Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಇರ್ಮಾದಿಂದ 170 ಭಾರತೀಯರ ರಕ್ಷಣೆ

Thursday, 14.09.2017, 3:00 AM       No Comments

ನವದೆಹಲಿ: ಅಮೆರಿಕದ ವಿವಿಧೆಡೆ ಭಾರಿ ಹಾನಿ ಮಾಡಿರುವ ಇರ್ಮಾ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ಸಿಲುಕಿದ್ದ 170 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ್ದಾರೆ. ಸೇಂಟ್ ಮಾರ್ಟೀನ್ ದ್ವೀಪದಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಫ್ರಾನ್ಸ್ ಮತ್ತು ನೆದರ್ಲೆಂಡ್ ಜಂಟಿಯಾಗಿ ಸೈಂಟ್ ಮಾರ್ಟೀನ್ ದ್ವೀಪದಲ್ಲಿ ಆಡಳಿತ ನಡೆಸುತ್ತಿದೆ. ಇರ್ವ ಚಂಡಮಾರುತ ದ್ವೀಪಕ್ಕೆ ಅಪ್ಪಳಿಸಿದ್ದರಿಂದ ಬಹುತೇಕ ಪ್ರದೇಶಗಳು ಹಾನಿಗೊಳಗಾಗಿವೆ. ಅಲ್ಲಿ ಸಿಲುಕಿದ್ದವರಲ್ಲಿ ಹೆಚ್ಚಿನವರು ವಿದೇಶಿ ಪ್ರವಾಸಿಗರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿ, ದ್ವೀಪದಲ್ಲಿ ಸಿಲುಕಿದ್ದವರ ಪೈಕಿ 110 ಭಾರತೀಯರು ಮತ್ತು ಅನಿವಾಸಿ ಭಾರತೀಯರನ್ನು ಕುರಕಾವೊಗೆ ಕರೆತರಲಾಗಿದೆ ಎಂದು ಹೇಳಿದ್ದರು. ರಕ್ಷಣಾ ಕಾರ್ಯಾಚರಣೆಗೆ ಭಾರತ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಿದೆ.ಬುಧವಾರ ಟ್ವೀಟ್ ಮಾಡಿರುವ ಸಚಿವೆ ಸುಷ್ಮಾ ಸ್ವರಾಜ್, ಎರಡನೇ ವಿಮಾನದಲ್ಲಿ ಮತ್ತೆ 60 ಮಂದಿಯನ್ನು ಸುರಕ್ಷಿತವಾಗಿ ಕುರಕಾವೊಗೆ ಕರೆತರಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top