Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ಎಡಕಲ್ಲು ಗುಡ್ಡ ಏರಿಬಂದ ಸ್ವಾತಿ

Monday, 16.04.2018, 3:03 AM       No Comments

ಬೆಂಗಳೂರು: ಧಾರಾವಾಹಿಗಳಲ್ಲಿ ಗುರುತಿಸಿಕೊಂಡು ಸಿನಿಮಾ ಕಡೆ ವಾಲುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಒಬ್ಬರಾದ ಮೇಲೊಬ್ಬರು ಚಿತ್ರರಂಗದತ್ತ ಬರುತ್ತಲೇ ಇದ್ದಾರೆ. ಆ ಸಾಲಿಗೀಗ ಹೊಸ ಸೇರ್ಪಡೆ ಸ್ವಾತಿ ಶರ್ವ. ಹೌದು, ಈಗಾಗಲೇ ‘ಮನೆದೇವು›’ ಧಾರಾವಾಹಿಯಲ್ಲಿ ಸಾನ್ವಿ ಎಂಬ ಪಾತ್ರ ಮಾಡಿದ್ದ ಸ್ವಾತಿ, ಇದೀಗ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ಬಿಜಿಯಾಗಿದ್ದುಕೊಂಡು, ಹೊಸ ಹೊಸ ಅವಕಾಶಗಳನ್ನೂ ಪಡೆದುಕೊಳ್ಳುತ್ತಿದ್ದಾರೆ.

ಅಂದಹಾಗೆ, ಧಾರಾವಾಹಿ ಬಳಿಕ ‘ರಾಮರಾಜ್ಯ’ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಸ್ವಾತಿ ಬಣ್ಣ ಹಚ್ಚಿದ್ದರು. ಆ ಪಾತ್ರ ಇಷ್ಟವಾಗಿ ನಿರ್ದೇಶಕ ವಿವಿನ್ ಸೂರ್ಯ, ‘ಎಡಕಲ್ಲು..’ ಚಿತ್ರದ ಕಥೆ ಹೇಳಿದ್ದರಂತೆ. ತಾವಂದುಕೊಂಡ ಪಾತ್ರ ಸಿಕ್ಕಿದ್ದರಿಂದ ಏನನ್ನೂ ಯೋಚಿಸದೆ ಸಿನಿಮಾ ಒಪ್ಪಿಕೊಂಡಿದ್ದರಂತೆ. ‘ನನಗೆ ಮಹಿಳಾಪ್ರಧಾನ ಪಾತ್ರಗಳೆಂದರೆ ಬಲು ಇಷ್ಟ. ಆ ರೀತಿಯ ಪಾತ್ರಗಳು ಸಿಕ್ಕರೆ ಮೊದಲು ಓಕೆ ಎನ್ನಬೇಕು ಎಂಬ ಮನಸ್ಥಿತಿಯಲ್ಲಿದ್ದೆ. ಆಗ ಸಿಕ್ಕಿದ್ದೇ ‘ಎಡಕಲ್ಲು..’ ಚಿತ್ರ. ಮೊದಲ ಸಿನಿಮಾದಲ್ಲಿಯೇ ನಾಯಕಿಯಾಗಿ ಮಹಿಳಾ ಪ್ರಧಾನ ಚಿತ್ರದ ಅವಕಾಶ ಸಿಕ್ಕಿತು. ತುಂಬ ಖುಷಿಯಿಂದಲೇ ಸಿನಿಮಾ ಮುಗಿಸಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸ್ವಾತಿ.

ಚಿತ್ರದಲ್ಲಿ ತಾವು ನಟಿಸುತ್ತಿರುವ ಪಾತ್ರದ ಬಗ್ಗೆ ಹೇಳಿಕೊಳ್ಳುವ ಅವರು, ‘ಶ್ರೀಮಂತ ಕುಟುಂಬದ ಹೆಣ್ಣುಮಗಳ ಪಾತ್ರ ನನ್ನದು. ತೀರಾ ಮುಗ್ಧೆ. ಮನೆಯಲ್ಲಿ ತಂದೆ-ತಾಯಿಯ ಪ್ರೀತಿ ದಕ್ಕದಿದ್ದಾಗ ಯಾವ ರೀತಿಯ ಪರಿಸ್ಥಿತಿ ಇರುತ್ತದೆಯೋ ಆ ಥರದಲ್ಲಿ ಸಿನಿಮಾ ಸಾಗಲಿದೆ. ಪ್ರೀತಿ ಪಡೆಯಲು ಏನೆಲ್ಲ ಮಾಡುತ್ತಾಳೆ ಎಂಬುದೇ ಸಿನಿಮಾ. ಸಂಬಂಧಗಳ ಹಳಿಯ ಮೇಲೆಯೇ ಚಿತ್ರ ನಿರ್ವಣವಾಗಿದೆ’ ಎಂದು ಮಾಹಿತಿ ನೀಡುತ್ತಾರೆ. ಕಿರುತೆರೆಗೂ ಬೆಳ್ಳಿತೆರೆಗೂ ಸಾಕಷ್ಟು ವ್ಯತ್ಯಾಸವಿದೆ. ಈ ವಿಚಾರದಲ್ಲಿ ಸ್ವಾತಿ ಅವರದ್ದು ಭಿನ್ನ ಅನಿಸಿಕೆ. ‘ಕಲಾವಿದೆಗೆ ಸಿನಿಮಾ ಆದರೇನು, ಧಾರಾವಾಹಿ ಆದರೇನು ಎರಡೂ ಕಡೆಗಳಲ್ಲಿ ನಟಿಸುವುದೇ ನಮ್ಮ ಧರ್ಮ…

ಇದನ್ನು ಹೊರತುಪಡಿಸಿದರೆ, ಸಿನಿಮಾದಲ್ಲಿ ಇಡೀ ಕಥೆ ಗೊತ್ತಿರುತ್ತದೆ. ಆದರೆ ಸೀರಿಯಲ್​ಗಳಲ್ಲಿ ಹಾಗಲ್ಲ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಕಥೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ’ ಎಂಬುದು ಸ್ವಾತಿ ಮಾತು.

ಹಿರಿಯ ನಟರಾದ ದತ್ತಣ್ಣ, ಶ್ರೀನಾಥ್, ಚಂದ್ರಶೇಖರ್, ಭಾರತಿ ಸೇರಿ ಹತ್ತಾರು ಕಲಾವಿದರ ಜತೆಗೆ ಸ್ವಾತಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲಿ ಅಂಥ ಅವಕಾಶ ಸಿಕ್ಕಿದ್ದಕ್ಕೆ ಅದೃಷ್ಟವಂತೆ ಎಂಬ ಭಾವ ಸಹ ಅವರಿಗೆ ಮೂಡಿದೆಯಂತೆ. ಶೂಟಿಂಗ್ ಸೆಟ್​ನಲ್ಲಿ ಹಿರಿಯ ನಟರೊಂದಿಗೆ ನಟಿಸುವುದು ಹೇಗಪ್ಪಾ? ಪದೇಪದೆ ರಿ-ಟೇಕ್ ತೆಗೆದುಕೊಂಡರೆ ಅವರೆಲ್ಲಿ ಬೈತಾರೆ ಎಂಬ ಅಳುಕಿತ್ತಂತೆ ಸ್ವಾತಿಗೆ. ಆದರೆ, ಮೊದಲ ದಿನದ ಶೂಟಿಂಗ್​ನಲ್ಲಿಯೇ ಹಿರಿಯ ಕಲಾವಿದರ ಸಹಕಾರ ಸಿಕ್ಕಿದ್ದರಿಂದ ಶೂಟಿಂಗ್ ಮುಗಿದಿದ್ದೇ ಗೊತ್ತಿಲ್ಲವಂತೆ. ಸದ್ಯ ದಿಗಂತ್ ಜತೆಗೆ ಫಾರ್ಚೂನರ್ ಸಿನಿಮಾದಲ್ಲೂ ಸ್ವಾತಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಂದಲೂ ಸಿನಿಮಾ ಅವಕಾಶ ಅವರನ್ನು ಅರಸಿಕೊಂಡು ಬರುತ್ತಿವೆಯಂತೆ.

ಗಟ್ಟಿ ಕಥೆ ಇರುವ, ನೆನಪಿಟ್ಟುಕೊಳ್ಳುವಂಥ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಇಡೀ ಕುಟುಂಬ ಕುಳಿತು ನೋಡಿದರೂ ಎಲ್ಲಿಯೂ ಮುಜುಗರ ಅನಿಸದ ರೀತಿಯ ಸಿನಿಮಾ ಮಾಡಬೇಕೆಂಬ ಆಸೆ ನನ್ನದು.

| ಸ್ವಾತಿ ಶರ್ಮಾ ನಟಿ

Leave a Reply

Your email address will not be published. Required fields are marked *

Back To Top