Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಈರುಳ್ಳಿ ಪೂರೈಕೆಗೆ ಅಡ್ಡಿಯಾದ ಮಳೆ

Sunday, 17.06.2018, 3:03 AM       No Comments

| ಹೂವಪ್ಪ ಎಚ್.ಇಂಗಳಗೊಂದಿ

ಬೆಂಗಳೂರು: ಬೆಳೆ ಹಾಗೂ ಬೆಲೆ ಹಾಗೂ ಚೆನ್ನಾಗಿದ್ದರೂ ಹೊಲದಿಂದ ಕಿತ್ತು ಮಾರುಕಟ್ಟೆಗೆ ಸಾಗಿಸಲು ಮಳೆ ಅಡ್ಡಿಯಾದ ಕಾರಣ ಈರುಳ್ಳಿ ಬೆಳೆಗಾರ ಸಂಕಷ್ಟ ಅನುಭವಿಸುವಂತಾಗಿದೆ. ಇತ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿ ಗ್ರಾಹಕ ಹೆಚ್ಚು ಬೆಲೆ ತೆರುವಂತಾಗಿದೆ.

ವಿಜಯಪುರ ಜಿಲ್ಲೆಯ ರೈತರಿಗೆ ಈಗ ಮಳೆಯಿಂದ ಈರುಳ್ಳಿ ಬೆಳೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಸವನಬಾಗೇವಾಡಿ, ಇಂಡಿ, ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 1,950 ಹಾಗೂ ಬೇಸಿಗೆ ಹಂಗಾಮಿನಲ್ಲಿ 811 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಶೇ. 70-80 ಇಳುವರಿ ಕೂಡ ಬಂದಿದೆ. ಆದರೆ, ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಕೀಳಲು ಸಾಧ್ಯವಾಗುತ್ತಿಲ್ಲ. ಹಾಗೊಮ್ಮೆ ಕಿತ್ತರೂ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಕೈ ಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

ಈ ಹಿಂದೆ ಬೆಲೆ ಇಲ್ಲದೆ ಕಂಗಾಲಾಗಿದ್ದ ಈರುಳ್ಳಿ ಬೆಳೆಗಾರ, ಈಗ ಬೆಲೆ ಇದ್ದರೂ ಫಸಲು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಳೆಗೆ ಶೇ.30 ಈರುಳ್ಳಿ ನಾಶವಾಗಿದೆ. ಉತ್ತಮ ಈರುಳ್ಳಿಗೆ ಉತ್ತಮ ಬೆಲೆ ಇದೆ. ಕ್ವಿಂಟಾಲ್​ಗೆ 1,200-1,300 ರೂ. ಗೆ ಮಾರಾಟವಾಗುತ್ತಿದೆ. ಆದರೆ ಮಳೆಯಿಂದ ಸ್ವಲ್ಪಮಟ್ಟಿಗೆ ಹಾನಿ ಇದ್ದ ಈರುಳ್ಳಿಯೂ ತೀರ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕ್ವಿಂಟಾಲ್​ಗೆ 200-300 ರೂ. ಮಾತ್ರ ಸಿಗುತ್ತಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಬೆಳೆಗೆ ಮಾಡಿದ ವೆಚ್ಚ ಕೂಡ ಬರುವುದಿಲ್ಲ ಎಂದು ರೈತರು ದುಃಖಿಸುತ್ತಿದ್ದಾರೆ.

ಪೂರೈಕೆ ಕಡಿಮೆ: ಇನ್ನು ಚಿತ್ರದುರ್ಗ, ಚಳ್ಳಕೆರೆ, ಬಾಗಲಕೋಟೆ ಈರುಳ್ಳಿ ಫಸಲು ಮುಕ್ತಾಯವಾಗಿದೆ. ವಿಜಯಪುರ ಹಾಗೂ ಮಹಾರಾಷ್ಟ್ರ ಈರುಳ್ಳಿ ಮಾತ್ರ ಪೂರೈಕೆಯಾಗುತ್ತಿದೆ. ಕಳೆದ ತಿಂಗಳು ದಿನಂಪ್ರತಿ 50-55 ಸಾವಿರ ಚೀಲಗಳಷ್ಟು ಈರುಳ್ಳಿ ಪೂರೈಕೆಯಾಗುತ್ತಿತ್ತು. ಈಗ 29-30 ಸಾವಿರ ಚೀಲಗಳಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಈ ಹಿಂದೆ ಕ್ವಿಂಟಾಲ್​ಗೆ ಪುಣೆ ದಪ್ಪ ಈರುಳ್ಳಿ 900-1100 ರೂ., ಮಧ್ಯಮ ದರ್ಜೆ 600-700 ರೂ. ಇತ್ತು. ಈಗ ಅದರ ಬೆಲೆ 1200-1400 ರೂ. ಗಳಾಗಿದೆ. ಇನ್ನು ವಿಜಯಪುರ ಈರುಳ್ಳಿ ಕ್ವಿಂಟಾಲ್​ಗೆ 700-900 ರೂ., ಮದ್ಯಮ ದರ್ಜೆ 500-600 ಇದ್ದ ಬೆಲೆ ಈಗ 1000-1200 ರೂ. ಗೆ ಹೆಚ್ಚಳಗೊಂಡಿದೆ. ಗುಣಮಟ್ಟ ಆಧರಿಸಿ ಚಿಲ್ಲರೆ ದರ ಈ ಹಿಂದೆ ಕೆಜಿಗೆ 10-15 ರೂ. ಇತ್ತು. ಈಗ 15ರಿಂದ 22 ರೂ. ಆಗಿದೆ.

ಮಹಾರಾಷ್ಟ್ರದಲ್ಲಿ ಈರುಳ್ಳಿ ದಾಸ್ತಾನು ಹೆಚ್ಚಿದೆ. ವಿಜಯಪುರ ಜಿಲ್ಲೆಯ ಈರುಳ್ಳಿ ಕೂಡ ಇದೆ. ಆದರೆ ಈಗ ಮಳೆ ಸುರಿಯುತ್ತಿರುವುದರಿಂದ ಪೂರೈಕೆ ಕಡಿಮೆಯಾಗಿ ಸ್ವಲ್ಪ ಬೆಲೆ ಏರಿಕೆಯಾಗಿದೆ.

| ವಿ. ಬಿ. ಟಿ. ಶಶಿಧರಮೂರ್ತಿ, ಬೆಂಗಳೂರು ಎಪಿಎಂಸಿ ಈರುಳ್ಳಿ ಮಂಡಿ ವ್ಯಾಪಾರಿ

 

ಈ ಹಿಂದೆ ಬೆಲೆ ಇಲ್ಲದೆ ಬೇಸರವಾಗಿತ್ತು. ಈಗ ಬೆಲೆ ಇದೆ, ಬೇಗ ಮಾರಾಟ ಮಾಡೋಣವೆಂದರೆ ಮಳೆ ಅಡ್ಡಿಮಾಡುತ್ತಿದೆ. ಮಳೆ ನಿಂತು ಮಹಾರಾಷ್ಟ್ರದ ಈರುಳ್ಳಿ ಮಾರುಕಟ್ಟೆಗೆ ಬರತೊಡಗಿದರೆ ಬೆಲೆ ಮತ್ತೆ ಕುಸಿಯುವ ಭೀತಿಯಿದೆ. ಒಟ್ಟಿನಲ್ಲಿ ರೈತರಿಗೆ ತೊಂದರೆ ತಪ್ಪಿದ್ದಲ್ಲ.

| ಮಹಾಂತೇಶ್ ಕಮತಗಿ ವಿಜಯಪುರ

Leave a Reply

Your email address will not be published. Required fields are marked *

Back To Top