Sunday, 25th June 2017  

Vijayavani

1. ಇಂದಿನಿಂದ ಪ್ರಧಾನಿ ಅಮೆರಿಕಾ ಪ್ರವಾಸ- ವೈಟ್‌ಹೌಸ್‌ನಲ್ಲಿ ಮೋದಿಗೆ ವಿಶೇಷ ಡಿನ್ನರ್‌- ಟ್ರಂಪ್‌ರ ಮೊದಲ ಅತಿಥಿಯಾಗಲಿದ್ದಾರೆ ನರೇಂದ್ರ ಮೋದಿ 2. ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧ ವಿಚಾರ- ಹೋಟೆಲ್​, ರೆಸ್ಟೋರೆಂಟ್‌ಗಳಲ್ಲಿ ಎಣ್ಣೆಗೆ ಅವಕಾಶ- ರಂಗೋಲಿ ಕೆಳಗೆ ತೂರಿದ ಪಂಜಾಬ್​ ಸರ್ಕಾರ 3. ಇನ್ಫೋಸಿಸ್‌ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪ- ಆರುವರೆ ಕೋಟಿ ದಂಡ ವಿಧಿಸಿದ ನ್ಯೂಯಾರ್ಕ್‌ ಸರ್ಕಾರ- ಆರೋಪ ಅಲ್ಲಗಳೆದ ಇನ್ಫೋಸಿಸ್‌ 4. ಕಷ್ಟ ಎದುರಾದ್ರೆ ಶಾಲೆಗೆ ಹರಕೆ- ಇಷ್ಟಾರ್ಥ ಸಿದ್ಧಿಯಾದ್ರೆ ವಿವಿಧ ಕೊಡುಗೆ- ಬಂಟ್ವಾಳದ ಸೂರಿಬೈಲ್​ನಲ್ಲಿ ಶಾಲೆಯೇ ದೇವರು 5. ಭಾರತ ವೆಸ್ಟ್‌ವಿಂಡೀಸ್‌ ಕ್ರಿಕೆಟ್‌ ಸರಣಿ- ಮೊದಲ ಪಂದ್ಯ ವರುಣನಿಗೆ ಬಲಿ- ಮಳೆಯಲ್ಲಿ ತೇಲಿಹೋದ ಶಿಖರ್‌ ಧವನ್‌, ರಹಾನೆ ಅರ್ಧ ಶತಕ
Breaking News :

ಇಸ್ರೋ ಹೊಸ ಮೈಲಿಗಲ್ಲು

Wednesday, 15.02.2017, 8:01 AM       No Comments

ನವದೆಹಲಿ: ಬಾಹ್ಯಾಕಾಶ ರಂಗದಲ್ಲಿ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಂದು (ಬುಧವಾರ) ವಿಶ್ವದಾಖಲೆ ಬರೆಯಲು ಸಜ್ಜಾಗಿದೆ. ಸಿ 37 ರಾಕೆಟ್ ಮೂಲಕ 104 ಉಪಗ್ರಹಗಳ ಉಡಾವಣೆಗೆ ಸೋಮವಾರದಿಂದಲೇ ಕೌಂಟ್ ಡೌನ್ ಆರಂಭವಾಗಿದ್ದು, ಇಂದು ಬೆಳಗ್ಗೆ 9.28ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಕ್ಷೆಗೆ ಹಾರಿಬಿಡಲಾಗುವುದು. ವಿಶೇಷವೆಂದರೆ, ಈ ಉಡಾವಣೆಯಿಂದ ಇಸ್ರೋ ಆರ್ಥಿಕ ಲಾಭವನ್ನೂ ಕಾಣಲಿದೆ. ಉಡಾವಣೆ ಮಾಡುತ್ತಿರುವ 104 ಉಪಗ್ರಹಗಳ ಪೈಕಿ ಮೂರು ಮಾತ್ರ ಭಾರತದ್ದಾಗಿದ್ದು, ಉಳಿದವುಗಳು ವಿದೇಶಗಳದ್ದು. ಹಾಗಾಗಿ, ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಆರ್ಥಿಕ ಲಾಭವೂ ಸಾಧ್ಯವಾಗಲಿದೆ ಎಂಬುದು ಬಾಹ್ಯಾಕಾಶ ತಜ್ಞರ ಅಭಿಪ್ರಾಯ. ಈ ಹಿಂದೆ 79 ವಿದೇಶಿ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ. ಆದರೆ, ಇದೇ ಮೊದಲ ಬಾರಿ 104 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದ್ದು, ಇದು ಜಾಗತಿಕ ದಾಖಲೆಯನ್ನು ಬರೆಯಲಿದೆ. ಹಾಗಾಗಿ, 2017ರ ವರ್ಷ ಇಸ್ರೋ ಪಾಲಿಗೆ ಮಹತ್ವದ ಮತ್ತು ಐತಿಹಾಸಿಕ ವರ್ಷವಾಗಲಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ, ವಿದೇಶಗಳ 17 ಉಪಗ್ರಹಗಳೂ ಸೇರಿದಂತೆ ಒಟ್ಟು 20 ಉಪಗ್ರಹಗಳನ್ನು ಪಿಎಸ್​ಎಲ್​ವಿ-34 ಉಪಗ್ರಹವಾಹಕದ ನೆರವಿನಿಂದ ಉಡಾವಣೆ ಮಾಡಿತ್ತು.

ಎರಡು ವರ್ಷದಲ್ಲಿ ಹೆಚ್ಚಿದ ಲಾಭ: 2015ರಲ್ಲಿ ಇಸ್ರೋದ ಪಾಲುದಾರ ಕಂಪನಿ ಅಂತರಿಕ್ಷ ಕಾಪೋರೇಷನ್ 200 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಈ ವರ್ಷ ಅದು 800 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಇಸ್ರೋ ಸೇವೆ ಪಡೆಯುತ್ತಿರುವ ದೇಶಗಳು

ಕೊರಿಯಾ, ಜರ್ಮನಿ, ಬೆಲ್ಜಿಯಂ, ಇಂಡೋನೇಷ್ಯ, ಆರ್ಜೆಂಟೀನಾ, ಇಟಲಿ, ಜಪಾನ್, ಕೆನಡಾ, ಡೆನ್ಮಾರ್ಕ್, ನೆದರ್​ಲ್ಯಾಂಡ್, ಸ್ವಿಜರ್​ಲ್ಯಾಂಡ್, ಅಲ್ಜೀರಿಯಾ, ಸಿಂಗಪುರ್, ಇಸ್ರೇಲ್.

ಪ್ರತಿ ವರ್ಷ 12 ಉಡಾವಣೆ

ಇಸ್ರೋ ಉಡಾವಣಾ ಕಾರ್ಯಕ್ರಮಗಳಿಗೆ ಖಾಸಗಿ ಕಂಪನಿಗಳ ನೆರವು ಪಡೆಯುತ್ತಿದೆ. ಸಣ್ಣ ಉಪಗ್ರಹಗಳ ಅವಶ್ಯಕತೆ ಹೆಚ್ಚುತ್ತಿರುವುದರಿಂದ ಇಸ್ರೋಗೆ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿ ಭಾರತ ವರ್ಷಕ್ಕೆ 12 ಅಂದರೆ ತಿಂಗಳಿಗೊಂದರಂತೆ ಉಡಾವಣಾ ಯೋಜನೆಗಳನ್ನು ಹಮ್ಮಿಕೊಂಡಿದೆ.

 

  • ರಷ್ಯಾ 2014ರಲ್ಲಿ 39 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿತ್ತು.
  • ಅಮೆರಿಕದ ನಾಸಾ 2013ರಲ್ಲಿ 29 ಉಪಗ್ರಹಗಳ ಉಡಾವಣೆ ನಡೆಸಿತ್ತು.
  • ಕಳೆದ ವರ್ಷ ಇಸ್ರೋ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
  • 104 ಉಪಗ್ರಹಗಳನ್ನು ಒಟ್ಟಿಗೇ ಇದೇ ಮೊದಲ ಬಾರಿ (ಫೆ.15) ಉಡಾವಣೆ ಮಾಡಲಾಗುತ್ತಿದೆ.

ಇಸ್ರೋ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸದಾ ಕ್ರಿಯಾಶೀಲವಾಗಿರುತ್ತದೆ. ಈಗಲೂ ಈ ಪ್ರಯತ್ನ ಮುಂದುವರಿದಿದೆ. ನಮ್ಮ ದೇಶದ ಅಗತ್ಯಗಳಿಗೆ ಅನುಸಾರವಾಗಿ ಉಪಗ್ರಹಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿ ಎಸ್​ಎಲ್​ವಿ-ಎಕ್ಸ್​ಎಲ್ ಉಪಗ್ರಹವಾಹಕದಲ್ಲಿನ ಖಾಲಿ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ವಿದೇಶಿ ಉಪಗ್ರಹಗಳನ್ನು ಸಹ ಉಡಾವಣೆ ಮಾಡಲಾಗುತ್ತಿದೆ. ಇದರಿಂದ, ನಮ್ಮ ಉಡಾವಣೆಯ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.

| ಎ.ಎಸ್.ಕಿರಣ್​ಕುಮಾರ್ ಇಸ್ರೋ ಅಧ್ಯಕ್ಷ

Leave a Reply

Your email address will not be published. Required fields are marked *

17 − thirteen =

Back To Top