Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ಇ-ಕಾಮರ್ಸ್ ಕಂಪನಿಗಳಿಗೆ ಅನ್​ಬಾಕ್ಸ್ಡ್ ತಂತ್ರಜ್ಞಾನದ ನೆರವು

Wednesday, 30.08.2017, 3:00 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ನಾವು ಆನ್​ಲೈನ್​ನಲ್ಲಿ ಏನಾದರೂ ಖರೀದಿಸಲು ಮುಂದಾದಾಗ ಯಾವುದಾದರೂ ಇ-ಕಾಮರ್ಸ್ ವೆಬ್​ಸೈಟ್​ನಲ್ಲಿ ಅದರ ಹುಡುಕಾಟ ನಡೆಸುತ್ತೇವೆ. ಅದರ ಬಗ್ಗೆ ಎಲ್ಲಾ ಮಾಹಿತಿ ದೊರೆತು ಜಾಗೃತ ಗ್ರಾಹಕರಾಗಲು ಬಯಸುತ್ತೇವೆ. ಆದರೆ ಬಹುತೇಕ ಬಾರಿ ಇ-ಕಾಮರ್ಸ್ ವೆಬ್​ಸೈಟ್​ಗಳಿಗಿಂತ ಗೂಗಲ್​ನಲ್ಲಿ ಹುಡುಕಿದಾಗಲೇ ನಾವು ಖರೀದಿಸಲು ಇಚ್ಛಿಸುವ ವಸ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಹಾಗಾಗಿ ಇ-ಕಾಮರ್ಸ್ ಕಂಪನಿಗಳು ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಅಂಶವನ್ನು ಗಮನಿಸಿದ ಗೆಳೆಯರಿಬ್ಬರು ಇ-ಕಾಮರ್ಸ್ ಕಂಪನಿಗಳಿಗೆ ಗೊಂದಲರಹಿತ ಹುಡುಕಾಟದ ಅಂತರ್ ಸಂಪರ್ಕ ಸಾಧನ ಒದಗಿಸುವ ಅನ್​ಬಾಕ್ಸ್ಡ್(ಖಿಘಆಗಿಈ) ಎಂಬ ತಂತ್ರಜ್ಞಾನ ಆಧರಿತ, ಕೃತಕ ಜಾಣ್ಮೆ(ಅಠಿಜ್ಛಿಜ್ಚಿಜಿಚ್ಝ ಐಠಿಛ್ಝಿ್ಝಜಛ್ಞಿ್ಚ) ನವೋದ್ಯಮ ಆರಂಭಿಸಿದರು. ಇದು ಆನ್​ಲೈನ್ ಶಾಪಿಂಗ್ ವೇದಿಕೆಗಳಿಗೆ ವ್ಯವಹಾರ ವೃದ್ಧಿಸಿಕೊಳ್ಳಲು ನೆರವಾಗುವುದರೊಂದಿಗೆ ಗ್ರಾಹಕರಿಗೂ ಉತ್ತಮ ಶಾಪಿಂಗ್ ಅನುಭವ ನೀಡುತ್ತದೆ.

ಅನ್​ಬಾಕ್ಸ್ಡ್ 2011ರಲ್ಲಿ ಪವನ್ ಸೊಂಡೂರ್ ಹಾಗೂ ಪ್ರಶಾಂತ್ ಕುಮಾರ್ ಬೆಂಗಳೂರಿನಲ್ಲಿ ಆರಂಭಿಸಿದ ನವೋದ್ಯಮ. ಆರಂಭದಲ್ಲಿ ನಾಲ್ವರ ತಂಡ ಸತತ ಏಳು ತಿಂಗಳ ಕಾಲ ಕಠಿಣ ಶ್ರಮ ವಹಿಸಿ ಅನ್​ಬಾಕ್ಸ್ಡ್ ತಂತ್ರಜ್ಞಾನ ವೇದಿಕೆ ಆರಂಭಿಸಿದರು. ಇ-ಕಾಮರ್ಸ್ ವೆಬ್​ಸೈಟ್​ಗಳಿಗೆ ಅನ್​ಬಾಕ್ಸ್ಡ್ನ ’ಹ್ಯೂಮನ್ ಸರ್ಚ್ ಎಂಬ ವಿಶ್ಲೇಷಣಾ ತಂತ್ರಜ್ಞಾನ, ಯಾವ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುತ್ತಿವೆ, ಯಾವ ವಿಧದ ಉತ್ಪನ್ನಗಳ ಜಾಹೀರಾತು ಪ್ರಕಟಿಸಬೇಕು, ಬಳಕೆದಾರರ ಜನಸಂಖ್ಯಾ ಆಧರಿತ ಮಾಹಿತಿ ಹಾಗೂ ಅವರ ಖರೀದಿ ಮಾದರಿ ಇತ್ಯಾದಿ ವಿಚಾರಗಳನ್ನು ತಿಳಿಸುತ್ತದೆ. ಇದರ ಆಧಾರದ ಮೇಲೆ ಇ-ಕಾಮರ್ಸ್ ವೇದಿಕೆಗಳು ತಮ್ಮ ವೆಬ್​ಸೈಟ್​ನಲ್ಲಿ ಮಾರ್ಪಾಟುಗಳನ್ನು ಮಾಡಿಕೊಂಡು ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವ ಒದಗಿಸುವ ಮೂಲಕ ತನ್ನ ವ್ಯಾಪಾರ ವೃದ್ಧಿಸಿಕೊಳ್ಳಲು ನೆರವಾಗುತ್ತದೆ. ಅನ್​ಬಾಕ್ಸ್ಡ್ ತಂತ್ರಜ್ಞಾನವನ್ನು ಇ-ಕಾಮರ್ಸ್ ವೆಬ್​ಸೈಟ್​ಗಳು ಅಳವಡಿಸಿಕೊಂಡರೆ, ಅದು ಆ ವೆಬ್​ಸೈಟ್​ಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರ ಹುಡುಕಾಟ ಹಾಗೂ ಖರೀದಿಯ ವಿಧಾನವನ್ನು ಅವಲೋಕಿಸಿ ಅದರ ಆಧಾರದ ಮೇಲೆ ವೆಬ್​ಸೈಟ್​ನಲ್ಲಿ ಯಾವರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ಒದಗಿಸುತ್ತದೆ. ಇದಿಷ್ಟೇ ಅಲ್ಲ ಗ್ರಾಹಕರು ಯಾವ ಬ್ರಾಂಡ್ ಹಾಗೂ ಉತ್ಪನ್ನವನ್ನು ಹೆಚ್ಚೆಚ್ಚು ಹುಡುಕುತ್ತಾರೆ ಹಾಗೂ ಖರೀದಿಸುತ್ತಾರೆ, ಎಷ್ಟು ಮೌಲ್ಯದ ಒಳಗಿನ ಉತ್ಪನ್ನ ಖರೀದಿಸಲು ಇಚ್ಛಿಸುತ್ತಾರೆ ಎಂಬಿತ್ಯಾದಿ ಮಾಹಿತಿ ವೆಬ್​ಸೈಟ್​ಗಳಿಗೆ ಲಭ್ಯವಾಗುತ್ತದೆ. ಅದಕ್ಕನುಗುಣವಾಗಿ ಪ್ರತಿಕ್ರಿಯಿಸಿದರೆ, ವ್ಯಾಪಾರ ವೃದ್ಧಿಸಿಕೊಳ್ಳಲು ಇ-ಕಾಮರ್ಸ್ ಕಂಪನಿಗಳಿಗೆ ಸಹಾಯವಾಗಲಿದೆ.

ಅನ್​ಬಾಕ್ಸ್ಡ್ ಭಾರತ, ಉತ್ತರ ಅಮೆರಿಕ ಸೇರಿದಂತೆ ಸುಮಾರು 40 ದೇಶಗಳ 500ಕ್ಕೂ ಅಧಿಕ ಇ-ಕಾಮರ್ಸ್ ಕಂಪನಿಗಳಿಗೆ ತನ್ನ ಸೇವೆ ಒದಗಿಸುತ್ತಿದ್ದು, ತಿಂಗಳಿಗೆ 1.5 ಬಿಲಿಯನ್​ಗೂ ಅಧಿಕ ಖರೀದಿದಾರರ ವಿವರ ನೀಡುವ ಮೂಲಕ ತನ್ನ ಉತ್ಪನ್ನ ಬಳಸುತ್ತಿರುವ ಕಂಪನಿಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತಿದೆ. ಈವರೆಗೆ 1200ಕ್ಕೂ ಅಧಿಕ ಕಂಪನಿಗಳಿಗೆ ತನ್ನ ಸೇವೆ ಒದಗಿಸಿರುವುದಾಗಿ ಅನ್​ಬಾಕ್ಸ್ಡ್ ಹೇಳಿಕೊಂಡಿದೆ. ಅನ್​ಬಾಕ್ಸ್ಡ್ ಸೇವೆ ಪಡೆದ ಕೆಲವೇ ವಾರಗಳಲ್ಲಿ ವೆಬ್ ಸರ್ಚ್ ಮೂಲಕ ಶೇ.35ರಿಂದ 40ರಷ್ಟು ವ್ಯಾಪಾರ ವೃದ್ಧಿಯಾಗಿರುವುದಾಗಿ ಇದನ್ನು ಬಳಸುತ್ತಿರುವ ಕಂಪನಿಗಳು ಹೇಳಿಕೊಂಡಿವೆ. ಕಳೆದ ವರ್ಷ ಆದಾಯ ಶೇ.400ರಷ್ಟು ವೃದ್ಧಿಯಾಗಿರುವುದಾಗಿ ಅನ್​ಬಾಕ್ಸ್ಡ್ ಹೇಳಿಕೊಂಡಿದೆ.

ಅನ್​ಬಾಕ್ಸ್ಡ್ ಈವರೆಗೆ ನಾಲ್ಕು ಸುತ್ತುಗಳಲ್ಲಿ ಸುಮಾರು 15 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಗಳಿಸಿದ್ದು ಅದನ್ನು ಮಾರುಕಟ್ಟೆ ವಿಸ್ತರಣೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಬಳಸಿಕೊಂಡಿರುವುದಾಗಿ ಹೇಳಿದೆ. ಇತ್ತೀಚಿನ ಬಂಡವಾಳವನ್ನು ತನ್ನ ತಂತ್ರಜ್ಞಾನದ ಸಾಮರ್ಥ್ಯ ವೃದ್ಧಿಸಲು ಹಾಗೂ ತನ್ನ ಗ್ರಾಹಕ ಕಂಪನಿಗಳ ಸಮೀಪ ಚಿಕಾಗೋ ಹಾಗೂ ನ್ಯೂಯಾರ್ಕ್ ನಗರಗಳಲ್ಲಿ ಕಚೇರಿ ತೆರೆಯಲು ಬಳಸುವುದಾಗಿ ಹೇಳಿಕೊಂಡಿದೆ. ಶೀಘ್ರದಲ್ಲೇ ಜಾಡು ಪತ್ತೆ(ನ್ಯಾವಿಗೇಷನ್) ಉತ್ಪನ್ನವೊಂದನ್ನು ಪರಿಚಯಿಸುವ ಇರಾದೆ ಕಂಪನಿಗಿದೆ.

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು (ಪ್ರತಿಕ್ರಿಯಿಸಿ: startup[email protected], [email protected])

Leave a Reply

Your email address will not be published. Required fields are marked *

Back To Top