Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಉಡುಪಿ ಮೂಲದ ನಿಕ್ಲಾಸ್ ಸ್ವಿಸ್ ಸಂಸದ!

Friday, 19.01.2018, 3:03 AM       No Comments

ನವದೆಹಲಿ: ಉಡುಪಿಯಲ್ಲಿ ಜನಿಸಿದ ನಿಕ್ಲಾಸ್ ಸ್ಯಾಮ್ಯುಯೆಲ್ ಗುಗ್ಗರ್ ಈಗ ಸ್ವಿಜರ್ಲೆಂಡ್​ನ ಸಂಸತ್ ಸದಸ್ಯರಾಗಿದ್ದಾರೆ. ಸ್ವಿಸ್ ಪಾರ್ಲಿಮೆಂಟ್​ಗೆ ಆಯ್ಕೆಯಾದ ಭಾರತೀಯ ಮೂಲದ ಮೊದಲ ವ್ಯಕ್ತಿ ಮತ್ತು ಕಿರಿಯ ಸದಸ್ಯ ಕೂಡ ಆಗಿದ್ದಾರೆ.

ಉಡುಪಿಯಿಂದ ಸ್ವಿಸ್​ವರೆಗೆ: ಉಡುಪಿಯ ಬಾಸೆಲ್ ಮಿಷನ್​ನ ಸಿಎಸ್​ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 1970ರ ಮೇ 1ರಂದು ಜನಿಸಿದ ನಿಕ್ಲಾಸ್​ರ ತಾಯಿ ಉಡುಪಿ ಮೂಲದ ಅನಸೂಯಾ. ಇವರದ್ದು ಕಡು ಬಡತನದ ಕುಟುಂಬ. ಹಾಗಾಗಿ ಮಗುವನ್ನು ಡಾ. ಇ.ಡಿ.ಫ್ಲುಗ್​ಫೆಲ್ಡರ್​ಗೆ ಅನುಸೂಯಾ ಹಸ್ತಾಂತರಿಸಿದ್ದರು. ಈ ಮಗುವನ್ನು ಸ್ವಿಸ್ ಮೂಲದ ಕೇರಳದ ತಲಶ್ಶೆರಿಯಲ್ಲಿ ನೆಲೆಸಿದ್ದ ಫ್ರಿಟ್ಜ್ ಗುಗ್ಗರ್ ಮತ್ತು ಎಲಿಜಬೆತ್ ಗುಗ್ಗರ್ ದಂಪತಿ ದತ್ತು ಪಡೆದಿದ್ದರು. ಬಳಿಕ ಈ ದಂಪತಿ ಸ್ವಿಜರ್ಲೆಂಡ್​ಗೆ ತೆರಳಿದರು.

ಸಂಸತ್ ಮೆಟ್ಟಿಲೇರಿದ ಬಗೆ

ಕಷ್ಟದ ಬದುಕನ್ನು ಕಂಡಿದ್ದ ನಿಕ್ಲಾಸ್, ಉನ್ನತ ಶಿಕ್ಷಣ ಪಡೆದ ಮೇಲೆ ಉದ್ಯೋಗ ಜತೆ ಸಮಾಜಮುಖಿ ಕಾರ್ಯ ದಲ್ಲಿ ಸಕ್ರಿಯರಾಗಿದ್ದರು. 2002ರಲ್ಲಿ ವಿಂಟರ್ಥುರ್ ನಗರಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು. 2017ರಲ್ಲಿ ಇವಾಂಜೆಲಿಕಲ್ ಪೀಪಲ್ಸ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾದರು. ನಿಕ್ಲಾಸ್ ಈಗಲೂ ಕೇರಳದ ಎನ್​ಟಿಟಿಎಫ್ ಜತೆ ಒಡನಾಟ ಇರಿಸಿಕೊಂಡಿದ್ದಾರೆ. – ಏಜೆನ್ಸೀಸ್

Leave a Reply

Your email address will not be published. Required fields are marked *

Back To Top