Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಎಂಎಚ್ 370 ಶೋಧ ಪುನಾರಂಭ ಅಮೆರಿಕ ಕಂಪನಿ ಪಾಲಾಗಿದೆ ಗುತ್ತಿಗೆ  

Thursday, 11.01.2018, 3:00 AM       No Comments

ಕೌಲಾಲಂಪುರ: ನಾಲ್ಕು ವರ್ಷ ಹಿಂದೆ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನ ಎಂಎಚ್ 370ಯನ್ನು ಪತ್ತೆ ಮಾಡಲು ಸರ್ಕಾರ ಮತ್ತೆ ಮುಂದಾಗಿದ್ದು, ಬುಧವಾರ ಅಮೆರಿಕದ ಕಂಪನಿಯೊಂದಕ್ಕೆ ಕಾರ್ಯಾಚರಣೆಯ ಗುತ್ತಿಗೆ ನೀಡಲಾಗಿದೆ.

ಈ ಸಂಬಂಧ 70 ಮಿಲಿಯನ್ ಡಾಲರ್ (445 ಕೋಟಿ ರೂ.) ಒಪ್ಪಂದ ನಡೆದಿದ್ದು, ಗುತ್ತಿಗೆ ಪಡೆದ ಓಶಿಯಾನ್ ಇನ್ಪಿನಿಟಿ ಸಂಸ್ಥೆ ಎಂಎಚ್ 370 ಪತ್ತೆಯಲ್ಲಿ ಸಂಪೂರ್ಣ ಸಫಲವಾದರೆ ಪೂರ್ತಿ ಪ್ರಮಾಣದ ಮೊತ್ತ ಲಭಿಸಲಿದೆ. ಆದರೆ ಪತ್ತೆಹಚ್ಚಲು ವಿಫಲವಾದರೆ ಮಾತ್ರ ಯಾವುದೇ ಹಣ ನೀಡಲಾಗುವುದಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಡೆಸುವ ಪತ್ತೆ ಕಾರ್ಯ ಇದಾಗಿದ್ದು, ಜನವರಿ ಮಧ್ಯದಿಂದ ಆರಂಭವಾಗಿ 90 ದಿನಗಳವರೆಗೆ ಕಾರ್ಯಾಚರಣೆ ನಡೆಯಲಿದೆ. ದಕ್ಷಿಣ ಹಿಂದು ಮಹಾಸಾಗರದಲ್ಲಿ ವಿಮಾನ ನಾಪತ್ತೆಯಾಗಿರುವ ಸಾಧ್ಯತೆಯಿದ್ದು, ಅಲ್ಲಿಯೇ 25,000 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

ಕೌಲಾಲಂಪುರ್​ನಿಂದ ಬೀಜಿಂಗ್​ಗೆ 239 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದಿ ಮಲೇಷ್ಯನ್ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್ 777 ಎಂಎಚ್ 370 ವಿಮಾನ 2014ರ ಮಾರ್ಚ್​ನಲ್ಲಿ ನಿಗೂಢವಾಗಿ ನಾಪತ್ತೆಯಾಗಿತ್ತು. ಆದರೆ ನಂತರ ಪತ್ತೆಗೆ ವಿಶ್ವದ ಹಲವು ರಾಷ್ಟ್ರಗಳು ಕೈ ಜೋಡಿಸಿದ್ದರೂ, ಲಭ್ಯ ಎಲ್ಲ ಮಾದರಿಯ ಎಲ್ಲ ತಂತ್ರಜ್ಞಾನ ಬಳಸಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ಮಲೇಷ್ಯಾ ವಿಮಾನದ್ದೇ ಎನ್ನಲಾದ ಮೂರು ತುಣುಕುಗಳು ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿತ್ತು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top