Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಋತುಚಕ್ರದ ನೆಪ ಹೇಳಿ ಸಾಧ್ವಿ ಬಾಬಾನಿಂದ ಬಚಾವಾಗಿದ್ದರು!

Thursday, 14.09.2017, 3:00 AM       No Comments

 

ರೋಹ್ಟಕ್: ಡೇರಾ ಸಚ್ಚಾ ಸೌದಾದ ವಿವಾದಿತ ಗುರು ಗುರುಮೀತ್ ರಾಮ್ ರಹೀಮ್ ಸಿಂಗ್​ನ ಕರಾಳಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದು, ಈತನನಿಂದ ಪಾರಾಗಲು ಸಾಧಿ್ವುರು ಋತುಚಕ್ರದಿಂದಾಗಿ ರಕ್ತಸ್ರಾವವಾಗುತ್ತಿದೆ ಎಂಬ ನೆಪ ಹೇಳುತ್ತಿದ್ದರು ಎಂಬ ಸತ್ಯ ಹೊರಬಿದ್ದಿದೆ. ಗುರುಮೀತ್ ಪ್ರತಿದಿನ ರಾತ್ರಿ 11 ಗಂಟೆ ಸುಮಾರಿಗೆ ವಸತಿನಿಲಯಕ್ಕೆ ಕರೆ ಮಾಡಿ ಯುವ ಸಾಧಿ್ವುರನ್ನು ತಾನು ವಾಸವಿದ್ದ ಗುಫಾಗೆ (ಗುಹೆ) ಆಹ್ವಾನಿಸುತ್ತಿದ್ದ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಗುಫಾ ಪ್ರವೇಶಿಸಿದ್ದ ನನಗೆ ಆತನ ನೈಜ ಮುಖ ಪರಿಚಿತವಾಗಿತ್ತು ಎಂದು ಯುವ ಸಾಧಿ್ವೂಬ್ಬರು ವಿವರಿಸಿದ್ದಾರೆ. ಮಂಚದ ಮೇಲೆ ಕುಳಿತಿದ್ದ ಗುರುಮೀತ್ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಈ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಹೇಳಿದ. ಗುರುಮೀತ್​ಗೆ ತಾನು ಋತುಮತಿಯಾಗಿದ್ದು, ಬಾಬಾನ ಬಳಿಗೆ ಬರುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿ ಆತನ ಪೈಶಾಚಿಕ ಕೃತ್ಯದಿಂದ ಪಾರಾಗಿದ್ದಾಗಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back To Top