Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಉಡುಪಿ ಶ್ರೀಕೃಷ್ಣನಿಗೆ ಜನ್ಮಾಷ್ಟಮಿ ಸಂಭ್ರಮ

Thursday, 14.09.2017, 3:00 AM       No Comments

ಉಡುಪಿ:ದ್ವಾರಕೆಯಿಂದ ಆಗಮಿಸಿ ಉಡುಪಿಯಲ್ಲಿ ನೆಲೆನಿಂತ, ಆಚಾರ್ಯ ಮಧ್ವ ಪ್ರತಿಷ್ಠಿತ ರುಕ್ಮಿಣೀ ಕರಾರ್ಚಿತ ಉಡುಪಿ ಶ್ರೀಕೃಷ್ಣನ ಜನ್ಮಾಷ್ಟಮಿ ಬುಧವಾರ ರಾತ್ರಿ ಅಘರ್Â ಪ್ರದಾನದೊಂದಿಗೆ ಶ್ರದ್ಧೆ, ಭಕ್ತಿಯಿಂದ ನೆರವೇರಿತು.

ಬೆಳಗ್ಗೆ ಶ್ರೀಕೃಷ್ಣನಿಗೆ ಶ್ರೀಮನ್ನಾರಾಯಣ ಕೃಷ್ಣಾವತಾರ ಕಾಲದಲ್ಲಿ ಕಾಣಿಸಿಕೊಂಡ ರೂಪದ ಅಲಂಕಾರವನ್ನು ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದರು. ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಹಾಪೂಜೆ, ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ಪೂಜೆಗಳಾಗಿ ಲಕ್ಷ ತುಳಸೀ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ಸಂಪನ್ನಗೊಂಡಿತು.

ಅಷ್ಟಮಠ ಯತಿಗಳ ಉಪಸ್ಥಿತಿಯಲ್ಲಿ, ಪರ್ಯಾಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶ್ರೀಕೃಷ್ಣ ದೇವರಿಗೆ ಉಂಡೆ- ಚಕ್ಕುಲಿಗಳ ಸಮರ್ಪಣೆ ಬಳಿಕ ರಾತ್ರಿ ಚಂದ್ರೋದಯದ 12.34ರ ರೋಹಿಣಿ ನಕ್ಷತ್ರ ಸುಮುಹೂರ್ತದಲ್ಲಿ ಅಘರ್Â ಪ್ರದಾನ ಮಾಡಿದರು.

 ಇಂದು ವಿಟ್ಲಪಿಂಡಿ

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ ಬಹು ಆಕರ್ಷಣೆಯ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ ಸೆ.14ರಂದು ವಿಜೃಂಭಣೆಯಿಂದ ನಡೆಯಲಿದೆ. ಗುರುವಾರ ಅಪರಾಹ್ನ 3:30ಕ್ಕೆ ಮಣ್ಣಿನ (ಮೃಣ್ಮಯ) ಶ್ರೀಕೃಷ್ಣನ ಮೂರ್ತಿಯನ್ನು ಸುವರ್ಣ ರಥದಲ್ಲಿರಿಸಿ ಮೆರವಣಿಗೆ ಮಾಡಲಾಗುತ್ತದೆ.

ಶ್ರೀಕೃಷ್ಣ ದರ್ಶನ ಪಡೆದ ಶಿವರಾಜ್

ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಬುಧವಾರ ನಟ ಶಿವರಾಜ್ ಕುಮಾರ್ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಮುದ್ದುಕೃಷ್ಣ ವೇಷ ಧರಿಸಿದ್ದ ಮಗುವನ್ನು ಶಿವರಾಜ್​ಕುಮಾರ್ ಎತ್ತಿಕೊಂಡು ಮುದ್ದಾಡಿದರು.

Leave a Reply

Your email address will not be published. Required fields are marked *

Back To Top