Tuesday, 24th October 2017  

Vijayavani

1. ಕೊಳೆಯುತ್ತಿದೆ ಹಸಿವು ಮುಕ್ತ ರಾಜ್ಯದ ಕನಸು – ಹುಳು ಹಿಡಿದು ಪಡಿತರ ಹಾಳು – ರಾಜ್ಯದಲ್ಲಿ ಅನ್ನಭಾಗ್ಯದ ಬದಲು ಹುಳು ಭಾಗ್ಯ 2. 100 ಸಿಸಿ ಬೈಕ್‌ನಲ್ಲಿ ಡಬಲ್ ರೈಡಿಂಗ್ ನಿಷೇಧ ವಿಚಾರ – ವಿಷಯ ಗಮನಕ್ಕೆ ಬಂದಿಲ್ಲ ಎಂದ ಸಚಿವರು – ಅಧಿಕಾರಿಗಳಿಗೆ ಸೂಚಿಸುವುದಾಗಿ ರೇವಣ್ಣ ಸ್ಪಷ್ಟನೆ 3. ಹಂದಿ ತಿಂದು ಮಸೀದಿಗೆ ಹೋಗ್ಲಿ – ಸಿಎಂಗೆ ಸವಾಲೆಸೆದ ಸೊಗಡು ಶಿವಣ್ಣ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ಸಿಡಿಮಿಡಿ 4. ಮತ್ತೆ ಭುಗಿಲೆದ್ದ ತಾಜ್‌ ಮಹಲ್‌ ಕಟ್ಟಡ ವಿವಾದ – ಯಾವಾಗ ಕೆಡವ್ತೀರ ಅಂತಾ ಪ್ರಕಾಶ್‌ ರಾಜ್ ವ್ಯಂಗ್ಯ – ಅತ್ತ ಸ್ಮಾರಕದ ಎದುರು ಶಿವಪೂಜೆ 5. ವಜ್ರ ಮಹೋತ್ಸವಕ್ಕೆ ಸಜ್ಜಾಗ್ತಿದೆ ವಿಧಾನಸೌಧ – ಶಕ್ತಿಕೇಂದ್ರಕ್ಕೆ ಬಣ್ಣಬಣ್ಣದ ಹೂಗಳ ಅಲಂಕಾರ – ಸಭಾಪತಿ, ಸಭಾಧ್ಯಕ್ಷರಿಂದ ಸಿದ್ಧತೆಗಳ ಪರಿಶೀಲನೆ
Breaking News :

ಉಗ್ರರ ಸಾಧುವೇಷ!

Sunday, 23.04.2017, 3:00 AM       No Comments

ನವದೆಹಲಿ: ಐದು ರಾಜ್ಯಗಳ ಜಂಟಿ ಪೊಲೀಸ್ ಪಡೆ ದೇಶದ ವಿವಿಧೆಡೆ ದಾಳಿ ನಡೆಸಿ 10 ಶಂಕಿತ ಐಸಿಸ್ ಉಗ್ರರನ್ನು ಸೆರೆ ಹಿಡಿದು ಸಂಭಾವ್ಯ ದಾಳಿ ತಪ್ಪಿಸಿದ ಬೆನ್ನಲ್ಲೇ ಭಯೋತ್ಪಾದಕರ ಇನ್ನೊಂದು ತಂತ್ರವನ್ನು ಮಧ್ಯಪ್ರದೇಶದ ಗುಪ್ತಚರ ದಳ ಬಯಲಿಗೆಳೆದಿದೆ. ಸಾಧು-ಸಂತರ ವೇಷದಲ್ಲಿ ಉಗ್ರರು ಧಾರ್ವಿುಕ ಕ್ಷೇತ್ರಗಳನ್ನು ಗುರಿಯಾಗಿ ಟ್ಟುಕೊಂಡು ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದು, ಉತ್ತರ ಪ್ರದೇಶದ ವಾರಾಣಸಿ ಮತ್ತಿತರ ಧಾರ್ವಿುಕ ಕ್ಷೇತ್ರಗಳು, ಶೈಕ್ಷಣಿಕ ಕೇಂದ್ರಗಳು ಉಗ್ರರ ಟಾರ್ಗೆಟ್ ಆಗಿವೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ. ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ದಾಳಿ ಭೀತಿ ಎಲ್ಲೆಲ್ಲಿ?: ಅಯೋಧ್ಯೆ, ಕಾಶಿ, ಮಥುರಾ, ಆಗ್ರಾದ ತಾಜ್ ಮಹಲ್, ಅಲಹಾಬಾದ್ ಹಾಗೂ ಲಖನೌ ಹೈಕೋರ್ಟ್, ರೈಲ್ವೆ ನಿಲ್ದಾಣ, ಜನನಿಬಿಡ ಮಾರುಕಟ್ಟೆ ಪ್ರದೇಶ, ವಿಧಾನಸಭೆ ಕಟ್ಟಡ, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು.

2 ಸಾವಿರ ಮದ್ರಸಾಗಳ ಮೇಲೆ ನಿಗಾ: ಉಗ್ರರ ಜತೆ ಸಂಬಂಧ ಹೊಂದಿರುವ ಶಂಕೆಯ ಮೇಲೆ ಉತ್ತರ ಪ್ರದೇಶದ ಪೊಲೀಸರು ಅಲ್ಲಿನ 2 ಸಾವಿರ ಮದ್ರಸಾಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಮದ್ರಸಾದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಓರ್ವ ಇಮಾಮ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆಪರೇಷನ್ ಕೃಷ್ಣ ಇಂಡಿಯಾ: ಉಗ್ರರು ಸಾಧು, ಸಂತರ ವೇಷ ಧರಿಸಿ ಧಾರ್ವಿುಕ ಕ್ಷೇತ್ರಗಳಿಗೆ ತೆರಳಿದರೆ ಭದ್ರತಾ ಸಿಬ್ಬಂದಿಗೆ ಅನುಮಾನ ಬರುವುದಿಲ್ಲ. ಜತೆಗೆ ತಪಾಸಣೆಯಿಂದಲೂ ತುಸು ವಿನಾಯಿತಿ ಪಡೆಯಬಹುದು ಎಂಬುದು ಉಗ್ರರ ಲೆಕ್ಕಾಚಾರವಾಗಿದೆ. ನೇಪಾಳ ಗಡಿ ಮೂಲಕ ಸುಮಾರು 20 ಉಗ್ರರಿದ್ದ ತಂಡವೊಂದು ಉತ್ತರ ಪ್ರದೇಶಕ್ಕೆ ಈಗಾಗಲೇ ನುಸುಳಿದೆ. ಈ ಉಗ್ರರಿಗೆ ಹಿಂದು ಪದ್ಧತಿ, ಆಚರಣೆಗಳ ಕುರಿತೂ ತರಬೇತಿ ನೀಡಲಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ನೀಡಿದ ಬಳಿಕ ಭಾರತಕ್ಕೆ ಕಳಿಸಲಾಗಿದೆ. ಈ ಯೋಜನೆಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಆಪರೇಷನ್ ಕೃಷ್ಣ ಇಂಡಿಯಾ ಎಂದು ನಾಮಕರಣ ಮಾಡಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

Back To Top