Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಎನ್​ಸಿಪಿಗೆ ಉಂಟು ದಾವೂದ್ ನಂಟು!

Wednesday, 20.09.2017, 3:04 AM       No Comments

ಮುಂಬೈ: ಶರದ್ ಪವಾರ್ ನೇತೃತ್ವದ ಎನ್​ಸಿಪಿ ಮುಖಂಡರೂ ಸೇರಿದಂತೆ ಪ್ರಮುಖ ರಾಜಕಾರಣಿಗಳ ಜತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟು ಹೊಂದಿದ್ದಾನೆಂಬ ಮಾಹಿತಿ ಸ್ಪೋಟಗೊಂಡಿದೆ. ಹಫ್ತಾ ವಸೂಲಿ, ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಈ ವಿಚಾರವನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆಂದು ತಿಳಿದು ಬಂದಿದೆ.

ದಾವೂದ್ ಹೆಸರಿನಲ್ಲಿ ದೇಶದ ವಿವಿಧೆಡೆ ಬೆದರಿಕೆ, ಹಣವಸೂಲಿ ಮಾಡುತ್ತಿದ್ದ ಇಕ್ಬಾಲ್ ಜತೆ ಮಹಾರಾಷ್ಟ್ರದ ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್​ಸಿಪಿ) ಕೆಲ ಕಾಪೋರೇಟರ್​ಗಳು, ಸ್ಥಳೀಯ ರಾಜಕಾರಣಿಗಳು ನಂಟು ಹೊಂದಿದ್ದರು ಎಂಬ ಅಂಶವನ್ನು ಸುದ್ದಿವಾಹಿನಿಯೊಂದು ಬಹಿರಂಗಪಡಿಸಿದೆ. ಇಕ್ಬಾಲ್ ಜತೆ ನಂಟು ಹೊಂದಿರುವ ಇಬ್ಬರು ಎನ್​ಸಿಪಿ ಕಾಪೋರೇಟರ್​ಗಳ ಪೈಕಿ ಓರ್ವ ಪಕ್ಷದ ಮುಖ್ಯಸ್ಥ ಶರದ್ ಪವಾರ್​ಗೆ ಆಪ್ತ ಎನ್ನಲಾಗುತ್ತಿದೆ. ಇವರು ದಾವೂದ್ ಇಬ್ರಾಹಿಂ ಜತೆಗೂ ಸಂಪರ್ಕ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕಿಸಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಎನ್​ಸಿಪಿ ಸಹಿತ ಎರಡು ಪಕ್ಷದ ಸ್ಥಳೀಯ ನಾಯಕರು ತನ್ನ ಸಂಪರ್ಕದಲ್ಲಿದ್ದಾರೆಂಬುದನ್ನು ಒಪ್ಪಿಕೊಂಡಿರುವ ಇಕ್ಬಾಲ್, ಹಣ ವಸೂಲಿ ಹಾಗೂ ಬೆದರಿಕೆ ರ್ಯಾಕೆಟ್​ನ ಭಾಗವಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ಶಂಕಿತ ಎನ್​ಸಿಪಿ ನಾಯಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಆದರೆ ಆರೋಪವನ್ನು ತಳ್ಳಿಹಾಕಿರುವ ಎನ್​ಸಿಪಿ, ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಯತ್ನವಾಗಿದೆ ಎಂದಿದೆ.

30 ಲಕ್ಷ ರೂ., ನಾಲ್ಕು ಫ್ಲ್ಯಾಟ್! : ಥಾಣೆಯ ಪ್ರಸಿದ್ಧ ಬಿಲ್ಡರ್ ಜಗ್ಗು ಖೆತ್ವಾನಿ ಎಂಬುವರನ್ನು ಇಕ್ಬಾಲ್ ಹಾಗೂ ಸಹಚರರು 2013ರಿಂದ ಬೆದರಿಸುತ್ತಿದ್ದರು. ಈವರೆಗೆ 30 ಲಕ್ಷ ರೂ. ಹಾಗೂ 4 ಫ್ಲ್ಯಾಟ್​ಗಳನ್ನು ಬ್ಲ್ಯಾಕ್​ವೆುೕಲ್ ಮಾಡಿ ಪಡೆದುಕೊಂಡಿದ್ದರು. ನೋಟು ನಿಷೇಧ ಬಳಿಕ ಜಗ್ಗು ಖೆತ್ವಾನಿ ಅಪಾರ ನಷ್ಟ ಅನುಭವಿಸಿದ್ದರು. ಆದರೆ, ಇಕ್ಬಾಲ್ ಮತ್ತಷ್ಟು ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಬಳಿಕ ಜಗ್ಗು ಖೆತ್ವಾನಿ ಪೊಲೀಸರಿಗೆ ದೂರು ನೀಡಿದ್ದರು.

ದಾವೂದ್ ವಿರುದ್ಧವೂ ಪ್ರಕರಣ?: ಬೆದರಿಕೆ ಪ್ರಕರಣದಲ್ಲಿ ದಾವೂದ್ ಸಂಪರ್ಕ ಇರುವುದು ಕಂಡುಬಂದರೆ ಆತನ ವಿರುದ್ಧವೂ ಪ್ರಕರಣ ದಾಖಲಿಸ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಪಾರಾಗಿದ್ದ: ದುಬೈನಲ್ಲಿ ನೆಲೆಸಿದ್ದ ಇಕ್ಬಾಲ್, ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಕಾರಣ 2003ರಲ್ಲಿ ಅಲ್ಲಿನ ಸರ್ಕಾರ ಗಡಿಪಾರು ಮಾಡಿತ್ತು. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಇಕ್ಬಾಲ್, ಭಾರತದಲ್ಲಿ

ದಾವೂದ್​ನ ರಿಯಲ್​ಎಸ್ಟೇಟ್ ವ್ಯವಹಾರ ನೋಡಿ ಕೊಳ್ಳುತ್ತಿದ್ದ ಎನ್ನಲಾಗಿದೆ. ಭೂ ಒತ್ತುವರಿ ಹಾಗೂ ಅಕ್ರಮ ಕಟ್ಟಡ ನಿರ್ಮಾಣ ಪ್ರಕರಣ ಸಂಬಂಧ ಇಕ್ಬಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. 2007ರಲ್ಲಿ ಮುಂಬೈ ಕೋರ್ಟ್ ಆರೋಪ ವಜಾ ಮಾಡಿತ್ತು.

1993ರಲ್ಲೇ ವರದಿ: ರಾಜಕಾರಣಿಗಳು ಹಾಗೂ ಅಪರಾಧಿಗಳ ನಡುವಿನ ನಂಟಿಗೆ ಸಂಬಂಧಿಸಿದಂತೆ 1993ರಲ್ಲಿ ಕೇಂದ್ರ ಗೃಹ ಸಚಿವಾಲಯ ಅಂದಿನ ಗೃಹ ಕಾರ್ಯದರ್ಶಿ ಎನ್.ಎನ್. ವೋಹ್ರಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ದಾವೂದ್ ಸಹಿತ ಹಲವು ಪಾತಕಿಗಳು ರಾಜಕೀಯ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಶರಣಾಗತಿ ಒಪ್ಪದ ಪವಾರ್

ಭಾರತದ ತನಿಖಾ ಸಂಸ್ಥೆಗಳಿಗೆ ಶರಣಾಗುವುದಾಗಿ ವಕೀಲ ರಾಮ್ ಜೇಠ್ಮಲಾನಿ ಮೂಲಕ ದಾವೂದ್ ಇಬ್ರಾಹಿಂ ತನ್ನನ್ನು ಸಂರ್ಪಸಿದ್ದನೆಂದು ಎನ್​ಸಿಪಿ ಮುಖಂಡ ಶರದ್ ಪವಾರ್ 2015ರ ಜುಲೈನಲ್ಲಿ ಹೇಳಿದ್ದರು. ದಾವೂದ್ ಶರಣಾದರೂ ಜೈಲಿನಲ್ಲಿಡುವ ಸ್ಥಿತಿ ಇರಲಿಲ್ಲ. ಅದಕ್ಕೆ ಬದಲಾಗಿ ಆತ ಮನೆಯಲ್ಲಿ ಜೀವನ ನಡೆಸಲು ಅವಕಾಶ ನೀಡಬೇಕಿತ್ತು. ಆದ್ದರಿಂದ ದೇಶದ ಕಾನೂನಿನಂತೆ ನಡೆದುಕೊಳ್ಳಬೇಕೆಂಬುದನ್ನು ದಾವೂದ್​ಗೆ ತಿಳಿಸಿರುವುದಾಗಿ ಪವಾರ್ ಹೇಳಿದ್ದರು.

ಮೂವತ್ತು ಉದ್ಯಮಿಗಳಿಗೆ ಜೀವ ಬೆದರಿಕೆ

ಇಕ್ಬಾಲ್ ಹಾಗೂ ಸಹಚರರು ಸುಮಾರು 30 ಉದ್ಯಮಿಗಳಿಗೆ ಬೆದರಿಕೆ ಕರೆಗಳನ್ನು ಮಾಡಿ ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಲವು ಉದ್ಯಮಿಗಳು ಅಘೊಷಿತ ಮೊತ್ತವನ್ನು ಪಾವತಿಸಿದ್ದರು. ಬಿಹಾರ ಮತ್ತಿತರ ಕಡೆಗಳಿಂದ ಇಕ್ಬಾಲ್ ಶಾರ್ಪ್ ಶೂಟರ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಎಂದು ಥಾಣೆಯ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮತ್ತಿಬ್ಬರ ಬಂಧನ

ಇಕ್ಬಾಲ್​ನ ಸಹಚರ ಮುಮ್ತಾಜ್ ಶೇಖ್ ಹಾಗೂ ಇಸ್ರಾರ್ ಅಲಿ ಜಮೀಲ್ ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇಕ್ಬಾಲ್ ಹಾಗೂ ಸಹಚರರನ್ನು ಮುಂಬೈ ಕೋರ್ಟ್​ಗೆ ಹಾಜರುಪಡಿಸ ಲಾಗಿದ್ದು, 8 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.

 

Leave a Reply

Your email address will not be published. Required fields are marked *

Back To Top