Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Sunday, 17.12.2017, 3:04 AM       No Comments

| ಎಂ. ಎಂ. ಕೆ. ಶರ್ಮ

ಮೇಷ

ಉತ್ತಮವಾದ ಆರೋಗ್ಯ, ಗುರುಬಲದ ಸಂಪನ್ನ ಬಲ. ಕೃತ್ತಿಕಾ ನಕ್ಷತ್ರದ ಅರಸ ಸೂರ್ಯನ ದಿವ್ಯ ಸಿದ್ಧಿ ನಿಮ್ಮ ಪ್ರಮುಖವಾದ ಯುದ್ಧವೊಂದನ್ನು ನಿಮಗೆ ಗೆಲ್ಲಿಸಿಕೊಡಲೇಬೇಕು. ಆದರೆ ಕ್ಷುದ್ರರಾದ ಸಂಗಾತಿಗಳು ನಿಮ್ಮ ದಾರಿ ತಪ್ಪಿಸುವ ಪ್ರಯತ್ನ ಮಾಡಿಯಾರು. ದಾತಾರನಾದ ವಿಘ್ನೇಶ್ವರನ ಕೃಪಾಶೀರ್ವಾದಗಳನ್ನು ಪಡೆದಿರುವ ನೀವು ಅಗ್ನಿಯ ಕೆಂಡಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ತಾಕತ್ತು ಪಡೆದಿದ್ದೀರಿ. ರಾಜಕಾರಣಿಗಳಿಗೆ ಸರಳ ಸುಲಭ ಎಂಬುದು ಇನ್ನೂ ಸ್ಪಷ್ಟವಾದ ರಗಳೆ ಬಂದೀತು.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 3

ವೃಷಭ

ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಒದಗಿ, ಸುಸ್ಥಿರವಾದುದನ್ನು ತಲುಪಿ, ಹಿರಿದೇ ಆದ ಜವಾಬ್ದಾರಿಯುತ ಪಟ್ಟ ಪಡೆಯುವುದು ಸನ್ನಿಹಿತ ಎಂಬುದು ಖಚಿತವಾದಾಗ ನಿಮ್ಮ ಮೇಲೆ ಸರ›ನೆ ಒಂದು ಆರೋಪದ ನಾಗರ ಹೆಡೆ ಎದ್ದು ಬರಬಹುದು. ಸಕಲ ಧುರಿತಗಳನ್ನು ಬಗ್ಗುಬಡಿಯುವ ಸಂಕಲ್ಪ ಶಕ್ತಿಗಾಗಿ ಖಡ್ಗ ಮಾಲಿನಿ ಸ್ತೋತ್ರಗಳನ್ನು ಓದಿ. ಶನಿಕಾಟದ ತಾಪ ತಡೆಹಿಡಿಯಲು ಶ್ರೀರಾಮ ರಕ್ಷಾ ಸ್ತೋತ್ರ ಓದಿ. ಹಿನ್ನಡೆಯ ನೋವು ಎದುರಿಸುವಿರಾದರೂ ಆತ್ಮವಿಶ್ವಾಸ ಗಟ್ಟಿಯಾಗಿರಲಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಮಿಥುನ

ಅನೇಕ ರೀತಿಯ ಯಶಸ್ಸು ಸಂಪಾದಿಸಲು ವಿಭಿನ್ನವಾದ ಶಕ್ತಿ ಸಂಚಯನವನ್ನು ದಟ್ಟವಾದ ಉತ್ಸಾಹ, ಲವಲವಿಕೆ, ಏಕಾಗ್ರತೆಗಳೊಂದಿಗೆ ಪ್ರದರ್ಶಿಸಲು ಮುಂದಾಗುತ್ತೀರಿ. ಆದರೆ ಈ ನಕ್ಷತ್ರಗಳ ತಾಕಲಾಟ (ಚಿತ್ತಾ ಮತ್ತು ಆರ್ದ್ರ ನಕ್ಷತ್ರಗಳೊಳಗಿನ) ನಿಮ್ಮ ಪಾಲಿಗೆ, ನಿಮ್ಮ ರಾಶಿಯವರೇ ನಿಮಗೆ ಬಾಧೆಯಾಗುವ ಮೂಲಕ ನಿಮ್ಮ ಉತ್ಸಾಹವನ್ನು ಕುಗ್ಗಿಸುತ್ತಾರೆಂಬುದು ಸ್ಪಷ್ಟವಾದಾಗ ಒಮ್ಮೆಗೇ ನಿಮ್ಮ ಶಕ್ತಿ ಕಳೆದುಕೊಳ್ಳುವ ಭೀತಿ ಎದುರಿಸುತ್ತೀರಿ. ಭೀತಿ ತೊರೆದು ಮುನ್ನುಗ್ಗಿ. ಮಂಗಳಕಾರಕಳಾದ ದುರ್ಗೆಯನ್ನು ಆರಾಧಿಸಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಕಟಕ

ಒಳ್ಳೆಯ ವಹಿವಾಟುಗಳ ಮೂಲಕ ಅಗ್ನಿದಿವ್ಯ ಹಾದು ಗೆದ್ದು ಬೀಗಿದ ನಿಮಗೀಗ ಅನಿರೀಕ್ಷಿತವಾಗಿ ಯಾವುದೋ ಒಂದು ತಡೆ ಎದುರಾಗಬಹುದು. ಆದರೆ ಸಂಕಲ್ಪ ಮಾಡಿದ ಮೇಲೆ ಏನೋ ಒಂದು ರೀತಿಯ ಅನೂಹ್ಯ ಶಕ್ತಿಯೊಂದು ನಿಮ್ಮನ್ನು ಕಾಪಾಡುವ ಭಾರ ಹೊತ್ತಿರುವುದು ಇಲ್ಲಿಯತನಕ ಸತ್ಯವಾದ ಮಾತು ಹೌದಾಗಿದ್ದರೂ, ಅನ್ಯ ಲಿಂಗಿಗಳು ವಿನಾಕಾರಣದ ಸೆಳೆತವನ್ನು ಪ್ರದರ್ಶಿಸಿ ನಿಮ್ಮ ದಾರಿಯ ಸಂಪನ್ನತೆಗಳಿಗೆ ವಾಮಶಕ್ತಿಯ ಸುಳಿ ತುಂಬಬಹುದು, ಎಚ್ಚರ ಇರಲಿ. ನರಸಿಂಹನನ್ನು ಸ್ತುತಿಸಿ ಗೆಲ್ಲಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 9

ಸಿಂಹ

ಪಂಚಮ ಶನಿ ಕಾಟದ ಸುಳಿಯು ತೀವ್ರವಾಗಿರುತ್ತದೆಯಾದರೂ ವಿವೇಕಿಗಳಾದ ನೀವು ಕೆಲವು ಮಹತ್ವದ ಕೆಲಸಗಳನ್ನು ಎಚ್ಚರದಿಂದ ಮಾಡಿ ಮುಗಿಸುವಿರಿ. ನಿಮ್ಮ ರಾಶಿಯ ಅಧಿಪತಿ ಸೂರ್ಯನಿಂದ ಹೆಚ್ಚಿನ ಬೆಂಬಲ ಲಭ್ಯ. ಆದರೂ ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಹಣ ಕೊಡುವುದು, ಕೊಡಿಸುವುದು ಮಾಡಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನಿರ್ದಿಷ್ಟ ಕಾರ್ಯಕ್ಕಾಗಿ ಹಣವನ್ನು ಇನ್ಯಾವುದಕ್ಕೋ ಉಪಯೋಗಿಸುವ ಅಚಾತುರ್ಯ ಸಂಭವಿಸದಿರಲಿ. ರಾಮರಕ್ಷಾ ಸ್ತೋತ್ರ ಪಠಿಸಿ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 5

ಕನ್ಯಾ

ಬಂದದ್ದೆಲ್ಲ ಬರಲಿ ಎಂಬ ಕೆಚ್ಚು ಮತ್ತು ಸಕಾರಾತ್ಮಕ ಹಟದೊಂದಿಗೆ ಹೆಜ್ಜೆ ಇಡುವ ನಿಮ್ಮ ಗುರಿ ಉತ್ತಮವೇನೋ‘ ಸರಿ ಆದರೂ ಸರಿಯಾದ ತಯಾರಿಯೊಂದಿಗೆ ಮುನ್ನುಗ್ಗಿ. ಚಂದ್ರನ ಶೈಥಿಲ್ಯಗಳು ಎದುರಾಗುವ ಕಾಲಘಟ್ಟದಲ್ಲಿ ಮನೆಯೊಳಗಿನ ಅಶಾಂತಿ, ಮನೆಯ ಹೊರಗಿನ ಸ್ಪರ್ಧೆಯನ್ನು ಎದುರಿಸುವಲ್ಲಿ ನಿಮ್ಮ ಶಕ್ತಿ ಮೂಲವನ್ನು ದುರ್ಬಲಗೊಳಿಸಬಹುದು. ಸ್ವಾದಿಷ್ಟಕರ ಚಿಂತನ. ಅನುಭವದ ಅಮೃತತ್ವದೊಂದಿಗೆ ಹಿಡಿದ ಕೆಲಸ ಸಾಧಿಸಿ ತೋರಿಸಿ. ಅವಧೂತ ಗುರು ಸಿದ್ಧಿ ದತ್ತಾತ್ರೇಯನ ಸ್ತುತಿಯಿಂದ ಆನೆ ಬಲ ಲಭ್ಯ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 3

ತುಲಾ

ಹೆಚ್ಚಿನ ಜವಾಬ್ದಾರಿಯನ್ನು ನಿಮ್ಮ ಕೆಲಸದ ಸ್ಥಳದ ಅಧಿಕೃತ ವ್ಯವಸ್ಥಾಪಕ ವರ್ಗ ನಿಮಗೆ ಕೊಡಮಾಡಲಾಗಿದೆ. ಗುರಿಯನ್ನೂ ನಿರ್ಧರಿಸಿ ನಿಶ್ಚಿತವಾದ ಹಳಿಯ ಮೇಲೆ ಸಾಗಲು ನಿರ್ದೇಶಿಸುತ್ತದೆ. ಚತುರಮತಿಗಳಾದ ನೀವು ಇದನ್ನು ಸಾಧಿಸಿ, ಆ ಮೂಲಕವಾದ ನಿರ್ವಹಣೆಯಿಂದ ವಿಶೇಷವಾದ ಪ್ರಶಂಸೆ ಹಾಗೂ ಪದೋನ್ನತಿ ಪಡೆಯುವಿರಿ. ತೀವ್ರವಾದ ಕೆಲವು ಅಡೆತಡೆಗಳನ್ನು ಪ್ರತಿಸ್ಪರ್ಧಿಗಳು ನಿಮ್ಮ ಮುಂದಿನ ಯೋಜನೆಗಳಲ್ಲಿ ಸಂಸ್ಥಾಪಿಸುವ ಸಾಧ್ಯತೆ ಅಧಿಕ. ಗಣಪತಿ ಆರಾಧನೆಯಿಂದ ವಿಘ್ನಗಳು ದೂರ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ವೃಶ್ಚಿಕ

ಸಾಧನೆಯ ಮಹಾಮೇರುವನ್ನು ಏರಿ ಗೆಲುವಿನ ಪತಾಕೆಯನ್ನು ಹಾರಿಸುವ ನಿಮ್ಮ ಗುರಿಗಾಗಿ ಲೆಕ್ಕಾಚಾರ ಹಾಕುವುದನ್ನು ನಿಲ್ಲಿಸದಿರಿ. ಪ್ರಯತ್ನಗಳು ಸೋತರೂ ಅಖೈರಾದ ವಿಜಯದ ಹಾದಿಯನ್ನು ಸುಬ್ರಹ್ಮಣ್ಯ ನೆರವೇರಿಸಿಕೊಡುತ್ತಾನೆ. ಹನುಮಾನ್ ಚಾಲೀಸ ಓದಿ, ಸಾಡೇಸಾತಿ ಕಾಟದಿಂದಾಗಿ ಸಂಕಲ್ಪಿತ ಕಾರ್ಯಗಳ ಸಿದ್ಧಿಗೆ ವಿಳಂಬವಾಗುತ್ತಿದೆ. ಅನವಶ್ಯಕವಾದ ಜನರನ್ನು ದೂರ ಇಡಿ. ತಮ್ಮ ಬೇಳೆ ಬೇಯಿಸಿಕೊಳ್ಳಲು ನಿಮ್ಮ ಬಳಸಿಕೊಳ್ಳುವ ನಯಗಾರಿಕೆ ತೋರುವವರು ಜಾಸ್ತಿ ಸಂಧಿಸುತ್ತಾರೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 2

ಧನು

ಗುರುಬಲವಿದೆ. ನಿಮ್ಮನ್ನು ಅರ್ಧದಲ್ಲೇ ಕೈಬಿಡದ ಗುರುವಿನಿಂದ ವರ್ಚಸ್ಸಿಗೆ ದಾರಿ. ಸಾಲದ ಶೂಲ ಹೊರಲು ಸದ್ಯ ಮುಂದಾಗದಿರಿ. ತಂದೆ-ತಾಯಿ ಆರೋಗ್ಯದಲ್ಲಿ ಎಚ್ಚರ. ಉನ್ನತ ವ್ಯಾಸಂಗಕ್ಕೆ ಹತ್ತಿರದ ಸಂಬಂಧಿಗಳಿಂದ ಸಹಾಯ ಸಿಗಲಿದೆ. ಮನಸ್ಸಿಗೆ ನೋವಾಗುವ ಮಾತು ಬರಬಹುದು. ಆದರೆ ಕಾಲಾಯ ತಸ್ಮೈ ನಮಃ. ಬಿರು ನುಡಿಗಳನ್ನು ಕೇಳಿಸಿಕೊಳ್ಳದೇ ವಿಧಿ ಇಲ್ಲ. ದಶರಥ ಮಹಾರಾಜ ವಿರಚಿತ ಶನೈಶ್ಚರ ಸ್ತೋತ್ರ ಓದಿ. ಮನಸ್ಸಿನ ಸಂಕಲ್ಪ ಈಡೇರಲು ಶ್ರಮಪಡಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 7

ಮಕರ

ತಲೆ ತಿನ್ನುವ ಜನ ನಿಮ್ಮ ಹೆಸರನ್ನೂ ಕೆಡಿಸುತ್ತಾರೆ. ಯೋಚಿಸದೆ ಕಾರ್ಯೋನ್ಮುಖರಾಗಬೇಡಿ. ಮನೆಯಲ್ಲಿ ಮಕ್ಕಳನ್ನು ಹುರುಪುಗೊಳಿಸಿ ನಿಮ್ಮ ಬೆಂಬಲಕ್ಕೆ ಒದಗಿಬರುವಂತೆ ವಿನಂತಿಸಿ. ಸದ್ಯ ಇರುವ ಸಾಡೇಸಾತಿ ಕಾಟದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆಯಾದರೂ ಶ್ರೀ ಪಂಚಮುಖಿ ಹನುಮಂತ ಕವಚ ತಾಪತ್ರಯ, ಪೀಡೆಗಳನ್ನು ದೂರ ಮಾಡಲಿದೆ. ಪ್ರತಿನಿತ್ಯವೂ ಹನುಮಂತ ಕವಚ ಓದಿ. ತೆಂಗಿನ ಮರದಡಿಗೆ ಸಮುದ್ರದ ಉಪು್ಪ ಹರಳು ಚೆಲ್ಲಿ. ತಾಪತ್ರಯಗಳು ದೂರವಾಗಿ ಶಾಂತಿ ಲಭ್ಯ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಕುಂಭ

ಮೇಲ್ಮಟ್ಟದ ವ್ಯಕ್ತಿತ್ವವನ್ನು ಸಂಪಾದಿಸಿಕೊಳ್ಳುವಲ್ಲಿ ಸಫಲರಾಗಲು ಶಿವನ ಅಭಯಹಸ್ತ ನಿಮ್ಮ ಪಾಲಿಗಿದೆ, ಶನೈಶ್ಚರನೂ, ಗುರುವೂ ಅವಿರತವಾದ ಶುಭಫಲ ಒದಗಿಸಲು ಶಕ್ತರಾಗಿದ್ದಾರೆ. ನಿಮ್ಮ ಶಿಸ್ತು, ಸಂಯಮ ಹಾಗೂ ಬುದ್ಧಿ ಚಾತುರ್ಯದಿಂದ ಪರಿಣಾಮಕಾರಿಯಾದ ಲಾಭ ಗಳಿಸಲು ಶಕ್ತರಾಗುತ್ತೀರಿ. ಅಪರೂಪದ ಜನರು ನಿಮ್ಮ ಜಮೀನಿನ ಅಥವಾ ಇತರ ಯಾವುದೇ ಆಸ್ತಿಯ ಸಂಬಂಧದ ವಿಚಾರ ನಿಮ್ಮ ವಿರೋಧಿಗಳಿಂದ ತೊಂದರೆ ಆಗದಂತೆ ನಿಮ್ಮ ಕೈಗೆ ಸೇರುವ ಸಹಾಯ ನೀಡುತ್ತಾರೆ. ವೆಂಕಟೇಶ್ವರನ ಸ್ತುತಿ ಮಾಡಿ

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 8

ಮೀನ

ವಾಮಮಾರ್ಗದಲ್ಲಿ ಒತ್ತಡ ಹೇರುವ ತಂತ್ರಗಳನ್ನು ವಿರೋಧಿಗಳು ಮಾಡುತ್ತಿರುತ್ತಾರೆ. ನಿಮ್ಮಿಂದ ವಿಪುಲವಾದ ಸಹಾಯ ಪಡೆದವರು ಅತಿಯಾಸೆಯಿಂದ ಇನ್ನಷ್ಟು ಪಡೆಯಲು ಚಡಪಡಿಸುತ್ತ ಇರುತ್ತಾರೆ. ಅಸಹನೀಯವಾದ ಈ ಜನರನ್ನು ಜಾಣತನದಿಂದಲೇ ದೂರಕ್ಕೆ ಕಳಿಸಿ. ವಾಸ್ತವವಾಗಿ ಕೊಟ್ಟ ಮಾತುಗಳನ್ನು ನೆರವೇರಿಸಿ ಕೊಡುವುದರಲ್ಲಿಯೇ ವೇಳೆ ವ್ಯಯವಾಗುತ್ತದೆ. ನಿಮ್ಮ ಕೆಲಸಗಳು ಬಾಕಿಯೇ ಉಳಿಯುತ್ತವೆ. ವಾಯವ್ಯ ದಿಕ್ಕಿನ ಆಸ್ತಿಗೆ ಕೈ ಹಾಕದಿರಿ. ಜಗದಂಬಾ ಭವಾನಿಯ ಸ್ತುತಿ ಸರ್ವತ್ರ ಒಳಿತು.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 4

 

Leave a Reply

Your email address will not be published. Required fields are marked *

Back To Top