Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಉಗ್ರರ ದಮನಕ್ಕೆ ರೋಬಾಟ್

Sunday, 13.08.2017, 3:06 AM       No Comments

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಭಯೋತ್ಪಾದನೆ ಮಟ್ಟ ಹಾಕಲು ಸ್ವದೇಶಿ ನಿರ್ವಿುತ ರೋಬಾಟ್ ಬಳಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 544 ರೋಬಾಟ್​ಗಳ ಖರೀದಿಗೆ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿದೆ. ಶೀಘ್ರದಲ್ಲೇ ಇವುಗಳ ಖರೀದಿ ಪ್ರಕ್ರಿಯೆ ಆರಂಭವಾಗಲಿದ್ದು, ಕೆಲವೇ ತಿಂಗಳಲ್ಲಿ ಇವು ಸೇನೆ ಬಳಕೆಗೆ ಲಭ್ಯವಾಗಲಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ರೋಬಾಟ್​ಗಳನ್ನು ಮದ್ದುಗುಂಡು ಸಾಗಣೆ, ಕಣ್ಗಾವಲು, ರಕ್ಷಣಾ ಕಾರ್ಯ ಮತ್ತಿತರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಮುಂದಿನ ಹಂತದಲ್ಲಿ ದಾಳಿ ನಡೆಸುವ ರೋಬಾಟ್​ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಇವುಗಳನ್ನು ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಬಳಕೆ ಮಾಡಿಕೊಳ್ಳಲಿದೆ. -ಏಜೆನ್ಸೀಸ್

ರಷ್ಯಾ ಸೇನೆಯಲ್ಲಿ ರೋಬಾಟ್

ಅಮೆರಿಕ, ರಷ್ಯಾ ಸಹಿತ ಹಲವು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಭದ್ರತೆಗೆ ರೋಬಾಟ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲ ದೇಶಗಳಲ್ಲಿನ ರೋಬಾಟ್​ಗಳು ಶತ್ರುಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನೂ ಹೊಂದಿವೆ.

***

ವಿಶೇಷತೆಗಳೇನು?

ಜಮ್ಮು-ಕಾಶ್ಮೀರದ ಅರಣ್ಯ ಹಾಗೂ ಗ್ರಾಮೀಣ ಪ್ರದೇಶಗಳನ್ನು ಉಗ್ರರು ಅಡಗುತಾಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಂದಲೇ ನಾಗರಿಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂಥ ಪ್ರದೇಶಗಳನ್ನು ಗುರುತಿಸುವಲ್ಲಿ ರೋಬಾಟ್ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ಸೇನಾ ಕಾರ್ಯಾಚರಣೆಗೆ ಬಲ ಬರಲಿದೆ.

ಸೈನಿಕರು ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ದುರ್ಗಮ ಪ್ರದೇಶಗಳಲ್ಲಿ ಈ ರೋಬಾಟ್​ಗಳು ಕೆಲಸ ಮಾಡುತ್ತವೆ.

ರೋಬಾಟ್​ಗೆ ಅತ್ಯಾಧುನಿಕ ಕ್ಯಾಮರಾ ಅಳವಡಿಕೆ ಮಾಡಲು ನಿರ್ಧರಿಸಿದ್ದು, 200 ಮೀಟರ್ ಸುತ್ತಳತೆಯಲ್ಲಿ ಕಣ್ಗಾವಲಿಡಲಿದೆ. ಉಗ್ರರ ಮೇಲೆ ಕಣ್ಣಿಡಲು ಸಹಕಾರಿಯಾಗಲಿದೆ.

ಜಮ್ಮು-ಕಾಶ್ಮೀರದಲ್ಲಿ ಇಕ್ಕಟ್ಟಾದ ಹಾಗೂ ದುರ್ಗಮ ಪ್ರದೇಶಗಳು ಸಾಕಷ್ಟಿವೆ. ಇಂಥ ಪ್ರದೇಶಗಳಲ್ಲಿ ಮದ್ದುಗುಂಡುಗಳ ಸಾಗಣೆ ಒಂದು ಸವಾಲಿನ ಕೆಲಸ. ಆದರೆ ರೋಬಾಟ್ ಬಳಕೆ ಮಾಡಿಕೊಂಡು ನಿರ್ದಿಷ್ಟ ಪ್ರದೇಶಕ್ಕೆ ಸುಲಭವಾಗಿ ಮದ್ದುಗುಂಡು ಸಾಗಣೆ ಮಾಡಬಹುದು.

ಪಾಕ್ ಬೆಂಬಲಿತ ಉಗ್ರರು ನಿರಂತರವಾಗಿ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದಾರೆ. ಇವರ ಮೇಲೆ ಕಣ್ಣಿಡಲು ರೋಬಾಟ್ ಬಳಕೆಯಾಗಲಿದೆ. ಒಂದೊಮ್ಮೆ ಉಗ್ರರು ಭಾರತದ ಗಡಿ ಪ್ರವೇಶಿಸಿದರೆ ಸೈನಿಕರಿಗೆ ಮಾಹಿತಿ ರವಾನೆಯಾಗಲಿದೆ.

***

ಸೇನೆಯಲ್ಲಿದೆ ದಕ್ಷ

ಸ್ಪೋಟಕ ಸಾಗಣೆಯಲ್ಲಿ ಸದ್ಯ ‘ದಕ್ಷ್‘ ಎಂಬ ರಿಮೋಟ್ ನಿಯಂತ್ರಿತ ವಾಹಕ ಬಳಕೆ ಮಾಡಲಾಗುತ್ತಿದೆ. ಇದು 20 ಕೆಜಿ ತೂಕದ ಸ್ಪೋಟಕ ಹೊತ್ತ್ತೊ್ಯುಬಲ್ಲ ಸಾಮರ್ಥ್ಯ ಹೊಂದಿದೆ ಮತ್ತು 500 ಮೀಟರ್ ದೂರದಿಂದ ಇದನ್ನು ನಿರ್ವಹಿಸಬಹುದಾಗಿದೆ. ಇದು ಮೆಟ್ಟಿಲು ಹತ್ತುವ ಸಾಮರ್ಥ್ಯ ಹೊಂದಿರುವುದರಿಂದ, ಕಟ್ಟಡದಂಥ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಸಹಕಾರಿಯಾತ್ತಿದೆ. 2015ರಲ್ಲಿ ರಿಮೋಟ್ ಕಂಟ್ರೋಲ್ ಗನ್ ಮಷಿನ್​ಗಳ ಪರೀಕ್ಷೆ ನಡೆಸಲಾಗಿತ್ತು. ಒಳಸುಳುವಿಕೆ ನಿಯಂತ್ರಣ ಮಾಡಲು ಇವುಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.

***

ಯೋಧರ ಪ್ರಾಣಹಾನಿ ತಪ್ಪಿಸಬಹುದು

2016ರಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ಹಾಗೂ ದಾಳಿಯಲ್ಲಿ ಒಟ್ಟು 60 ಯೋಧರು ಹುತಾತ್ಮರಾಗಿದ್ದರು. ಒಂದೊಮ್ಮೆ ರೋಬಾಟ್ ಸೇನೆಗೆ ಸೇರ್ಪಡೆಯಾದರೆ ಸೈನಿಕರು ದುರ್ಗಮ ಪ್ರದೇಶಗಳಲ್ಲಿ ಸಾಗುವ ಅವಶ್ಯಕತೆ ಇರುವುದಿಲ್ಲ ಮತ್ತು ಒಳನುಸುಳುವಿಕೆಗೆ ಬ್ರೇಕ್ ಬೀಳಲಿದ್ದು, ಯೋಧರ ಪ್ರಾಣಹಾನಿ ತಪ್ಪಿಸಬಹುದು.

***

ಚೀನಾದಲ್ಲಿ…

2015ರಲ್ಲಿ ಚೀನಾ ‘ಅಟ್ಯಾಕ್ ರೋಬಾಟ್’ನ್ನು ಅನಾವರಣ ಗೊಳಿಸಿತ್ತು. 12 ಕೆಜಿ ಭಾರ ಇರುವ ಈ ಯಂತ್ರವನ್ನು ಸೈನಿಕರು ಬೆನ್ನ ಮೇಲೆ ಹೊತ್ತು ಸಾಗಬಹುದಾಗಿದೆ. ಇದು ವಿಷಕಾರಿ ಅನಿಲ, ಅಪಾಯಕಾರಿ ರಾಸಾಯನಿಕ ಮತ್ತು ಸ್ಪೋಟಕ ಗುರುತಿಸುವ ಸಾಮರ್ಥ್ಯ ಹೊಂದಿದೆ.

***

ಬೆಂಗಳೂರಿನಲ್ಲಿ ಸಂಶೋಧನೆ

ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಂಸ್ಥೆ ರೋಬಾಟ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಪಠಾಣ್​ಕೋಟ್ ಉಗ್ರ ದಾಳಿಯಂಥ ಸಂದರ್ಭದಲ್ಲಿ ಕಣ್ಗಾವಲಿಡಲು, ಶೋಧಕಾರ್ಯಕ್ಕೆ ಅನುಕೂಲವಾಗಲಿದೆ.

***

ಮೇಕ್ ಇನ್ ಇಂಡಿಯಾ

ರೋಬಾಟ್​ಗಳು ಸ್ವದೇಶಿ ತಂತ್ರಜ್ಞಾನದಲ್ಲಿ ದೇಶದಲ್ಲೇ ತಯಾರಾಗಲಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ. ಅತ್ಯಾಧುನಿಕ ರೋಬಾಟ್​ಗಳನ್ನು ದೇಶದಲ್ಲೇ ತಯಾರಿಸುವ ಕಾರಣ ವೆಚ್ಚವೂ ಕಡಿಮೆಯಾಗಲಿದೆ.

Leave a Reply

Your email address will not be published. Required fields are marked *

Back To Top