Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಎಚ್ಚರ! ಕ್ಯಾಲ್ಷಿಯಂ ಲೂಟಿಕೋರರಿದ್ದಾರೆ!!

Thursday, 29.06.2017, 3:01 AM       No Comments

| ಡಾ. ವೆಂಕಟ್ರಮಣ ಹೆಗಡೆ

ಇತ್ತೀಚಿನ ದಿನಗಳಲ್ಲಿ ಕುತ್ತಿಗೆನೋವು, ಭುಜದ ನೋವು, ಸೊಂಟನೋವು, ಮಂಡಿನೋವು, ಕಾಲುನೋವು, ಬೆನ್ನುನೋವು – ಇಂಥ ನೋವುಗಳು ಹಲವರಲ್ಲಿ ಕಂಡುಬರುತ್ತಿವೆ. ಅಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಕ್ಯಾಲ್ಷಿಯಂ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಕ್ಯಾಲ್ಷಿಯಂ ಕೊರತೆಯಿಂದ ನೋವು ಬಂದಿರಬಹುದೆಂದು ಸಾಮಾನ್ಯ ಪರಿಕಲ್ಪನೆ. ನಮ್ಮ ಆಹಾರಪದ್ಧತಿಯಿಂದ ಸಾಕಷ್ಟು ಕ್ಯಾಲ್ಷಿಯಂ ದೊರೆಯುತ್ತದೆ. ಆದರೂ ಕ್ಯಾಲ್ಷಿಯಂ ಕೊರತೆ ಉಂಟಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ.

ಮೂಳೆಯು ಜೇನುರಟ್ಟಿನಂಥ ರಚನೆಯನ್ನು ಹೊಂದಿರುತ್ತದೆ. ಜೇನುಹನಿ ರಟ್ಟಿನಲ್ಲಿದ್ದಾಗ ಅದು ತುಂಡಾಗದೆ ಗಟ್ಟಿಯಾಗಿರುತ್ತದೆ. ಅಂತೆಯೇ ಕ್ಯಾಲ್ಷಿಯಂ ಇದ್ದಾಗ ಮೂಳೆ ಸದೃಢವಾಗಿರುತ್ತದೆ. ಜೇನುಹನಿ ರಟ್ಟಿನಲ್ಲಿ ಇಲ್ಲವಾದಾಗ ರಟ್ಟು ಶುಷ್ಕವಾಗಿ ಮುರಿಯಲ್ಪಡುತ್ತದೆಯೋ ಅಂತೆಯೇ ಕಾಲ್ಶಿಯಂ ಇಲ್ಲವಾದಾಗ ಮೂಳೆಯೂ ಸುಲಭವಾಗಿ ಮುರಿಯುತ್ತದೆ. ಆ ಶುಷ್ಕತನವು ನೋವಿಗೆ ಕಾರಣವಾಗುತ್ತದೆ. ನಾವು ತಿಂದ ಆಹಾರದಿಂದ ದೊರೆತ ಕ್ಯಾಲ್ಷಿಯಂ ರಕ್ತಗತವಾಗಿ ಮೂಳೆಗಳನ್ನು ತಲುಪುತ್ತದೆ, ಸೇರುತ್ತದೆ. ಕೆಲವೊಂದು ಅಂಶಗಳು ಕಿಡ್ನಿಯಿಂದ ಸೋಸಲ್ಪಟ್ಟು ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ ಈ ಪ್ರಕ್ರಿಯೆಯ ಮಧ್ಯೆ ಲೂಟಿಕೋರರು ಬಂದರೆ ಕ್ಯಾಲ್ಷಿಯಂ ಮೂಳೆಗಳನ್ನು ತಲುಪದೆ ಕ್ಯಾಲ್ಷಿಯಂ ಕೊರತೆ ಉಂಟಾಗುತ್ತದೆ. ಹಾಗಾದರೆ ಈ ಲೂಟಿಕೋರರು ಯಾರು? ಅದು ಸೋಡಿಯಂ. ಸೋಡಿಯಂ ಕ್ಯಾಲ್ಷಿಯಂನ್ನು ಲೂಟಿ ಮಾಡಿ ಮೂಳೆಗೆ ಹೋಗದಂತೆ ಮಾಡುತ್ತದೆ ಹಾಗೂ ಮೂಳೆಯಿಂದಲೂ ಕ್ಯಾಲ್ಷಿಯಂನ್ನು ಹೊರಗೆಳೆಯುತ್ತದೆ, ಹೀರಿಕೊಳ್ಳುತ್ತದೆ. ಹಾಗಾಗಿ ಹೆಚ್ಚಾದ ಉಪ್ಪು ಮೂಳೆಯ ಬಲಹೀನತೆಗೆ ಕಾರಣ. ವಿಶ್ವಸಂಸ್ಥೆಯ ವರದಿಯ ಪ್ರಕಾರ ನಮಗೆ ದಿನಕ್ಕೆ 3-4 ಗ್ರಾಂ. ಉಪ್ಪು ಸಾಕು. ಆದರೆ ಆಧುನಿಕ ಆಹಾರಪದ್ಧತಿಯಿಂದ ನಮಗೆ 10-12 ಗ್ರಾಂ. ದೊರೆಯುತ್ತದೆ.

ಉದಾಹರಣೆಗೆ; ಕೃಷಿಭೂಮಿಯು ಹೆಚ್ಚು ಆಮ್ಲೀಯವಾದಾಗ ನ್ಯೂಟ್ರಲೈಸ್ ಮಾಡಲು ಸುಣ್ಣವನ್ನು ಹಾಕುತ್ತೇವೆ. ಅದರಿಂದ ಆಮ್ಲೀಯಭಾವ ತಟಸ್ಥಗೊಳ್ಳುತ್ತದೆ. ಅಂತೆಯೇ ನಮ್ಮ ದೇಹದಲ್ಲಿ ಆಮ್ಲೀಯತೆ ಹೆಚ್ಚಾದಾಗ ಅದು ನ್ಯೂಟ್ರಲೈಸ್ ಆಗಲು ಮೂಳೆಗಳಿಂದ ಕ್ಯಾಲ್ಷಿಯಂ ಅಂಶವನ್ನು (ಕ್ಯಾಲ್ಷಿಯಂ ಕ್ಷಾರೀಯಭಾವ ಹೊಂದಿರುತ್ತದೆ.) ಹೀರಿಕೊಳ್ಳುತ್ತದೆ. ಹೀಗೆ ಮೂಳೆಗಳಲ್ಲಿ ಸಂಗ್ರಹಗೊಂಡ ಕ್ಯಾಲ್ಷಿಯಂ ಲೂಟಿಯಾಗುತ್ತದೆ. ಇದು ಕಿಡ್ನಿಯಲ್ಲಿನ ಕಲ್ಲಿಗೂ ಕಾರಣವಾಗುತ್ತದೆ. ಹಾಗಾಗಿ ಉಪ್ಪು ಮೊದಲ ಲೂಟಿಕೋರ. ಸಕ್ಕರೆ ಎರಡನೇ ಲೂಟಿಕೋರ. ಇದು ಪಿಎಚ್ ಲೇವಲ್ ಕಡಿಮೆ ಮಾಡುವ ಮೂಲಕ ದೇಹವು ಆಮ್ಲೀಯ ಭಾವ ತಳೆಯುವಂತೆ ಮಾಡುತ್ತದೆ. ನೀರನ್ನು ಶುದ್ಧೀಕರಿಸಲು ಬಳಸುವ ಫ್ಲೋರೈಡ್ ಎನ್ನುವ ರಾಸಾಯನಿಕವು ಕ್ಯಾಲ್ಷಿಯಂ ಲೂಟಿಕೋರ. ತಂಪುಪಾನೀಯದಲ್ಲಿನ ಫಾಸ್ಪಾರಿಕ್ ಆಮ್ಲವು ಕ್ಯಾಲ್ಷಿಯಂ ಹೀರಿಕೊಳ್ಳುತ್ತದೆ. ಆದ್ದರಿಂದ ತಂಪುಪಾನೀಯಗಳ ಸೇವನೆಯೂ ಕ್ಯಾಲ್ಷಿಯಂ ಕೊರತೆಗೆ ಕಾರಣವಾಗಬಲ್ಲದು.

ಇನ್ನೊಂದು ಮುಖ್ಯ ಲೂಟಿಕೋರ ಸನ್​ಸ್ಕ್ರೀನ್ ಲೋಶನ್. ಇದನ್ನು ಹಚ್ಚುವುದರಿಂದ ಅಗತ್ಯ ಪ್ರಮಾಣದಲ್ಲಿ ವಿಟಮಿನ್ ‘ಡಿ’ ದೊರೆಯದು. ಕ್ಯಾಲ್ಷಿಯಂ ಮೂಳೆಗಳನ್ನು ತಲುಪಲು ಅಥವಾ ಮೂಳೆಗಳಿಗೆ ರಕ್ತವು ಕ್ಯಾಲ್ಷಿಯಂ ಕೊಂಡೊಯ್ಯಲು ವಿಟಮಿನ್ ‘ಡಿ’ ಬೇಕು. ವಿಟಮಿನ್ ‘ಡಿ’ ಕೊರತೆಯಿಂದ ಕ್ಯಾಲ್ಷಿಯಂ ಸರಿಯಾಗಿ ಮೂಳೆಗಳಿಗೆ ತಲುಪದೆ ಬಳಲುವಂತಾಗುತ್ತದೆ. ಹಾಗಾಗಿ ಐದು ಮುಖ್ಯ ಲೂಟಿಕೋರರ ಬಗೆಗೆ ಎಚ್ಚರವಿದ್ದು, ಕ್ಯಾಲ್ಷಿಯಂ ಉಳಿಸಿಕೊಂಡು ಸದೃಢ ಮೂಳೆಗಳನ್ನು ಹೊಂದೋಣ.

ಕೊನೇ ಹನಿ

ತುಳಸಿ ಅಥವಾ ಮೆಂತ್ಯದ ಕಷಾಯ ಕುಡಿಯುವುದರಿಂದ ಗಂಟಲುನೋವು ಶಮನವಾಗುತ್ತದೆ

Leave a Reply

Your email address will not be published. Required fields are marked *

Back To Top