Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಉಪಕಾರಿ ಫಿಲೌರಿ

Monday, 20.03.2017, 10:09 AM       No Comments

ಸ್ಟಾರ್​ಗಳು ಇರುವುದೇ ಹಾಗೆ. ಪ್ರತಿಭೆ, ಪರಿಶ್ರಮಗಳ ಮೂಲಕ ದೊಡ್ಡ ಎತ್ತರ ತಲುಪಿದ ಮೇಲೆ ಅಲ್ಲಿ ಅವರಿಗೆ ಎರಡು ಆಯ್ಕೆಗಳಿರುತ್ತವೆ. ಒಂದು, ತಮಗೆ ತಾವೇ ಮತ್ತಷ್ಟು ಬೆಳೆಯುವುದು, ದುಡ್ಡು ಮಾಡುವುದು. ಇನ್ನೊಂದು, ತಮ್ಮ ಬೆಳವಣಿಗೆ ಜತೆಗೆ ಬೇರೆಯವರಲ್ಲಿನ ಪ್ರತಿಭೆಯನ್ನೂ ಪೋಷಿಸುವುದು, ಸಮಾಜದಲ್ಲಿ ಅಗತ್ಯವಿರುವವರಿಗೆ ಕೈಲಾದಷ್ಟು ನೆರವು ನೀಡುವುದು. ಅನುಷ್ಕಾ ಶರ್ಮ ಈ ಎರಡೂ ಹಳಿಗಳ ಮೇಲೆ ಸರಾಗವಾಗಿ ಸಾಗುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ನಿದರ್ಶನ.

‘ಎನ್​ಎಚ್ 10’ ಚಿತ್ರದ ಮೂಲಕ ನಿರ್ವಣದಲ್ಲೂ ಸೈ ಅನ್ನಿಸಿಕೊಂಡ ಅನುಷ್ಕಾ, ಸದ್ಯ ‘ಫಿಲೌರಿ’ ಚಿತ್ರದ ಬಿಡುಗಡೆಗೆ ಸನ್ನದ್ಧರಾಗಿರುವುದದು ನಿಮಗೆಲ್ಲ ಗೊತ್ತಿರುವ ಸಂಗತಿ. ಈ ಚಿತ್ರದ ಪ್ರಚಾರದಲ್ಲಿ ತಲ್ಲೀನರಾಗಿರುವ ಅವರು, ‘ಫುಲ್​ಕರಿ ಕಸೂತಿ’ ಸಾರಿಯಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ಅಷ್ಟಕ್ಕೂ ಅನುಷ್ಕಾ ಅವರ ಈ ಧೋರಣೆಗೆ ಕಾರಣವಿದೆ. ಫುಲ್​ಕರಿ ಕಸೂತಿ ಪಂಜಾಬಿನಲ್ಲಿ ಜನಪ್ರಿಯ. ಇದನ್ನು ಮಾಡುವವರು ಬಹುತೇಕರು ಬೀದಿ ಬದಿಯಲ್ಲಿರುತ್ತಾರೆ. ಚಿತ್ರದಲ್ಲಿ ಬಳಸಿದ ಬಹುತೇಕ ವಸ್ತ್ರಗಳನ್ನು ಇವರಿಂದಲೇ ತಯಾರಿಸಲಾಗಿರುವುದು ವಿಶೇಷ.

ಅಷ್ಟು ಮಾತ್ರವಲ್ಲ, ಕುಶಲಕರ್ವಿುಗಳು ಫುಲ್​ಕರಿ ಕಸೂತಿ ಮಾಡುತ್ತಿರುವುದನ್ನು ಚಿತ್ರದಲ್ಲೂ ತೋರಿಸಲಾಗಿದೆಯಂತೆ. ಅನುಷ್ಕಾ ಶರ್ಮ ಈಗ ತಮ್ಮ ಚಿತ್ರವನ್ನು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಬಿಂಬಿಸುವುದರ ಜತೆಗೆ, ಫುಲ್​ಕರಿ ಕಸೂತಿ ಕಲೆಗೂ ಪ್ರಚಾರ ನೀಡುತ್ತಿದ್ದಾರೆ. ಮಾ.24ಕ್ಕೆ ‘ಫಿಲೌರಿ’ ಚಿತ್ರ ದೇಶಾದ್ಯಂತ ತೆರೆಕಾಣಲಿದೆ.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top