Thursday, 20th September 2018  

Vijayavani

Breaking News

ಎಂಜಿ ನವೀನ್, ಬಿಆರ್ ಶರತ್​ಗೆ ಸ್ಥಾನ

Saturday, 15.09.2018, 2:03 AM       No Comments

ಬೆಂಗಳೂರು: ಸೆಪ್ಟೆಂಬರ್ 19ರಿಂದ ಅಕ್ಟೋಬರ್ 8ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 2018-2019ನೇ ಸಾಲಿನ ದೇಶೀಯ ಕ್ರಿಕೆಟ್ ಋತುವಿನ 2ನೇ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಹಣಾಹಣಿಗೆ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಆಟಗಾರ ವಿನಯ್ ಕುಮಾರ್ ನಾಯಕನ ಸ್ಥಾನದಲ್ಲಿ ಮುಂದುವರಿದಿದ್ದು, ಕೆಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಆಲ್ರೌಂಡರ್ ನವೀನ್ ಎಂಜಿ ಹಾಗೂ ವಿಕೆಟ್ ಕೀಪರ್ ಶರತ್ ಬಿಆರ್ 15ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ಕಳೆದ ಆವೃತ್ತಿಯಲ್ಲಿ ಆಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ನೂತನ ಕೋಚ್ ಯರೇಗೌಡ ಹಾಗೂ ಬೌಲಿಂಗ್ ಕೋಚ್ ಅರವಿಂದ್ ಎಸ್. ಮಾರ್ಗದರ್ಶನದಲ್ಲಿ ತಂಡ ಕಣಕ್ಕಿಳಿಯಲಿದೆ. ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಗುರುವಾರ (ಸೆ.20) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎದುರಿಸಲಿದೆ. ಅನುಭವಿಗಳಾದ ಕೆಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ಏಷ್ಯಾಕಪ್ ಟೂರ್ನಿಯಿಂದಾಗಿ ಆಯ್ಕೆಗೆ ಅಲಭ್ಯರಾಗಿದ್ದಾರೆ.

ತಂಡ: ವಿನಯ್ಕುಮಾರ್ (ನಾಯಕ), ಮಯಾಂಕ್ ಅಗರ್ವಾಲ್, ಸಮರ್ಥ್ ಆರ್., ಕರುಣ್ ನಾಯರ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಸಿಎಂ ಗೌತಮ್ (ವಿಕೀ), ಕೆ.ಗೌತಮ್ ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಜೆ. ಸುಚಿತ್, ಅಭಿಷೇಕ್ ರೆಡ್ಡಿ, ನವೀನ್ ಎಂಜಿ, ಶರತ್ ಬಿಆರ್ (ವಿಕೀ); ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್.

Leave a Reply

Your email address will not be published. Required fields are marked *

Back To Top