Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಇನ್ನಷ್ಟು ಕಾವೇರಿದ ‘ಮಹಾ’ ಜಲಾಂದೋಲನ

Saturday, 22.07.2017, 3:01 AM       No Comments

ಹುಬ್ಬಳ್ಳಿ/ಗದಗ: ಟೈರ್​ಗೆ ಬೆಂಕಿ, ಮಾನವ ಸರಪಳಿ, ಆಟೋ -ಬೈಕ್ ರ್ಯಾಲಿ, ಕೇಶ ಮುಂಡನ, ನಿರಶನ, ಅರೆಬೆತ್ತಲೆ ಉರುಳು ಸೇವೆ ಸೇರಿ ಶುಕ್ರವಾರ ರೈತ ಹೋರಾಟಗಾರರಿಂದ ನಾನಾ ರೀತಿಯ ಪ್ರತಿಭಟನೆ ನಡೆದು ಮಹದಾಯಿ, ಕಳಸಾ- ಬಂಡೂರಿ ಜಲಾಂದೋಲನ ತೀವ್ರ ಸ್ವರೂಪವನ್ನು ಪಡೆದುಕೊಂಡಿತು.

‘ಮಹಾ‘ ಹೋರಾಟ ಮತ್ತು ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಗದಗ ಬಂದ್​ಗೆ ಉತ್ತಮ ಸ್ಪಂದನೆ ಸಿಕ್ಕಿತು. ಬಸ್ ಸಂಚಾರ ಸ್ಥಗಿತ, ಶಾಲಾ ಕಾಲೇಜುಗಳಿಗೆ ರಜೆ, ಅಂಗಡಿ ಮುಂಗಟ್ಟು ಬಂದ್ ಆಗಿದ್ದರಿಂದ ಗದಗ- ಬೆಟಗೇರಿ ಸ್ತಬ್ಧವಾಗಿತ್ತು.

ನರಗುಂದದಲ್ಲಿ ಹೆಚ್ಚಿದ ಕಿಚ್ಚು: ನರಗುಂದದಲ್ಲಿ ಜರುಗಿದ ಪ್ರತಿಭಟನೆಯಲ್ಲಿ 3 ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು. ಶಿವಾಜಿ ವೃತ್ತದಲ್ಲಿ ಜಮಾವಣೆಗೊಂಡ ರೈತರು ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟ ವೇದಿಕೆಗೆ ಆಗಮಿಸಿದ ಕೂಡಲಸಂಗಮದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಭೇಟಿ ನೀಡಿದರು.

ಸೊಬರದಮಠ ಉಪವಾಸ ಅಂತ್ಯ: ಆರು ದಿನಗಳಿಂದ ಆಮರಣ ಉಪವಾಸ ಕುಳಿತಿದ್ದ ರೈತ ಸೇನಾ ನಾಯಕ ವೀರೇಶಸ್ವಾಮಿ ಸೊಬರದಮಠ ಶುಕ್ರವಾರ ರಾತ್ರಿ ಉಪವಾಸ ಸತ್ಯಾಗ್ರಹ ನಿಲ್ಲಿಸಿದರು. ಸಚಿವ ವಿನಯ ಕುಲಕರ್ಣಿ, ಕೂಡಲಸಂಗಮ ಶ್ರೀಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ ನೇತೃತ್ವದ ತಂಡ ವೀರೇಶಸ್ವಾಮಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು.

 ನವಲಗುಂದಕ್ಕೆ ಬಿಎಸ್​ವೈ ಬರಲಿ

ನವಲಗುಂದ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರ ಸಲುವಾಗಿ ರಕ್ತ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಆ ಮಾತನ್ನು ನವಲಗುಂದ ರೈತ ಹೋರಾಟಕ್ಕೆ ಬಂದು ಹೇಳಲಿ ಎಂದು ಶಾಸಕ ಮಧು ಬಂಗಾರಪ್ಪ ಸವಾಲು ಹಾಕಿದರು.ನವಲಗುಂದದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜೆಡಿಎಸ್ ಪರ್ಯಾಯ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕಳಸಾ- ಬಂಡೂರಿ ಯೋಜನೆ ಅನುಷ್ಠಾನ ಕನಸಾಗಿ ಉಳಿದಿದೆ. ಗೋವಾ ರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ರೈತರ ಸಮಸ್ಯೆಗೆ ಪರಿಹಾರ ಒದಗಿಸದ ಪ್ರಧಾನಮಂತ್ರಿಗಳು ನಮಗೆ ಬೇಕಾ? ಎಂದು ಪ್ರಶ್ನಿಸಿದರು.

 ಸ್ಮಾರಕದ ಹತ್ತಿರವೂ ಬಿಡಲಿಲ್ಲ!

ನವಲಗುಂದದ ಹುತಾತ್ಮ ಬಸಪ್ಪ ಲಕ್ಕುಂಡಿ ಸ್ಮಾರಕಕ್ಕೆ ಮಾಲಾರ್ಪಣೆಗೆ ಯಾವೊಬ್ಬ ರಾಜಕಾರಣಿಯೂ ಹತ್ತಿರ ಸುಳಿಯದಂತೆ ಹೋರಾಟಗಾರರು ಎಚ್ಚರ ವಹಿಸಿದ್ದರು. ಚುನಾಯಿತ ಪ್ರತಿನಿಧಿಗಳಿಗೆ ದಿಗ್ಬಂಧನ ಹಾಕಿದರು. ಬರುವ ಹಾಗಿದ್ದರೆ ಮೊದಲು ರಾಜೀನಾಮೆ ನೀಡಿ ಬನ್ನಿ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top