Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಇರಾಕ್-ಇರಾನ್ ಗಡಿಯಲ್ಲಿ ಭೂಕಂಪ

Tuesday, 14.11.2017, 3:00 AM       No Comments

ಬಗ್ದಾದ್/ಅಂಕಾರಾ: ಇರಾಕ್-ಇರಾನ್ ಗಡಿ ಭಾಗದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದ್ದು, ಇರಾನ್​ನಲ್ಲಿ ಇದುವರೆಗೆ 400 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. 3,950ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುಸಿದಿರುವ ಕಟ್ಟಡಗಳ ಅವಶೇಷಗಳಡಿ ಸಹಸ್ರಾರು ಮಂದಿ ಸಿಲುಕಿರುವ ಶಂಕೆ ಇದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇರಾಕ್​ನಲ್ಲಿ 6 ಜನ ಮೃತಪಟ್ಟಿದ್ದು, 68 ಮಂದಿ ಗಾಯಗೊಂಡಿರುವ ಮಾಹಿತಿ ಲಭಿಸಿದೆ.

ಇರಾನ್​ನ ಕರ್ಮನ್​ಶಾ ಪ್ರಾಂತ್ಯದಲ್ಲಿ ಹಚ್ಚಿನ ಹಾನಿ ಸಂಭವಿಸಿದೆ. ಇಲ್ಲಿ 236 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ತೀವ್ರತೆಯಿಂದಾಗಿ ಮಣ್ಣು ಕುಸಿತ ಸಮಸ್ಯೆ ಎದುರಾಗಿದ್ದು, ರಕ್ಷಣಾ ಕಾರ್ಯಕ್ಕೆ ಭಾರಿ ಅಡಚಣೆ ಉಂಟಾಗಿದೆ ಎನ್ನಲಾಗಿದೆ.

ನೈಸರ್ಗಿಕ ವಿಕೋಪದಿಂದ ಆಗಿರುವ ಭಾರಿ ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿ ಬಗ್ಗೆ ಇರಾನ್​ನ 2ನೇ ಮುಖ್ಯಸ್ಥ ಅಯಾತೊಲ್ಲಾ ಅಲಿ ಖಮೆನಿ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸರ್ಕಾರಿ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ತೂಗುಯ್ಯಾಲೆಯಾಡಿದ ಕಟ್ಟಡಗಳು: ಭೂಕಂಪದ ಕೇಂದ್ರಬಿಂದು ಖುರ್ದಿಸ್ತಾನದ ಸುಲಯಮಾನಿಯ್ಹಾ ಪ್ರಾಂತ್ಯದ ಪೆಂಜ್ವಿನ್​ನಲ್ಲಿ ಸ್ಥಿತವಾಗಿತ್ತು ಎಂದು ಅಮೆರಿಕದ ಭೂಗರ್ಭಶಾಸ್ತ್ರ ಸರ್ವೆಕ್ಷಣಾ ಇಲಾಖೆ ತಿಳಿಸಿದೆ. ಇರಾಕ್-ಇರಾನ್ ಗಡಿಗೆ ಸಮೀಪದಲ್ಲಿರುವ ಇರಾಕ್​ನ ರ್ದಬಂದಿಖಾಂ ಜಿಲ್ಲೆಯಲ್ಲಿ ಹೆಚ್ಚಿನ ಹಾನಿಯಾಗಿದೆ.

ಮಕ್ಕಳೊಂದಿಗೆ ರಾತ್ರಿ ಭೋಜನ ಮಾಡುತ್ತಿದ್ದಾಗ ಕಟ್ಟಡ ಅಲುಗಾಡಲಾರಂಭಿಸಿತು. ಒಂದು ರೀತಿಯಲ್ಲಿ ತೂಗೂಯ್ಯಾಲೆಯಲ್ಲಿ ಆಡುತ್ತಿರುವಂತೆ ಭಾಸವಾಯಿತು. ತಕ್ಷಣವೇ ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರಗೋಡಿ ಬಂದೆ ಎಂದು ಬಗ್ದಾದ್​ನ ಸಲಿಹಿಯಾ ಜಿಲ್ಲೆಯ ಮಹಿಳೆಯೊಬ್ಬರು ಹೇಳಿದ್ದಾರೆ.

ಆಸ್ಪತ್ರೆಗೆ ಭಾರಿ ಹಾನಿ: ರ್ದಬಂದಿಖಾಂನ ಆಸ್ಪತ್ರೆ ಕಟ್ಟಡಕ್ಕೆ ಭಾರಿ ಹಾನಿ ಉಂಟಾಗಿದೆ. ಇದರಿಂದಾಗಿ ಗಾಯಗೊಂಡಿರುವ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಭಾರಿ ತೊಂದರೆ ಉಂಟಾಗಿದೆ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿರುವುದರಿಂದ ಜನರು ಪರದಾಡುವಂತಾಗಿದೆ. -ಏಜೆನ್ಸೀಸ್

ಟರ್ಕಿ ನೆರವು

ಇರಾಕ್ ಮತ್ತು ಇರಾನ್​ಗಳಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಟರ್ಕಿ ಮತ್ತು ಇಸ್ರೇಲ್ ಸಹಕರಿಸುತ್ತಿವೆ. ಟರ್ಕಿ ರೆಡ್ ಕ್ರೆಸೆಂಟ್ ಮತ್ತು ರಾಷ್ಟ್ರೀಯ ವೈದ್ಯಕೀಯ ರಕ್ಷಣಾ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ತೆರಳಿ, ರಕ್ಷಣಾ ಕಾರ್ಯದಲ್ಲಿ ನೆರವು ನೀಡುತ್ತಿವೆ.

Leave a Reply

Your email address will not be published. Required fields are marked *

Back To Top