Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಉತ್ತರ ಪ್ರದೇಶ ಸರ್ಕಾರಿ ಬಸ್ಸುಗಳಿಗೆ ಕೇಸರಿ ಬಣ್ಣ

Friday, 13.10.2017, 3:00 AM       No Comments

ಲಖನೌ: ಗ್ರಾಮೀಣ ಪ್ರದೇಶಗಳ ಸಂಚಾರಕ್ಕಾಗಿ ‘ಸಂಕಲ್ಪ್ ಸೇವಾ’ ಎಂಬ ಹೆಸರಿನಲ್ಲಿ 50 ಸರ್ಕಾರಿ ಬಸ್ಸುಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಸಿರು ನಿಶಾನೆ ತೋರಿದ್ದು, ಬಸ್ಸು ಹಾಗೂ ಬಸ್ಸಿನ ಕರ್ಟನ್​ಗಳು ಕೇಸರಿ ಬಣ್ಣದ್ದಾಗಿವೆ.

ಕಾರ್ಯಕ್ರಮದ ವೇದಿಕೆ, ಶಾಮಿಯಾನ, ಬಸ್ಸಿಗೆ ಅಲಂಕರಿಸಿದ ಬಲೂನ್ ಎಲ್ಲವೂ ಕೇಸರಿ ಬಣ್ಣದ್ದಾಗಿದ್ದವು. ಮುಂದಿನ ದಿನಗಳಲ್ಲಿ ಮತ್ತಷ್ಟು ‘ಸಂಕಲ್ಪ್ ಸೇವಾ’ ಬಸ್​ಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಿಎಂ ಯೋಗಿ ಆದಿತ್ಯನಾಥ ತಮ್ಮ ಕಚೇರಿಯ ಆಸನ ಹಾಗೂ ಕಾರಿನ ಆಸನವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದ್ದಾರೆ.

ನೂರು ದಿನ ಆಡಳಿತ ಪೂರೈಸಿದ ಸಂಭ್ರಮದಲ್ಲಿ ಮುದ್ರಿಸಲಾದ ಡೈರಿ, ಬುಕ್ಲೆಟ್, ಸಚಿವರ ಮಾಹಿತಿ ಎಲ್ಲವೂ ಕೇಸರಿ ಬಣ್ಣದಲ್ಲಿ ಮುದ್ರಿಸಲಾಗಿತ್ತು. ಲಕ್ಷ್ಮಣ ಮತ್ತು ಲಕ್ಷ್ಮೀ ಬಾಯಿ ಪ್ರಶಸ್ತಿಪತ್ರ, ಉಡುಗೊರೆ, ಪ್ರಶಸ್ತಿ ವಿಜೇತರ ಬುಕ್​ಲೆಟ್ ಎಲ್ಲದರಲ್ಲೂ ಕೇಸರಿ ಬಣ್ಣ ರಾಜಾಜಿಸುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಯಾಬಿನೆಟ್ ಸಚಿವ ಹಾಗೂ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮ, ನಮಗೆ ಕೇಸರಿ ಅಚ್ಚುಮೆಚ್ಚು ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top