Thursday, 20th September 2018  

Vijayavani

Breaking News

ಎಚ್​ಐವಿ ಸೋಂಕು, ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

Saturday, 15.09.2018, 2:03 AM       No Comments

ನವದೆಹಲಿ: ದೇಶದಲ್ಲಿ ಎಚ್​ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 21.40 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಎಚ್​ಐವಿ/ ಏಡ್ಸ್​ನಿಂದಾಗಿ 2017ರಲ್ಲಿ 69 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮಾರಣಾಂತಿಕ ಸೋಂಕಿನಿಂದ ಬಳಲುತ್ತಿರುವ ಸಂಖ್ಯೆಯಲ್ಲಿ ಮಹಾರಾಷ್ಟ್ರ ಪ್ರಥಮ (3.30 ಲಕ್ಷ), ಆಂಧ್ರಪ್ರದೇಶ ದ್ವಿತೀಯ (2.70 ಲಕ್ಷ), ಕರ್ನಾಟಕ ತೃತೀಯ (2.47 ಲಕ್ಷ ), ತೆಲಂಗಾಣ (2.04 ಲಕ್ಷ ) ನಾಲ್ಕನೇ ಸ್ಥಾನಗಳಲ್ಲಿ ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ವೈದ್ಯಕೀಯ ಸಾಂಖ್ಯಿಕ ಸಂಸ್ಥೆ (ನಿಮ್್ಸ) 14ನೇ ಸುತ್ತಿನ ಸಮೀಕ್ಷೆ ನಡೆಸಿದೆ. 2016ಕ್ಕೆ ಹೋಲಿಸಿದರೆ 87 ಸಾವಿರ ಮಂದಿಗೆ ಹೊಸದಾಗಿ ಎಚ್​ಐವಿ ಸೋಂಕು ತಗುಲಿದೆ ಎಂದು ವರದಿ ತಿಳಿಸಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top