Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News

ಎಚ್​ಐವಿ ಇಲ್ಲದಿದ್ದರೂ ಚಿಕಿತ್ಸೆ ಕೊಟ್ರು!

Wednesday, 27.09.2017, 3:05 AM       No Comments

 

ತುಮಕೂರು: ಎಚ್​ಐವಿ ಪೀಡಿತೆ ಎಂದು ತುಮಕೂರು ಜಿಲ್ಲಾಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ಎರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರಿಗೆ ಎಚ್​ಐವಿ ಸೋಂಕು ಇಲ್ಲದೆ ಇದ್ದರೂ ಚಿಕಿತ್ಸೆ ನೀಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸಂತ್ರಸ್ತೆ ಇತ್ತೀಚೆಗೆ ಖಾಸಗಿ ಲ್ಯಾಬ್​ನಲ್ಲಿ ಪರೀಕ್ಷೆಗೆ ಒಳಗಾದಾಗ ಎಚ್​ಐವಿ ನೆಗೆಟಿವ್ ಎಂದು ವರದಿ ಬಂದಿದೆ. ಪತಿಗೆ ಎಚ್​ಐವಿ ಇದೆ ಎಂಬ ಕಾರಣಕ್ಕೆ ಎರಡು ವರ್ಷದ ಹಿಂದೆ ಶಿರಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದ ಮಹಿಳೆಗೆ ಎಚ್​ಐವಿ ಪಾಸಿಟಿವ್ ಎಂದು ಆಗ ರಿಪೋರ್ಟ್ ಬಂದಿತ್ತು. ಈ ಹಿನ್ನೆಲೆಯಲ್ಲಿ ತುಮಕೂರಿನ ಐಸಿಟಿಸಿ ಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿ ನಿರಂತರವಾಗಿ ಎರಡು ವರ್ಷ ಚಿಕಿತ್ಸೆ ಪಡೆದಿದ್ದರು. ಆದರೆ, ಇದೀಗ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದು ವೈದ್ಯಕೀಯ ವಿಸ್ಮಯವೇ? ಅಥವಾ ಆಕೆಗೆ ಎಚ್​ಐವಿ ಇರದೆ ಇದ್ದರೂ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆ ನೀಡಲಾಗಿತ್ತೇ ಎಂಬ ಜಿಜ್ಞಾಸೆ ಆರಂಭವಾಗಿದೆ.ಶಿರಾ ತಾಲೂಕಿನ ಹಳ್ಳಿಯೊಂದರ ದಂಪತಿ ಎಚ್​ಐವಿ ಇದೆ ಎಂಬ ಕಾರಣಕ್ಕೆ ಹುಟ್ಟೂರು ಬಿಟ್ಟು ಬೇರೊಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮಹಿಳೆ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಎಚ್​ಐವಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. 2015ರ ಡಿಸೆಂಬರ್​ನಲ್ಲಿ ಶಿರಾ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಪತಿಗೆ ಎಚ್​ಐವಿ ಬಾಧಿಸಿರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಪತ್ನಿಗೂ ಪರೀಕ್ಷೆ ನಡೆಸಿದಾಗ ಸಿಡಿ4 ಕೌಂಟ್ 350ಕ್ಕಿಂತ ಕಡಿಮೆಯಿದ್ದ ಕಾರಣ ತುಮಕೂರಿನ ಐಸಿಟಿಸಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ವರ್ಷದ ಹಿಂದೆ ಆಕೆ ಗರ್ಭಿಣಿಯಾದಾಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದು ಮಗು ಹುಟ್ಟುವಾಗಲೇ ಮೃತಪಟ್ಟಿದೆ. ಮಹಿಳೆ ವರ್ಷದ ನಂತರ ಮತ್ತೆ ಗರ್ಭಿಣಿಯಾಗಿದ್ದು ಖಾಸಗಿ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗ ಎಚ್​ಐವಿ ನೆಗೆಟಿವ್ ಎಂಬುದು ದೃಢವಾಗಿದೆ. ಆಶ್ಚರ್ಯಗೊಂಡು ಐದಾರು ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗಲೂ ನೆಗೆಟಿವ್ ವರದಿ ಬಂದಿದೆ. ಈ ಬಗ್ಗೆ ವೈದ್ಯರಿಗೂ ಆಶ್ಚರ್ಯವೆನಿಸಿದೆ. ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿದ್ದು ಅಲ್ಲಿನ ವರದಿ ಒಂದರೆಡು ದಿನದಲ್ಲಿ ವೈದ್ಯರ ಕೈಸೇರಲಿದ್ದು ಸತ್ಯಾಸತ್ಯತೆ ತಿಳಿಯಲಿದೆ.

ಮೊದಲು ಗರ್ಭಿಣಿಯಾದಾಗ ಶಿರಾ ತಾಲೂಕು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಿಸಿದಾಗ ಎಚ್​ಐವಿ ಇದೆ ಎಂಬ ಕಾರಣಕ್ಕೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆ ಭಯದಲ್ಲಿ ನಮ್ಮ ಮಗು ಕಳೆದುಕೊಂಡೆವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಐದನೇ ತಿಂಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ನೆಗೆಟಿವ್ ಎಂದು ತಿಳಿಸಿದರು. ಮೂರು ತಿಂಗಳಿನಿಂದ ಐಸಿಟಿಸಿ ಕೇಂದ್ರದಲ್ಲಿ ಈ ಬಗ್ಗೆ ವಿಚಾರಿಸುತ್ತಿದ್ದರೂ ಸರಿಯಾದ ಮಾಹಿತಿ ನೀಡಲಿಲ್ಲ. ಏನು ಮಾಡಬೇಕೊ ತಿಳಿಯದಂತಾಗಿದೆ.

| ಸಂತ್ರಸ್ತ ಮಹಿಳೆ

ಮಹಿಳೆಗೆ ನಡೆಸಿದ್ದ ಎಚ್​ಐವಿ ಪರೀಕ್ಷೆಯಲ್ಲಿ ಸಿಡಿ4 ಕೌಂಟ್ 350ಕ್ಕಿಂತ ಕಡಿಮೆಯಿದ್ದ ಕಾರಣದಿಂದ ನಿಯಮಾನುಸಾರ ಚಿಕಿತ್ಸೆ ನೀಡಲಾಗಿದೆ. ಎರಡು ವರ್ಷದ ನಂತರ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಇದು ವೈದ್ಯಕೀಯ ವಿಸ್ಮಯ. ಹಾಗಾಗಿ, ರಕ್ತದ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿದ್ದು ‘ವೆಸ್ಟ್ರನ್ ಬ್ಲೊಟ್’ ಪರೀಕ್ಷೆಯಲ್ಲಿ ಖಚಿತ ಮಾಹಿತಿ ಸಿಗಲಿದೆ.

| ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ, ತುಮಕೂರು

Leave a Reply

Your email address will not be published. Required fields are marked *

Back To Top