Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಎಂಥ ಸಹನೆ!

Wednesday, 04.07.2018, 3:02 AM       No Comments

ನ್ನನ್ನು ಹೊಡೆದು, ಹಿಂಸಿಸಿ, ಅಪಪ್ರಚಾರ ಮಾಡಿದ ಮುಂಬಾಜಿ ಎಂಬ ಠಕ್ಕನ ಮನೆಗೆ ತೆರಳಿದ ಸಂತ ತುಕಾರಾಮರು ಅವನಿಗೆ ಅಭಿನಂದಿಸಿದರು. ‘ನಿಜವಾಗಿ ನೀನು ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದೀಯ. ನನ್ನಲ್ಲಿ ಒಂದು ಆತ್ಮವಿಶ್ವಾಸವನ್ನು ಮೂಡಿಸಿದ್ದೀಯ. ಅದಕ್ಕಾಗಿ ನಾನು ಕೃತಜ್ಞ ಎಂದು ಅವನನ್ನು ಹಾಡಿ ಹೊಗಳಿದರು. ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲು ಬೇಕು ಎಂದು ದಾಸರು ಹೇಳಿದ್ದು ಇದಕ್ಕಾಗಿಯೇ. ವೀರ ಸಾವರ್​ಕರ್ ಅವರನ್ನು ಅಂಡಮಾನ್ ಜೈಲಿನಲ್ಲಿ ಭೇಟಿಯಾದ ಬ್ರಿಟಿಷ್ ಅಧಿಕಾರಿಯೊಬ್ಬ ‘ನೀನು ಈಗ ಜೈಲ್ಲಿನಲ್ಲಿ ಇರುವವ. 1960ರ ತನಕವೂ ಇರಬೇಕಾಗುತ್ತದೆ. ನೀನು ಇಲ್ಲಿ ಸಾಯುವವ ಎಂದ. ತಾಳ್ಮೆಗೆಡದ ಸಾವರ್​ಕರ್, ‘ಅಲ್ಲಿಯವರೆಗೆ ನಿನ್ನ ಬ್ರಿಟಿಷ್ ಸರ್ಕಾರ ಇರುತ್ತದೆ ಎಂದು ನೀನು ಭಾವಿಸುತ್ತೀಯಾ ಎಂದು ನಸುನಗುತ್ತಾ ಉತ್ತರಿಸಿದರು. ಎಂಥ ಸಹನೆ! ಬಂಧನದೊಳಿಟ್ಟವರ ಬೆರೆಯಬೇಕು ಎಂದು ದಾಸರು ಹೇಳಿದ್ದು ಇಂಥ ಮಹಾನ್ ಗುಣಗಳಿಗಾಗಿಯೇ.

Leave a Reply

Your email address will not be published. Required fields are marked *

Back To Top