Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ಉದ್ಯಾನನಗರಿಯಲ್ಲಿ ಐಪಿಎಲ್ 10 ಹಬ್ಬಕ್ಕೆ ತೆರೆ

Sunday, 21.05.2017, 3:00 AM       No Comments

ಕೋಲ್ಕತ ನೈಟ್​ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಕ್ವಾಲಿಫೈಯರ್-2 ಪಂದ್ಯದೊಂದಿಗೆ ಬೆಂಗಳೂರಿನಲ್ಲಿ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದೆ. ತವರಿನ ತಂಡ ಆರ್​ಸಿಬಿಯ ದಯನೀಯ ನಿರ್ವಹಣೆಯ ಹೊರತಾಗಿಯೂ ಹಾಲಿ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ 9 ಪಂದ್ಯಗಳಿಗೂ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರು. ಏಪ್ರಿಲ್ 25ರಂದು ಆರ್​ಸಿಬಿ-ಸನ್​ರೈಸರ್ಸ್ ತಂಡದ ನಡುವಿನ ಪಂದ್ಯವೊಂದು ಮಳೆಯಿಂದ ರದ್ದಾಗಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳು ಅಭಿಮಾನಿಗಳಿಗೆ ಕ್ರಿಕೆಟ್ ಮನರಂಜನೆ ನೀಡಿದವು. ಶುಕ್ರವಾರ ನಡೆದ 10ನೇ ಐಪಿಎಲ್​ನ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಉದ್ಯಾನನಗರಿಯ ಸಾವಿರಾರು ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ಲೀಗ್ ಹಂತದಲ್ಲಿಯೇ ಆರ್​ಸಿಬಿ ಟೂರ್ನಿಯಿಂದ ಹೊರಬಿದ್ದಿದ್ದರೂ ಕೆಲ ಅಭಿಮಾನಿಗಳು ಮಾತ್ರ ಆ ತಂಡದ ಜೆರ್ಸಿ ತೊಟ್ಟು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು. 7 ಲೀಗ್ ಪಂದ್ಯಗಳಲ್ಲದೆ ಪ್ಲೇಆಫ್​ನ ಎರಡು ಪಂದ್ಯಗಳಿಗೆ ಆತಿಥ್ಯದ ಹೊಣೆ ಹೊತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಒಂದೂವರೆ ತಿಂಗಳಿನಿಂದ ಕ್ರೀಡಾಭಿಮಾನಿಗಳ ಕೇಂದ್ರಬಿಂದುವಾಗಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

Back To Top