Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಎಚ್-1ಬಿ ವೀಸಾ ಭೀತಿ ಇನ್ನಿಲ್ಲ

Wednesday, 10.01.2018, 3:02 AM       No Comments

ವಾಷಿಂಗ್ಟನ್: ಭಾರತೀಯರು ಅಮೆರಿಕದಲ್ಲಿ ನೆಲೆಸಲು ಆಸರೆಯಾಗಿರುವ ಎಚ್-1ಬಿ ವೀಸಾ ನೀತಿಯನ್ನು ಇನ್ನಷ್ಟು ಕಠಿಣಗೊಳಿಸುವ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಆಡಳಿತ ಕೈಬಿಟ್ಟಿದೆ. ಅಮೆರಿಕದಲ್ಲಿ ಐಟಿ ಸಹಿತ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 5.25 ಲಕ್ಷ ಭಾರತೀಯರ ಆತಂಕ ದೂರವಾಗಿದೆ. ಆರು ವರ್ಷಕ್ಕಿಂತ ಹೆಚ್ಚು ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಯಾವುದೇ ನಿರ್ಬಂಧ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಅಮೆರಿಕದ ಕಾಯಂ ಪೌರತ್ವ(ಗ್ರೀನ್ ಕಾರ್ಡ್)ಕ್ಕೆ ಎದುರು ನೋಡುತ್ತಿರುವವರಿಗೆ ನಿರ್ಬಂಧ ಹೇರುವ ಚಿಂತನೆ ನಡೆದಿಲ್ಲ. ಎಚ್-1ಬಿ ವೀಸಾ ಹೊಂದಿರುವವರನ್ನು ಅಮೆರಿಕದಿಂದ ಹೊರದೂಡುವ ಪ್ರಶ್ನೆಯೇ ಇಲ್ಲ ಎಂದು ನಾಗರಿಕ ಪೌರತ್ವ ಇಲಾಖೆ ವಕ್ತಾರರು ತಿಳಿಸಿದ್ದಾರೆ.

‘ಅಮೆರಿಕನ್ ಉತ್ಪನ್ನ ಖರೀದಿಸಿ, ಅಮೆರಿಕನ್​ಗೆ ನೇಮಿಸಿಕೊಳ್ಳಿ’ ಎಂಬ ಅಧಿಸೂಚನೆ ಅನ್ವಯ ಉದ್ಯೋಗ ಆಧಾರಿತ ವೀಸಾ ಯೋಜನೆಗಳ ಪರಿಶೀಲನೆ ನಡೆಯುತ್ತಿರುವುದು ನಿಜ. ಕಟ್ಟುನಿಟ್ಟಾದ ವಲಸೆ ನಿಯಮ ರೂಪಿಸಲಾಗುತ್ತಿದೆ. ಎಚ್-1ಬಿ ವೀಸಾಗೆ ನಿರ್ಬಂಧ ಮೂಲಕ ಸ್ವದೇಶಕ್ಕೆ ಕಳಿಸುವ ಪ್ರಸ್ತಾವನೆ ಇಲ್ಲ.

| ಜೊನಾಥನ್ ವಿಥಿಂಗ್ಟನ್ ಮಾಧ್ಯಮ ವಕ್ತಾರ

 

# 7.5 ಲಕ್ಷ ಎಚ್-1ಬಿ ವೀಸಾ ಮೂಲಕ ಅಮೆರಿಕದಲ್ಲಿ ಪ್ರಸ್ತುತ ನೆಲೆಸಿರುವ ವಿದೇಶಿಗರು

# ಶೇ. 75 ಎಚ್-1ಬಿ ವೀಸಾ ಹೊಂದಿರುವ ಐಟಿ ಕಂಪನಿಗಳಲ್ಲಿನ ಭಾರತೀಯ ನೌಕರರು

# 85000 ಪ್ರತಿ ವರ್ಷ ನೀಡುವ ವಲಸೇತರ ಎಚ್-1ಬಿ ವೀಸಾ

# 20000 ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಅಧ್ಯಯನಕ್ಕೆ ಬರುವ ವಿದೇಶಿಗರಿಗೆ ಮೀಸಲು

ಆತಂಕ ಸೃಷ್ಟಿಯಾಗಿದ್ದು ಹೇಗೆ ?

ವೀಸಾ ನೀಡುವ ಉಸ್ತುವಾರಿ ಹೊತ್ತಿರುವ ಅಮೆರಿಕ ಹೋಮ್ ಲ್ಯಾಂಡ್ ಸೆಕ್ಯೂರಿಟಿ (ಅಮೆರಿಕ ಗೃಹ ಸಚಿವಾಲಯ) ಇಲಾಖೆಯ ಜ್ಞಾಪನಪತ್ರವೊಂದು ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಗ್ರೀನ್ ಕಾರ್ಡ್​ಗಾಗಿ ಸ್ವೀಕೃತವಾದ ಅರ್ಜಿಗಳಿಗೆ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಅವಕಾಶವಿಲ್ಲ ಎಂದು ಪತ್ರದ ಸಾರಾಂಶವಾಗಿತ್ತು. ಭಯೋತ್ಪಾದಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್, ವಲಸಿಗರ ನಿಯಂತ್ರಣಕ್ಕೆ ವೀಸಾ ನಿರ್ಬಂಧಿಸಲಿದ್ದಾರೆ ಎಂದು ಆತಂಕ ಸೃಷ್ಟಿಯಾಗಿತ್ತು.

ಒತ್ತಡಕ್ಕೆ ಮಣಿದ ಟ್ರಂಪ್?

ಎಚ್-1ಬಿ ವೀಸಾಗೆ ನೀತಿ ಬಿಗಿಗೊಳಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿರುವ ತಮ್ಮ ಉದ್ಯೋಗಿಗಳ ರಕ್ಷಣೆಗೆ ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಮೇಲೆ ಒತ್ತಡ ಹೇರಿದ್ದವು. ಅಮೆರಿಕ ಮೂಲದ ಐಟಿ ದಿಗ್ಗಜರಾದ ಮೈಕ್ರೋಸಾಫ್ಟ್, ಗೂಗಲ್, ಫೇಸ್​ಬುಕ್ ಕೂಡ ಹೊಸ ನೀತಿ ವಿರುದ್ಧ ಕಿಡಿಕಾರಿದ್ದವು. ಚೇಂಬರ್ ಆಫ್ ಕಾಮರ್ಸ್ ಕೂಡ ಖಂಡಿಸಿತ್ತು. ಅಮೆರಿಕ ಸಂಸದರೂ ಈ ನೀತಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

Leave a Reply

Your email address will not be published. Required fields are marked *

Back To Top