Friday, 23rd March 2018  

Vijayavani

Breaking News

ಇಗ್ನೋದಿಂದ ನೇಕಾರರ ಸಭೆ

Saturday, 07.10.2017, 3:00 AM       No Comments

ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ವಿಜಯಪುರದ ಪ್ರಾದೇಶಿಕ ಕೇಂದ್ರ ಇತ್ತೀಚೆಗೆ ನೇಕಾರರ ಸಭೆ ನಡೆಸಿತು. ಇಗ್ನೋ ಮೂಲಕ ಪ್ರವೇಶ ಪಡೆದ ನಂತರ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಳ ಮತ್ತು ಅನುಕೂಲದ ಬಗ್ಗೆ ವಿದ್ಯಾರ್ಥಿಗಳು ವಿಚಾರ ಹಂಚಿಕೊಂಡರು.

ಮುಖ್ಯ ಅತಿಥಿಯಾಗಿ ವಿಜಯಪುರ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮತ್ತು ಇಗ್ನೋ ವಿಜಯಪುರ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಾ. ಎಸ್. ರಾಧಾ ಭಾಗವಹಿಸಿದ್ದರು. ವಿಜಯಪುರದಲ್ಲಿರುವ ಜವಳಿ ಮತ್ತು ಕೈ ಮಗ್ಗದ ಆಧಿಕಾರಿಗಳು, ನೇಯ್ಗೆ ಕಲಿಯುತ್ತಿರುವವರು, ಬಾಗಲಕೋಟೆಯ ಬನಾಟಿ ಹಳ್ಳಿಯ ನೇಕಾರರು ಭಾಗವಹಿಸಿದ್ದರು.

ಗೋಳಸಂಗಿ ನೇಕಾರ ಸಮುದಾಯದ ಅಧ್ಯಕ್ಷ ಶಂಕರಪ್ಪ, ಜವಳಿ ಉತ್ಪನ್ನಗಳ ಪ್ರಚಾರ ವಿಭಾಗದ ಅಧಿಕಾರಿ ವಾಗ್ಮೋರ್ ಸೇರಿ 50 ನೇಯ್ಗೆ ಕಲಿಕೆದಾರರಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಉದ್ಯಮಿಗಳು ಜವಳಿ ಕ್ಷೇತ್ರದಲ್ಲಿನ ತಾಂತ್ರಿಕ ಬೆಳವಣಿಗೆ, ಸಮಯ ಮತ್ತು ವೆಚ್ಚದ ಉಳಿತಾಯಕ್ಕೆ ಮಾಗೋಪಾಯಗಳು, ಕೌಶಲಾಭಿವೃದ್ಧಿಗೆ ತರಬೇತಿಗಳ ಕುರಿತು ಮಾಹಿತಿ ನೀಡಿದರು. ಇಗ್ನೋ ಮೂಲಕ ಪ್ರವೇಶ ಪಡೆದಿರುವ ನೇಕಾರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಕೇಂದ್ರ ಜವಳಿ ಇಲಾಖೆಯು ಇಗ್ನೋ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *

Back To Top