೀತಾಗೆ ಅತಿ ಹೆಚ್ಚು ಖ್ಯಾತಿ ತಂದುಕೊಟ್ಟದ್ದು ‘ಹರ ಹರ ಮಹಾದೇವ’ ಧಾರಾವಾಹಿಯ ಸತಿ ಪಾತ್ರ. ಆ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಸಾಕಷ್ಟು ಹತ್ತಿರವಾಗಿದ್ದ ಈ ನಟಿ ಇದೀಗ ಬೆಳ್ಳಿತೆರೆಗೆ ಪದಾರ್ಪಣೆ ಮಾಡುವ ಕಾತರದಲ್ಲಿದ್ದಾರೆ. ವಿಜಯ್ ಸೂರ್ಯ ನಿರ್ದೇಶಿಸಿರುವ ‘ಎ+’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಸದ್ದಿಲ್ಲದೆ, ಆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗಾಗಲೇ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡು, ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಪಡೆದು ಅದೃಷ್ಟ ಪರೀಕ್ಷೆ ಮಾಡಿಕೊಂಡ ಕಲಾವಿದರಿಗೇನು ಕೊರತೆ ಇಲ್ಲ. ಸದ್ಯ ಸಂಗೀತಾ ಕೂಡ ಅದೇ ಹಾದಿಯಲ್ಲಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆಯ ಪಾತ್ರ ಗಿಟ್ಟಿಸಿಕೊಂಡ ಖುಷಿಯೂ ಅವರಿಗೆ ಸಿಕ್ಕಿದೆ. ‘ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಈ ಚಿತ್ರದ ಅವಕಾಶ ಸಿಕ್ಕಿತು. ಬೆಳ್ಳಿತೆರೆ ಪದಾರ್ಪಣೆಗೆ ಈ ಕಥೆ ಸೂಕ್ತ ಎಂದು ಆಯ್ದುಕೊಂಡೆ. ಅಂದುಕೊಂಡಂತೆ ಸಿನಿಮಾ ಮೂಡಿಬಂದಿದೆ. ನನ್ನದಿಲ್ಲಿ ಪ್ರಬುದ್ಧ ಹುಡುಗಿಯ ಪಾತ್ರ’ ಎಂದು ಹೇಳಿಕೊಳ್ಳುತ್ತಾರೆ ಸಂಗೀತಾ. ಚಿತ್ರದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿರುವ ಸಂಗೀತಾ, ಪಾತ್ರ ಪೋಷಣೆಗಾಗಿ ಹೆಚ್ಚು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಗಂಟೆಗಟ್ಟಲೇ ರಿಹರ್ಸಲ್ ಮಾಡಿಕೊಂಡೆ ಸೆಟ್​ಗೆ ಆಗಮಿಸುತ್ತಿದ್ದರಂತೆ. ‘ಮೊದಲ ಸಿನಿಮಾ ಆಗಿದ್ದರಿಂದ ನಟನೆ ವಿಚಾರದಲ್ಲಿ ನನ್ನಿಂದ ಯಾವ ಸಮಸ್ಯೆ ಉಂಟಾಗಬಾರದು ಎಂಬುದನ್ನು ತಲೆಯಲ್ಲಿಟ್ಟುಕೊಂಡು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದೆ. ಹಾಗೆ ಮಾಡಿದ್ದಕ್ಕೆ 2-3 ನಿಮಿಷ ಉದ್ದದ ಸಂಭಾಷಣೆಗಳನ್ನು ಯಾವ ಅಳುಕಿಲ್ಲದೆ, ಕ್ಯಾಮರಾ ಎದುರು ಒಪ್ಪಿಸುತ್ತಿದ್ದೆ. ಹಾಗೆ ಮಾಡಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಅನಿಸಿದ್ದು ಉಂಟು’ ಎಂಬುದು ‘ಸತಿ’ ಸಂಗೀತಾ ಮಾತು. 1998ರಲ್ಲಿ ‘ರಿಯಲ್ ಸ್ಟಾರ್’ ‘ಉಪೇಂದ್ರ’ ನಟಿಸಿ ನಿರ್ದೇಶನ ಮಾಡಿದ್ದ ‘ಎ’ ಚಿತ್ರದ ಶೀರ್ಷಿಕೆಯನ್ನೇ ಹೋಲುವಂತೆ, ‘ಎ+’ ವಿನ್ಯಾಸ ಮಾಡಿದ್ದಾರೆ. ಆ ಕಾರಣಕ್ಕೂ ಸಿನಿಮಾದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ರಕ್ಷಿತ್ ಶೆಟ್ಟಿ ನಾಯಕತ್ವದ ‘777 ಚಾರ್ಲಿ’ ಚಿತ್ರಕ್ಕೂ ಸಂಗೀತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗಿವೆ.

Leave a Reply

Your email address will not be published. Required fields are marked *

Back To Top