Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಎಲೆಕ್ಯಾತನಹಳ್ಳಿ-ಮಣ್ಣೆ ರಸ್ತೆ ನನೆಗುದಿಗೆ

Friday, 13.07.2018, 3:11 AM       No Comments

ತ್ಯಾಮಗೊಂಡ್ಲು: ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 2017ರ ಜುಲೈನಲ್ಲಿ 1.98 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಎಲೆಕ್ಯಾತನಹಳ್ಳಿಯಿಂದ ಕನ್ನುವಳ್ಳಿ ಮೂಲಕ ಮಣ್ಣೆ ಗ್ರಾಮ ಸಂರ್ಪಸುವ 2.85 ಕಿಮೀ ಉದ್ದದ ಡಾಂಬರು ರಸ್ತೆ ಕಾಮಗಾರಿ ಮುಗಿಯದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಬಹಳ ವರ್ಷಗಳಿಂದ ರಸ್ತೆಯಿಲ್ಲದೆ ಪರಿತಪಿಸುತ್ತಿದ್ದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಪ್ರಾರಂಭವಾದಾಗ ಗ್ರಾಮಸ್ಥರೆಲ್ಲ ಖುಷಿ ಪಟ್ಟಿದ್ದರಾದರೂ ವರ್ಷವಾದರೂ ನಿರ್ಮಾಣ ಪೂರ್ಣಗೊಳ್ಳದಿರುವುದು ಅಧಿಕಾರಿಗಳ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿದೆ

ಕಾಮಗಾರಿ ಹೊಣೆ ಹೊತ್ತ ಗುತ್ತಿಗೆದಾರ ಗ್ರಾಮದ ಸರಹದ್ದಿನವರೆಗೆ ಕಾಂಕ್ರೀಟ್ ರಸ್ತೆ ನಿರ್ವಿುಸಿ ಬಳಿಕ ಹೊರಭಾಗದ ರಸ್ತೆಗೆ ಜಲ್ಲಿ ಕೂಡ ಹಾಕದೆ ಮಣ್ಣು ಸುರಿಸಿದ್ದಾನೆ. ಇದರಿಂದಾಗಿ ರಸ್ತೆ ಅಧ್ವಾನಗೊಂಡಿದೆ. ಮಳೆ ಬಂದಾಗ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಕಷ್ಟ ಪಡುವಂತಾಗಿದೆ.

ಕಾಮಗಾರಿ ಮೇಲೆ ನಿಗಾ ಇಟ್ಟು ಗುಣಮಟ್ಟ ಕಾಪಾಡಲು ಎಚ್ಚರ ವಹಿಸಬೇಕಿದ್ದ ಇಲಾಖೆ ಇಂಜಿನಿಯರ್​ಗಳು ಈ ಬಗ್ಗೆ ಗಮನಹರಿಸಿಲ್ಲ. 2018 ಜುಲೈನಲ್ಲಿ ಮುಗಿಯಬೇಕಿದ್ದ ಕೆಲಸ ನನೆಗುದಿಗೆ ಬಿದ್ದಿರುವುದು ವಿಪರ್ಯಾಸವೇ ಸರಿ.

 

ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಗ್ರಾಮಸ್ಥರ ದೂರಿನ ಮೇಲೆ ಮತ್ತು ಸಮಯಕ್ಕೆ ಕಾಮಗಾರಿ ಮುಗಿಸಿಲ್ಲ ಎಂಬ ಕಾರಣಕ್ಕೆ ಮರು ಟೆಂಡರ್ ಕರೆಯಲು ಈಗಾಗಲೇ ಕರ್ನಾಟಕ ಗ್ರಾಮಾಂತರ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಇಂಜಿನಿಯರ್​ಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದೇನೆ.

| ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ

 

ಮಳೆಗಾಲದಲ್ಲಿ ಗ್ರಾಮಸ್ಥರು ರಸ್ತೆ ಸಂಚಾರಕ್ಕೆ ತೊಂದರೆ ಅನುಭವಿಸುವುದನ್ನು ನೋಡಲಾಗದೆ ಶಾಸಕರಿಗೆ ಒತ್ತಾಯ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕೆಲಸ ಮುಗಿದಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

| ನಾಗಭೂಷಣ್, ತಾಪಂ ಸದಸ್ಯ

 

ಗುತ್ತಿಗೆದಾರ ಗುಣಮಟ್ಟ ಕಾಪಾಡಿಕೊಂಡಿಲ್ಲ ಮತ್ತು ನಿಗದಿತ ಸಮಯಕ್ಕೆ ಕಾಮಗಾರಿ ಮುಗಿದಿಲ್ಲ ಎಂದು ನೋಟಿಸ್ ನೀಡಲಾಗಿದೆ. ಅದಕ್ಕೂ ಗುತ್ತಿಗೆದಾರ ಮಣಿಯಲಿಲ್ಲ ಎಂದರೆ ಶಾಸಕರ ಸೂಚನೆ ಮೇರೆಗೆ ಕಾನೂನಿನ ಪ್ರಕಾರ ಮರು ಟೆಂಡರ್ ಕರೆಯಲಾಗುವುದು.

| ವೆಂಕಟೇಶ್ ಪ್ರಭು, ಏಇಇ ಕೆಆರ್​ಆರ್​ಡಿಎ

 

ಕಾಮಗಾರಿ ಆರಂಭವಾಗಿ ವರ್ಷವಾದರೂ ಮುಗಿದಿಲ್ಲ. ಇಂದರಿಂದ ಅಧ್ವಾನಗೊಂಡ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ಮಾಡಿರುವ ಕೆಲಸದಲ್ಲೂ ಗುಣಮಟ್ಟ ಇಲ್ಲ. ಚರಂಡಿ ಕಾಮಗಾರಿ ಕಳೆಪೆಯಾಗಿದೆ. ಕಾಮಗಾರಿ ಪ್ರಾರಂಭವಾಗದಿದ್ದರೆ ಮತ್ತೊಮ್ಮೆ ಹೋರಾಟ ಮಾಡುತ್ತೇವೆ.

| ಪಿ.ನಂಜೇಗೌಡ, ಗ್ರಾಮಸ್ಥ

Leave a Reply

Your email address will not be published. Required fields are marked *

Back To Top