Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಇನಿಂಗ್ಸ್ ಮುನ್ನಡೆಗಾಗಿ ಭಾರಿ ಪೈಪೋಟಿ

Sunday, 12.11.2017, 3:03 AM       No Comments

| ರಘುನಾಥ್ ಡಿ.ಪಿ. ಬೆಂಗಳೂರು

ಮೊದಲೆರಡು ದಿನ ಬಿಸಿಲಿನಿಂದ ಕಾದಿದ್ದ ಆಲೂರಿನ ಮೈದಾನದಲ್ಲಿ ಶನಿವಾರ ಸಂಪೂರ್ಣ ತಂಪಾದ ವಾತಾವರಣ. ಇಂಥ ತಂಪಾದ ವಾತಾವರಣದಲ್ಲಿ ಅನುಭವಿ ಆಟಗಾರ ಗೌತಮ್ ಗಂಭೀರ್ ತೋರಿದ ತಾಳ್ಮೆಯ ಹೋರಾಟಕ್ಕೆ ರಾಜ್ಯ ಬೌಲರ್​ಗಳು ಪ್ರತಿಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪದೇ ಪದೇ ಬೌಲರ್​ಗಳ ಜತೆಗೆ ಫೀಲ್ಡಿಂಗ್ ವಿಭಾಗದಲ್ಲಿ ಬದಲಾವಣೆ ತಂದರೂ ಮಾಜಿ ನಾಯಕ ಗಂಭೀರ್ ದಿನಪೂರ್ತಿ ಕಾಡಿದರು. ಇದರಿಂದ ಪಂದ್ಯ ಡ್ರಾದತ್ತ ಸಾಗಿದ್ದರೂ, ಇನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಬಾಚಿಕೊಳ್ಳಲು ಕರ್ನಾಟಕ-ದೆಹಲಿ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಿಲಿಕಾನ್ ಸಿಟಿ ಹೊರವಲಯದಲ್ಲಿರುವ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಗಂಭೀರ್ (135 ರನ್, 237 ಎಸೆತ, 20 ಬೌಂಡರಿ) ಅಜೇಯ ಶತಕದಾಟದ ನೆರವಿನಿಂದ ಪ್ರವಾಸಿ ದೆಹಲಿ ತಂಡ ಪ್ರತಿಹೋರಾಟ ನಡೆಸಿತು.

ಕರ್ನಾಟಕ ಮೊದಲ ಇನಿಂಗ್ಸ್​ನಲ್ಲಿ ಗಳಿಸಿದ್ದ 649ರನ್​ಗಳಿಗೆ ಪ್ರತಿಯಾಗಿ ದೆಹಲಿ ತಂಡ 3ನೇ ದಿನದಾಟಕ್ಕೆ 4 ವಿಕೆಟ್​ಗೆ 277ರನ್ ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು 372 ರನ್​ಗಳ ಅವಶ್ಯಕತೆ ಇದೆ. ಜತೆಗೆ ಫಾಲೋಆನ್ ಭೀತಿಯಿಂದ ಪಾರಾಗಲು ಇನ್ನೂ 223 ರನ್​ಗಳಿಸಬೇಕಿದೆ. ಮಂದ ಬೆಳಕಿನಿಂದಾಗಿ ದಿನದಾಟದ 11 ಓವರ್​ಗಳು ಬಾಕಿ ಇರುವಾಗಲೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಶತಕ ಸಾಧಕ ಗೌತಮ್ ಗಂಭೀರ್ ಹಾಗೂ ಮಿಲಿಂದ್ ಕುಮಾರ್ (10) 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಜ್ಯದ ಪರ ಸ್ಟುವರ್ಟ್ ಬಿನ್ನಿ 2 ವಿಕೆಟ್ ಕಬಳಿಸಿ ಗಮನಸೆಳೆದರು. ಮಿಥುನ್ ಹಾಗೂ ಕೆ.ಗೌತಮ್ ತಲಾ ಒಂದು ವಿಕೆಟ್ ಪಡೆದರು.

ಕಾಡಿದ ಗೌತಮ್ ಗಂಭೀರ್

ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಗೌತಮ್ ಗಂಭೀರ್ ದಿನಪೂರ್ತಿ ಕ್ರೀಸ್​ನಲ್ಲಿ ನಿಲ್ಲುವ ಮೂಲಕ ಆತಿಥೇಯ ರಾಜ್ಯ ತಂಡದ ಆಟಗಾರರನ್ನು ಕಾಡಿದರು. ಒಂದು ತುದಿಯಲ್ಲಿ ಕ್ರೀಸ್​ಗೆ ಅಂಟಿಕೊಂಡಿದ್ದ ಗಂಭೀರ್ ವಿಕೆಟ್ ಕಬಳಿಸಲು ರಾಜ್ಯದ ಬೌಲರ್​ಗಳು ಇನ್ನಿಲ್ಲದ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಉನ್ಮುಕ್ತ್ ಚಂದ್ ನಿರ್ಗಮನದ ಬಳಿಕ ಧ್ರುವ್ ಶೋರೆ (64) ಜತೆಗೂಡಿ ವಿನಯ್ ಕುಮಾರ್ ಪಡೆಗೆ ತಿರುಗೇಟು ನೀಡಲು ಗಂಭೀರ್ ಯಶಸ್ವಿಯಾದರು. ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಆಘಾತ ನೀಡಿದ್ದ ಸಂಭ್ರಮದಲ್ಲಿದ್ದ ರಾಜ್ಯ ಆಟಗಾರರ ಹುಮ್ಮಸ್ಸು ಹೆಚ್ಚು ಹೊತ್ತು ಉಳಿಯಲಿಲ್ಲ. ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡಿದ್ದ ಈ ಜೋಡಿ 2ನೇ ವಿಕೆಟ್​ಗೆ 110ರನ್ ಕಲೆಹಾಕಿತು. ಭೋಜನ ವಿರಾಮದ ಬಳಿಕ ನಡೆದ 5ನೇ ಓವರ್ ಎಸೆದ ಮಿಥುನ್ ಕುಮಾರ್, ಧ್ರುವ ಶೋರೆ ಅವರನ್ನು ಬೌಲ್ಡ್ ಮಾಡುವ ಮೂಲಕ ಆತಿಥೇಯ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿದರು. ನಂತರ ಬಂದ ಸ್ಪೋಟಕ ಬ್ಯಾಟ್ಸ್​ಮನ್ ನಿತೀಶ್ ರಾಣಾ (9) ಮರು ಎಸೆತದಲ್ಲೆ ಕ್ಯಾಚ್ ನೀಡಿದರೂ ಮನೀಷ್ ಪಾಂಡೆ ಕೈಚೆಲ್ಲಿದರು. ಬಳಿಕ ಮೂರು ಓವರ್​ಗಳ ಅಂತರದಲ್ಲೇ ಸ್ಟುವರ್ಟ್ ಬಿನ್ನಿ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಹೋದ ರಾಣಾ ಡೀಪ್ ಫೈನ್ ಲೆಗ್​ನಲ್ಲಿದ್ದ ಮಿಥುನ್ ಹಿಡಿದ ಅದ್ಭುತ ಕ್ಯಾಚ್​ಗೆ ಔಟಾದರು.

ಇನಿಂಗ್ಸ್ ಸೋಲಿನ ಭೀತಿಯಲ್ಲಿ ಮುಂಬೈ

ಬೆಂಗಳೂರು: 500ನೇ ರಣಜಿ ಪಂದ್ಯವಾಡುತ್ತಿರುವ 41 ಬಾರಿ ಚಾಂಪಿಯನ್ ಮುಂಬೈ ತಂಡ ಸಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಇನಿಂಗ್ಸ್ ಸೋಲಿನ ಭೀತಿಯಲ್ಲಿದೆ. ಮೊದಲ ಇನಿಂಗ್ಸ್ ನಲ್ಲಿ ಮುಂಬೈ ಗಳಿಸಿದ 171ರನ್ ಪ್ರತಿಯಾಗಿ ಬರೋಡ 9 ವಿಕೆಟ್​ಗೆ 575ರನ್​ಗಳಿಸಿತು. ಇದರಿಂದ 404ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ 4 ವಿಕೆಟ್​ಗೆ 104ರನ್ ಗಳಿಸಿದ್ದು, ಇನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 302ರನ್ ಗಳಿಸಬೇಕಿದೆ. ಡಿ ಗುಂಪಿನ ಪಂದ್ಯದಲ್ಲಿ ಛತ್ತೀಸ್​ಗಢ ತಂಡ (456), ಹಿಮಾಚಲ ಪ್ರದೇಶ (175 ಮತ್ತು 167) ವಿರುದ್ಧ ಇನಿಂಗ್ಸ್ ಹಾಗೂ 114ರನ್​ಗಳಿಂದ ಜಯ ದಾಖಲಿಸಿತು. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬಂಗಾಳ (207 ಮತ್ತು 3 ವಿಕೆಟ್​ಗೆ 86), ವಿದರ್ಭ ತಂಡ (499) ವಿರುದ್ಧ ಸೋಲಿನ ಸುಳಿಯಲ್ಲಿ ಸಿಲುಕಿದೆ. ಸಂಘಟಿತ ಬ್ಯಾಟಿಂಗ್ ನೆರವಿನಿಂದ ರೈಲ್ವೇಸ್ ತಂಡ (330ಕ್ಕೆ 5) ಎ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ (481) ತಂಡಕ್ಕೆ ತಿರುಗೇಟು ನೀಡುವ ಸೂಚನೆ ನೀಡಿದೆ. ಸಿ ಗುಂಪಿನ ಪಂದ್ಯದಲ್ಲಿ ಒಡಿಶಾ (4 ವಿಕೆಟ್​ಗೆ 286) ತಂಡ ತಮಿಳುನಾಡು (8 ವಿಕೆಟ್​ಗೆ 530) ತಂಡಕ್ಕೆ ಪ್ರತಿರೋಧ ನೀಡುವ ಸೂಚನೆ ನೀಡಿದೆ.

ಗೌತಮ್ ಗಂಭೀರ್ ಪ್ರಸಕ್ತ ರಣಜಿ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು. ಇದಕ್ಕೂ ಮೊದಲು ಅಸ್ಸಾಂ ವಿರುದ್ಧ ಮೊದಲ ಶತಕ ದಾಖಲಿಸಿದ್ದರು. ಜತೆಗೆ ಉತ್ತರ ಪ್ರದೇಶ ವಿರುದ್ಧದ ಹಿಂದಿನ ಪಂದ್ಯದಲ್ಲಿ 86ರನ್ ಗಳಿಸಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಗಂಭೀರ್ ಸಿಡಿಸಿದ 41ನೇ ಶತಕ ಇದಾಗಿದೆ.

ಕರ್ನಾಟಕ ಪ್ರಥಮ ಇನಿಂಗ್ಸ್: 649

ದೆಹಲಿ ಪ್ರಥಮ ಇನಿಂಗ್ಸ್:

84 ಓವರ್​ಗಳಲ್ಲಿ 4 ವಿಕೆಟ್​ಗೆ 277

(ಶುಕ್ರವಾರ ವಿಕೆಟ್ ನಷ್ಟವಿಲ್ಲದೆ 20)

ಉನ್ಮುಕ್ತ್ ಚಂದ್ ಸಿ ಸಿಎಂ ಗೌತಮ್ ಬಿ ಬಿನ್ನಿ 16

ಗೌತಮ್ ಗಂಭೀರ್ ಬ್ಯಾಟಿಂಗ್ 135

ಶೋರೆ ಬಿ ಮಿಥುನ್ 64

ನಿತೀಶ್ ರಾಣಾ ಸಿ ಮಿಥುನ್ ಬಿ ಬಿನ್ನಿ 9

ರಿಷಭ್ ಪಂತ್ ಬಿ ಕೆ. ಗೌತಮ್41

ಮಿಲಿಂದ್ ಕುಮಾರ್ ಬ್ಯಾಟಿಂಗ್ 10

ಇತರೆ: 2, ವಿಕೆಟ್ ಪತನ: 1-39, 2-149, 3-166, 4-249. ಬೌಲಿಂಗ್: ವಿನಯ್ಕುಮಾರ್ 16-3-60-0, ಅಭಿಮನ್ಯು ಮಿಥುನ್ 17-4-56-1, ಸ್ಟುವರ್ಟ್ ಬಿನ್ನಿ 13-2-39-2, ಶ್ರೇಯಸ್ ಗೋಪಾಲ್ 16-2-64-0, ಕೆ. ಗೌತಮ್ 20-4-46-1, ಕರುಣ್ ನಾಯರ್ 2-0-12-0.

ದೆಹಲಿಗೆ ಸ್ಟುವರ್ಟ್ ಬಿನ್ನಿ ಆಘಾತ

ಆತಿಥೇಯ ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಪ್ರವಾಸಿ ದೆಹಲಿ ತಂಡಕ್ಕೆ ದಿನದಾಟದ ಆರಂಭದಲ್ಲೇ ಸ್ಟುವರ್ಟ್ ಬಿನ್ನಿ ಆಘಾತ ನೀಡಿದರು. ವಿಕೆಟ್ ನಷ್ಟವಿಲ್ಲದೆ 20ರನ್​ಗಳಿಂದ ದಿನದಾಟ ಆರಂಭಿಸಿದ ದೆಹಲಿ ಆರಂಭಿಕ ಆಘಾತ ಕಂಡಿತು. ಉನ್ಮುಕ್ತ್ ಚಂದ್ (16) ಬಿನ್ನಿಗೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ದೆಹಲಿಯ ಆರಂಭಿಕ ಜೋಡಿ ಮೊದಲ ವಿಕೆಟ್​ಗೆ 39 ರನ್ ಕಲೆಹಾಕಿ ಬೇರ್ಪಟ್ಟಿತು.

ಗಂಭೀರ್​ಗೆ ಸಾಥ್ ನೀಡಿದ ರಿಷಭ್

ಮಿಥುನ್-ಬಿನ್ನಿ ನೀಡಿದ ಶಾಕ್​ನಿಂದ ಕೇವಲ 17ರನ್​ಗಳ ಅಂತರದಲ್ಲಿ 2 ವಿಕೆಟ್ ಕಬಳಿಸಿದ ಕರ್ನಾಟಕ, ಪ್ರವಾಸಿ ತಂಡದ ಮೇಲೆ ಒತ್ತಡ ಹೇರಲು ಯಶಸ್ವಿಯಾಯಿತು. ದೆಹಲಿ ತಂಡ 166 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು 3ನೇ ದಿನದಾಟದಲ್ಲೇ ಸರ್ವಪತನವಾಗುವ ಭೀತಿಯಲ್ಲಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಗಂಭೀರ್ ಜತೆಗೂಡಿದ ನಾಯಕ ರಿಷಭ್ ಪಂತ್(41) 4ನೇ ವಿಕೆಟ್​ಗೆ 83 ರನ್ ಸೇರಿಸಿ ರಾಜ್ಯದ ಕನಸಿಗೆ ಅಡ್ಡಿಯಾದರು. ಜತೆಗೆ ಗಂಭೀರ್ ವೈಯಕ್ತಿಕ 76 ರನ್ ಗಳಿಸಿದ್ದ ವೇಳೆ ರಾಜ್ಯದ ಸಮರ್ಥ್ ಮಾಡಿದ ಎಡವಟ್ಟಿನಿಂದಾಗಿ ರನೌಟ್​ನಿಂದ ಪಾರಾದರು. ಚಹಾವಿರಾಮಕ್ಕೂ ಮೊದಲೇ ಪ್ರಸಕ್ತ ಆವೃತ್ತಿಯ 2ನೇ ಶತಕ ಪೂರೈಸಿಕೊಂಡ ಗಂಭೀರ್ ರಾಜ್ಯವನ್ನು ಕಾಡಿದರು.ಅ

Leave a Reply

Your email address will not be published. Required fields are marked *

Back To Top