Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ಉಗ್ರ ಹೇಳಿಕೆ ಪುನರುಚ್ಚರಿಸಿದ ಮುಖ್ಯಮಂತ್ರಿ

Friday, 12.01.2018, 3:02 AM       No Comments

ಮೈಸೂರು: ತವರು ಜಿಲ್ಲೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವ ‘ಸಾಧನಾ ಸಂಭ್ರಮ’ ಯಾತ್ರೆಗೆ ಭರ್ಜರಿ ಜನಸ್ಪಂದನೆ ದೊರೆತಿದೆ.

ಮೈಸೂರು ಮತ್ತು ಎಚ್.ಡಿ.ಕೋಟೆಯಲ್ಲಿ ಮಾತನಾಡಿದ ಸಿಎಂ, ಬಿಜೆಪಿ ಹಾಗೂ ಆರ್​ಎಸ್​ಎಸ್ ಸಂಘಟನೆಗಳು ಉಗ್ರಗಾಮಿ ಗಳೆಂಬ ಹೇಳಿಕೆಯನ್ನು ಪುನರುಚ್ಚರಿಸಿದರು.

ಮಲೆಮಹದೇಶ್ವರ ಬೆಟ್ಟದಿಂದ ಸರಗೂರಿಗೆ ಹೆಲಿಕಾಪ್ಟರ್​ನಲ್ಲಿ ಬಂದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಮನುಷ್ಯತ್ವ ಇರುವ ಹಿಂದುಗಳು. ಹಿಂದುಪರ ಸಂಘಟನೆಯಲ್ಲಿರುವ ರೀತಿ ರಾಕ್ಷಸಿ ಪ್ರವೃತ್ತಿಯವರಲ್ಲ. ರಾಕ್ಷಸಿ ಪ್ರವೃತ್ತಿ ಇರುವ ಸಂಘಟನೆಗಳನ್ನು ಹಿಂದುತ್ವ ಉಗ್ರಗಾಮಿಗಳು ಎಂದು ಕರೆಯದೇ ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದರು.

ಬಳಿಕ ಎಚ್.ಡಿ. ಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಕೇಂದ್ರ-ರಾಜ್ಯ ಸರ್ಕಾರ ಸಾಧನೆಗಳು ಮತ್ತು ಕಾಂಗ್ರೆಸ್ ಸರ್ಕಾರ-ಬಿಜೆಪಿ ಸರ್ಕಾರದಲ್ಲಿ ಆದ ಕೆಲಸ ಕಾರ್ಯಗಳ ಕುರಿತು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಎಸೆದರು.

ಮಧ್ಯಾಹ್ನ ನಂಜನಗೂಡಿಗೆ ತೆರಳಿದ ಸಿಎಂ, ಮುಂದಿನ ಚುನಾವಣೆಯಲ್ಲಿ ನಂಜನಗೂಡಿಗೆ ಶಾಸಕ ಕಳಲೆ ಕೇಶವಮೂರ್ತಿ ಅಭ್ಯರ್ಥಿ ಎಂದು ಘೊಷಿಸಿ ಅಚ್ಚರಿ ಮೂಡಿಸಿದರು. ಇದಕ್ಕೆ ಹರ್ಷ ವ್ಯಕ್ತಪಡಿಸಿದ ಕಳಲೆ, ಬಹಿರಂಗ ಸಭೆಯಲ್ಲಿ ಸಿಎಂ ಕಾಲಿಗೆ ನಮಸ್ಕರಿಸಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಸಿಎಂ ಆಪ್ತರಾದ ಸಚಿವ ಡಾ.ಎಚ್.ಸಿ. ಮಹದೇವಪ್ಪಗೆ ನಂಜನಗೂಡು ಕೈ ತಪ್ಪಿದಂತಾಗಿದೆ. ಪುತ್ರ ಸುನಿಲ್ ಬೋಸ್​ಗೆ ತಿ.ನರಸೀಪುರ ಬಿಟ್ಟುಕೊಟ್ಟು ನಂಜನಗೂಡಿಗೆ ವಲಸೆ ಬರಲು ಚಿಂತಿಸಿದ್ದ ಅವರ ರಾಜಕೀಯ ಲೆಕ್ಕಾಚಾರ ಬುಡ ಮೇಲಾಗಿದೆ.

ಸಂಜೆ ತಿ.ನರಸೀಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಸಿಎಂ, ಬಳಿಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದರು. ಮೂರೂ ಕಡೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು ಗಮನಾರ್ಹವಾಗಿತ್ತು.

ಕೋಮು ಭಾವನೆ ಕೆರಳಿಸುವ ಸಂಘಟನೆಗಳ ವಿರುದ್ಧ ಕ್ರಮ

ಮೈಸೂರು: ಬಿಜೆಪಿಯವರು ಕೋಮು ಭಾವನೆ ಕೆರಳಿಸುವ ಮೂಲಕ ಮತಗಳ ಧ್ರುವೀಕರಣಕ್ಕೆ ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪಿಎಫ್​ಐ ನಿಷೇಧ ಮಾಡಲ್ಲ ಎಂಬ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಿಷೇಧ ಮಾಡಲ್ಲ ಅಂದರೆ ನಾವೇನು ಆ ಸಂಘಟನೆ ಬೆಂಬಲಿಸುತ್ತೇವೆಂಬ ಅರ್ಥ ಅಲ್ಲ. ಬಜರಂಗದಳವರನ್ನು ನಾವು ನಿಷೇಧ ಮಾಡಿಲ್ಲ ಎಂದರೆ ಬೆಂಬಲ ನೀಡುತ್ತೇವೆ ಎಂದಲ್ಲ. ಕೋಮು ಭಾವನೆ ಕೆರಳಿಸಿದರೆ, ಅದು ಯಾವುದೇ ಸಂಘಟನೆಯಾದರೂ, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಲು ಮರದ ತಿಮ್ಮಕ್ಕ ಸರ್ಕಾರದ ಸವಲತ್ತುಗಳನ್ನು ವಾಪಸ್ ನೀಡಿರುವ ಕುರಿತು ‘ಈಗದನ್ನು ಚರ್ಚೆ ಮಾಡಲ್ಲ’ ಎಂದ ಸಿಎಂ, ಕೇಂದ್ರ ಸರ್ಕಾರ ಮೂರೂವರೆ ವರ್ಷಗಳಿಂದ ಹಲವು ಸುಳ್ಳು ಹೇಳಿದೆ. ಅದರಲ್ಲಿ ರೈತರೊಂದಿಗೆ ನಾವಿದ್ದೇವೆ ಅನ್ನೋದು ಮತ್ತೊಂದು ಸುಳ್ಳು ಎಂದರು.

ನಂಜನಗೂಡಿನಲ್ಲಿ ಫ್ಲೆಕ್ಸ್ ರಾಜಕೀಯ!

ನಂಜನಗೂಡು: ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆಗೆ ಗುರುವಾರ ಸಿಎಂ ಸಿದ್ದರಾಮಯ್ಯ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಬೆಂಬಲಿಗರು ರಸ್ತೆಯುದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್​ಗಳು ಕಾಂಗ್ರೆಸ್ಸಿಗರನ್ನು ಪೇಚಿಗೆ ಸಿಲುಕಿಸಿದವು.

ಶ್ರೀನಿವಾಸಪ್ರಸಾದ್ ಕಂದಾಯ ಸಚಿವರಾಗಿದ್ದಾಗ ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಪ್ರಸಾದ್ ಈಗ ಅಧಿಕಾರದಲ್ಲಿಲ್ಲ. ಸಿದ್ದರಾಮಯ್ಯ ಇದು ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುವುದನ್ನು ತಡೆಯಲು ಪ್ರಸಾದ್ ಬೆಂಬಲಿಗರು ‘ಮಿನಿ ವಿಧಾನಸೌಧದ ರೂವಾರಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಅಭಿನಂದನೆಗಳು’ ಎಂಬ ಕಟೌಟ್​ಗಳನ್ನು ಅಳವಡಿಸಿದ್ದರು. ಕಾಂಗ್ರೆಸ್ಸಿಗರು ಪೊಲೀಸರ ಮೇಲೆ ಒತ್ತಡ ಹೇರಿ ಫ್ಲೆಕ್ಸ್​ಗಳ ತೆರವಿಗೆ ಯತ್ನಿಸಿದರಾದರೂ ಅನಧಿಕೃತ ಫ್ಲೆಕ್ಸ್​ಗಳ ಬಗ್ಗೆ ಪ್ರಸಾದ್ ಬೆಂಬಲಿಗರೂ ಚಕಾರ ಎತ್ತಿದರು. ಕೊನೆಗೆ ಅಸಹಾಯಕರಾದ ಪೊಲೀ ಸರು, ಪ್ರಸಾದ್ ಫ್ಲೆಕ್ಸ್ ಇರುವ ಕಡೆ ಪೊಲೀಸ್ ಭದ್ರತೆ ನಿಯೋಜಿಸಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರಿಕೆ ವಹಿಸಿ ಕೈತೊಳೆದು ಕೊಂಡರು.

Leave a Reply

Your email address will not be published. Required fields are marked *

Back To Top