Friday, 17th August 2018  

Vijayavani

Breaking News

ಇತರರಿಗಾದರೂ ಸ್ಫೂರ್ತಿಯಾಗಿ

Wednesday, 13.06.2018, 3:02 AM       No Comments

| ನಿರೂಪಣೆ: ಗಂಗಾವತಿ ಪ್ರಾಣೇಶ್

ಒಬ್ಬ ಹರಿದಾಸರು ಹಳ್ಳಿಗೆ ಹರಿಕಥೆ ಮಾಡಲು ಹೋದರು. ಆ ಊರಿನ ಕೆಲ ಸಾತ್ವಿಕರು ಹರಿಕಥಾ ಕಾರ್ಯಕ್ರಮ ಏರ್ಪಡಿಸಿ ಆ ಊರಿನ ಪಟೇಲರಿಗೆ ವಿಶೇಷ ಆಮಂತ್ರಣ ಕೊಟ್ಟರು. ಅವರು ಎಲ್ಲ ಶಾಸ್ತ್ರಜ್ಞಾನ ಉಳ್ಳವರು ವಿದ್ಯಾವಂತರೂ ಆಗಿದ್ದರು. ಆದರೆ, ವಯೋಧರ್ಮದಿಂದಾಗಿ ಅವರಿಗೆ ಎರಡೂ ಕಿವಿ ಕೇಳಿಸುತ್ತಿರಲಿಲ್ಲ. ಪಟೇಲರು ಮುಂದೆ ಕುಳಿತು ತಾಳ ಹಾಕುತ್ತಾ ತಲೆದೂಗುತ್ತಾ ಕಥಾರಸವನ್ನು ಸವಿಯುತ್ತಿದ್ದರು. ದಾಸರಿಗೂ ಸ್ಪೂರ್ತಿ, ನೆರೆದವರಿಗೂ ಆನಂದ. ಕಾರ್ಯಕ್ರಮವೂ ಯಶಸ್ವಿಯಾಯ್ತು. ಮರುದಿನ ಯಾರೋ ಪಟೇಲರಿಗೆ ಎರಡೂ ಕಿವಿ ಕೇಳೋದಿಲ್ಲ ಎಂದಾಗ ದಾಸರಿಗೆ ಆಶ್ಚರ್ಯವಾಯ್ತು. ದಾಸರು ಪಟೇಲರ ಮನೆಗೆ ಹೋದರು. ಏಕೆ ಹರಿಕಥೆಗೆ ಬರುವಿರಿ ಎಂದು ಕೈ ಸನ್ನೆ ಮೂಲಕ ಪ್ರಶ್ನೆ ಮಾಡಿದರು. ಅದಕ್ಕೆ ಪಟೇಲರು, ‘ನೋಡಪ್ಪಾ, ನಾನು ಭಾಗ್ಯಹೀನ. ನನಗೆ ಕಿವಿ ಕೇಳೋದಿಲ್ಲ. ಆದರೆ, ನಾನು ಹರಿಕಥೆ ಕೇಳಲು ಬಂದೆ ಎಂದರೆ ಊರವರೆಲ್ಲ ಬರುತ್ತಾರೆ. ಏಕೆಂದರೆ ಅವರಿಗೆ ನನ್ನ ಮೇಲೆ ವಿಶ್ವಾಸವಿದೆ. ಹೇಳುವ ದಾಸರಿಗೂ ಸ್ಪೂರ್ತಿ ದೊರಕುತ್ತದೆ. ಅದಕ್ಕೆ ನಾನು ಮುಂದೆ ಬಂದು ಕೂರುವೆ. ಎಲ್ಲರ ಆನಂದವೇ ನನ್ನ ಆನಂದ’ ಎಂದರಂತೆ. ನಮಗೆ ಅನೇಕ ರಸ ಗ್ರಹಣ ಮಾಡುವ ಶಕ್ತಿ ಇರುವುದಿಲ್ಲ. ಆದರೆ ಇತರರಿಗೆ ಸ್ಪೂರ್ತಿ ಆಗದೇ ಸುಮ್ಮನಿರಬೇಕು ಎಂದು ಯಾರೂ ಹೇಳಿಲ್ಲವಲ್ಲ. ಹೀಗೂ ಚಿಂತಿಸಿದರೆ ನಾವು ಅನೇಕರಿಗೆ ಸ್ಪೂರ್ತಿದಾತರಾಗುತ್ತೇವೆ.

Leave a Reply

Your email address will not be published. Required fields are marked *

Back To Top