Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಎಂಎಸ್ ಧೋನಿ ಸಕ್ಸಸ್ ಹಿಂದಿದೆ ಗಂಗೂಲಿ ತ್ಯಾಗ!

Monday, 09.10.2017, 3:00 AM       No Comments

ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಯಶಸ್ಸಿನ ಹಿಂದೆ ಮಾಜಿ ನಾಯಕ ಸೌರವ್ ಗಂಗೂಲಿ ಅವರ ತ್ಯಾಗವೂ ಇದೆ ಅನ್ನುವುದನ್ನು ಸ್ಪೋಟಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ.

ಗಂಗೂಲಿ ನಾಯಕತ್ವದಡಿಯಲ್ಲಿ ಪದಾರ್ಪಣೆ ಮಾಡಿದ್ದ ಧೋನಿ, ಆರಂಭಿಕ 22 ಏಕದಿನ ಪಂದ್ಯಗಳಲ್ಲೇ 148 ಹಾಗೂ 183 ರನ್ ಇನಿಂಗ್ಸ್ ಮೂಲಕ ಗಮನ ಸೆಳೆದಿದ್ದರು. ಈ ಯಶಸ್ಸಿಗೆ ಗಂಗೂಲಿ ತಮ್ಮ 3ನೇ ಕ್ರಮಾಂಕವನ್ನು ಧೋನಿಗೆ ಬಿಟ್ಟುಕೊಟ್ಟಿರುವುದೇ ಕಾರಣ ಎಂದು ವೀರೂ ಹೇಳಿದ್ದಾರೆ.

2004-5ರಲ್ಲಿ ನಾವು ಅಗ್ರ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡುತ್ತಿದ್ದೆವು. ಉತ್ತಮ ಜತೆಯಾಟ ಬೇಕಿದ್ದಾಗ ಗಂಗೂಲಿ 3ನೇ ಕ್ರಮಾಂಕದಲ್ಲಿ ಬರುತ್ತಿದ್ದರೆ, ಬ್ಯಾಟಿಂಗ್ ಯೋಗ್ಯ ಪಿಚ್​ನಲ್ಲಿ ರನ್ ವೇಗ ಹೆಚ್ಚಿಸಲು ಸ್ಪೋಟಕ ಇನಿಂಗ್ಸ್ ಆಡುವ ಧೋನಿಯನ್ನು ಕಣಕ್ಕಿಳಿಸಲಾಗಿತ್ತು. ನಂತರ ದಾದಾ ತಮ್ಮ 3ನೇ ಬ್ಯಾಟಿಂಗ್ ಕ್ರಮಾಂಕವನ್ನು ಧೋನಿಗೆ ಬಿಟ್ಟುಕೊಟ್ಟರು ಎಂದು ತಿಳಿಸಿದರು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top