Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ಇಂದು ಮುಂಬೈ-ಕೆಕೆಆರ್ ಸೆಮಿಫೈನಲ್ ಫೈಟ್

Friday, 19.05.2017, 3:01 AM       No Comments

ಬೆಂಗಳೂರು: ಹಾಲಿ ಚಾಂಪಿಯನ್ ಸನ್​ರೈಸರ್ಸ್ ವಿರುದ್ಧ ಐಪಿಎಲ್ ಎಲಿಮಿನೇಟರ್ ಪಂದ್ಯದ ‘ಮಧ್ಯರಾತ್ರಿ’ ಗೆಲುವಿನ ಸಂಭ್ರಮ ಆಚರಿಸಲು ಕೋಲ್ಕತ ನೈಟ್​ರೈಡರ್ಸ್​ಗೆ ತೀರಾ ಅಲ್ಪ ಸಮಯ ಸಿಕ್ಕಿದೆ. ಕೇವಲ ಒಂದು ದಿನದ ಅಂತರದಲ್ಲಿ ಮತ್ತೊಂದು ಮಹತ್ವದ ಪಂದ್ಯವಾಡಲು ಎರಡು ಬಾರಿಯ ಚಾಂಪಿಯನ್ ಗೌತಮ್ ಗಂಭೀರ್ ಪಡೆ ಸಜ್ಜಾಗಿದೆ. 10ನೇ ಆವೃತ್ತಿಯ ಫೈನಲ್ ಸ್ಥಾನಕ್ಕಾಗಿ ಶುಕ್ರವಾರ, ಹಳೆ ಎದುರಾಳಿಗಳಾದ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ ನೈಟ್​ರೈಡರ್ಸ್ ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ತಂಡ ಅತ್ಯಂತ ನಿಕೃಷ್ಟ ದಾಖಲೆಯನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಹೊಂದಿದೆ. ಉಭಯ ತಂಡಗಳು ಈವರೆಗೂ 20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಕೋಲ್ಕತ ಫ್ರಾಂಚೈಸಿ ಜಯದ ನಗು ಬೀರಿದ್ದು ಕೇವಲ 5 ಪಂದ್ಯಗಳಲ್ಲಿ! ಅದಲ್ಲದೆ, ಹಾಲಿ ಆವೃತ್ತಿಯ ಲೀಗ್ ಹಂತದಲ್ಲೂ ಮುಂಬೈ ತಂಡದ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಎಲ್ಲ ಸೋಲುಗಳಿಗೆ ಒಂದೇ ಪಂದ್ಯದ ಮೂಲಕ ಸೇಡು ತೀರಿಸಿಕೊಳ್ಳುವ ಅವಕಾಶ ಕೆಕೆಆರ್ ಮುಂದಿದೆ. ಐಪಿಎಲ್​ನ ಬಹುಮುಖ್ಯ ಪ್ಲೇಆಫ್ ಹಂತಗಳಲ್ಲಿ ಆಡಿದ ಪಂದ್ಯಗಳಲ್ಲಿ ಎರಡೂ ತಂಡಗಳು ಸೋಲು ಕಂಡಿವೆ. ಈ ಪಂದ್ಯದಲ್ಲಿ ಸಾಧಿಸಿದ ಗೆಲುವು ಹೈದರಾಬಾದ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ತಂಡದ ವಿಶ್ವಾಸ ವೃದ್ಧಿಸಲು ನೆರವಾಗಲಿದೆ.

ಐಪಿಎಲ್-10ರಲ್ಲಿ ಮುಂಬೈ ಇಂಡಿಯನ್ಸ್ ಎಲ್ಲ ವಿಭಾಗದಲ್ಲೂ ಅತ್ಯುತ್ತಮ ನಿರ್ವಹಣೆ ತೋರಿದ್ದರೂ, ಬ್ಯಾಟಿಂಗ್ ವಿಭಾಗದ ನಿರ್ವಹಣೆ ಒಂದು ಕೈ ಮೇಲೆ ಎಂದರೆ ತಪ್ಪಾಗಲಾರದು. ಲೆಂಡ್ಲ್ ಸಿಮನ್ಸ್ ಹಾಗೂ ಪಾರ್ಥಿವ್ ಪಟೇಲ್ ಆರಂಭಿಕ ಜೋಡಿ, ನಾಯಕ ರೋಹಿತ್ ಶರ್ಮ, ಅಂಬಟಿ ರಾಯುಡು ಹಾಗೂ ಕೈರಾನ್ ಪೊಲ್ಲಾರ್ಡ್ ಉತ್ತಮ ಫಾಮರ್್​ನಲ್ಲಿದ್ದಾರೆ. ಅದರೊಂದಿಗೆ ಪಾಂಡ್ಯ ಸಹೋದರರು ಕೂಡ ಅಗತ್ಯ ಸಂದರ್ಭಗಳಲ್ಲಿ ತಂಡದ ನೆರವಿಗೆ ಬಂದಿದ್ದಾರೆ. ಇದರಿಂದಾಗಿ ಲೀಗ್ ಹಂತದಲ್ಲಿ 10 ಗೆಲುವು ಸಂಪಾದಿಸಿದ್ದ ಮುಂಬೈ ಇಂಡಿಯನ್ಸ್, ಪುಣೆ ವಿರುದ್ಧ ಕ್ವಾಲಿಫೈಯರ್-1ರಲ್ಲಿ ಎದುರಾದ ಸೋಲನ್ನು ಮರೆತು ಕೆಕೆಆರ್ ತಂಡವನ್ನು ಎದುರಿಸಬೇಕಿದೆ. ಮುಂಬೈ ಇಂಡಿಯನ್ಸ್ ತಂಡ ತನ್ನ ಬ್ಯಾಟಿಂಗ್ ಬಲದ ಮೇಲೆ ಹೆಚ್ಚಿನ ನಂಬಿಕೆ ಇರಿಸಿದ್ದರೆ, ಕೋಲ್ಕತ ನೈಟ್​ರೈಡರ್ಸ್ ತಂಡಕ್ಕೆ ಬೌಲಿಂಗ್ ಪ್ರಮುಖ ಶಕ್ತಿ. ಎಲಿಮಿನೇಟರ್ ಪಂದ್ಯವನ್ನು ಬೆಂಗಳೂರಿನಲ್ಲಿಯೇ ಆಡಿರುವ ಕಾರಣ ಕೆಕೆಆರ್, ಮತ್ತೊಂದು ಜಯದ ನಿರೀಕ್ಷೆ ಇಟ್ಟಿದೆ.

ಸಬ್​ಏರ್​ಗೆ ಮತ್ತೊಮ್ಮೆ ಮಳೆ ಸವಾಲು

ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಶುಕ್ರವಾರವೂ ಮಳೆ ಬರುವ ಹೆಚ್ಚಿನ ಸಾಧ್ಯತೆ ಇದೆ. ಹಾಗಿದ್ದರೂ ಪಂದ್ಯ ಮಾತ್ರ ನಡೆಯುವ ವಿಶ್ವಾಸ ಎಲ್ಲರಲ್ಲಿದೆ. ನೀರು ಹೀರಿಕೊಳ್ಳುವ ಸಬ್-ಏರ್ ವ್ಯವಸ್ಥೆಯನ್ನು ಮೈದಾನಕ್ಕೆ ಅಳವಡಿಸಿರುವ ಕಾರಣ, ಮಳೆ ನಿಂತ ಕೆಲವೇ ಹೊತ್ತಿನಲ್ಲಿ ಪಂದ್ಯ ಆರಂಭವಾಗುತ್ತದೆ. ಹವಾಮಾನದ ಬಗ್ಗೆ ಎರಡೂ ತಂಡಗಳು ಗಮನ ನೀಡಲಿದ್ದು, ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಸೂಪರ್ ಓವರ್ ಕೂಡ ಇಲ್ಲದೆ ಪಂದ್ಯ ರದ್ದಾದರೆ ಟೂರ್ನಿ ನಿಯಮದಂತೆ, ಲೀಗ್ ಅಗ್ರಸ್ಥಾನಿ ಮುಂಬೈ ಮುನ್ನಡೆಯಲಿದೆ.

 ಕೋಲ್ಕತ ನೈಟ್​ರೈಡರ್ಸ್

ಸಂಭಾವ್ಯ ತಂಡ: ರಾಬಿನ್ ಉತ್ತಪ್ಪ, ಕ್ರಿಸ್ ಲ್ಯಾನ್, ಗೌತಮ್ ಗಂಭೀರ್, ಇಶಾಂಕ್ ಜಗ್ಗಿ, ಯೂಸುಫ್ ಪಠಾಣ್, ಸೂರ್ಯಕುಮಾರ್ ಯಾದವ್/ಕುಲ್​ದೀಪ್ ಯಾದವ್, ಸುನೀಲ್ ನಾರಾಯಣ್, ಪೀಯುಷ್ ಚಾವ್ಲಾ, ಉಮೇಶ್ ಯಾದವ್, ನಾಥನ್ ಕೌಲ್ಟರ್ ನಿಲ್, ಟ್ರೆಂಟ್ ಬೌಲ್ಟ್

ಲೀಗ್ ನಿರ್ವಹಣೆ: 14 ಪಂದ್ಯ, 8 ಗೆಲುವು, 6 ಸೋಲು

ಹಿಂದಿನ ಪಂದ್ಯ: ಎಲಿಮಿನೇಟರ್ ಮುಖಾಮುಖಿಯಲ್ಲಿ ಸನ್​ರೈಸರ್ಸ್ ವಿರುದ್ಧ 7 ವಿಕೆಟ್ ಗೆಲುವು.

ಮುಂಬೈ ಇಂಡಿಯನ್ಸ್

ಸಂಭಾವ್ಯ ತಂಡ: ಲೆಂಡ್ಲ್ ಸಿಮನ್ಸ್, ಪಾರ್ಥಿವ್ ಪಟೇಲ್, ರೋಹಿತ್ ಶರ್ಮ, ಅಂಬಟಿ ರಾಯುಡು, ಕೈರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚೆಲ್ ಮೆಕ್ಲೀನಘನ್, ಕರ್ಣ್ ಶರ್ಮ/ಹರ್ಭಜನ್ ಸಿಂಗ್, ಜಸ್​ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ.

ಲೀಗ್ ನಿರ್ವಹಣೆ: 14 ಪಂದ್ಯ, 10 ಗೆಲುವು, 4 ಸೋಲು

ಹಿಂದಿನ ಪಂದ್ಯ: ಕ್ವಾಲಿಫೈಯರ್-1 ಮುಖಾಮುಖಿಯಲ್ಲಿ ಪುಣೆ ಸೂಪರ್​ಜೈಂಟ್ ವಿರುದ್ಧ 20 ರನ್ ಸೋಲು.

ರಂಭ: ರಾತ್ರಿ 8.00, ಎಲ್ಲಿ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು, ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಮ್ಯಾಕ್ಸ್ ಸೋನಿ ಇಎಸ್​ಪಿಎನ್


ಚಾಂಪಿಯನ್ಸ್ ಟ್ರೋಫಿಯಿಂದಲೂ ಮನೀಷ್ ಔಟ್, ಕಾರ್ತಿಕ್​ಗೆ ಸ್ಥಾನ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಮನೀಷ್ ಪಾಂಡೆ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಅವರ ಬದಲು ವಿಕೆಟ್ಕೀಪರ್-ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್​ರನ್ನು ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಐಪಿಎಲ್​ನಲ್ಲಿ ಕೆಕೆಆರ್​ನ ಎಲಿಮಿನೇಟರ್ ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ ಎದೆ ಎಡಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಇದರಿಂದಾಗಿ ಮನೀಷ್, ಸನ್​ರೈಸರ್ಸ್ ವಿರುದ್ಧದ ಬುಧವಾರದ ಪಂದ್ಯ ಆಡಿರಲಿಲ್ಲ. ಗಾಯ ಗಂಭೀರವಾಗಿರುವ ಕಾರಣ ಮನೀಷ್ ಐಪಿಎಲ್​ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ‘ಮೂರು ಬಾರಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತ ತಂಡದಲ್ಲಿದ್ದ ಅನುಭವ ಹಾಗೂ ಐಪಿಎಲ್ ಫಾಮ್ರ್ ಗಮನದಲ್ಲಿಟ್ಟುಕೊಂಡು 31 ವರ್ಷದ ದಿನೇಶ್ ಕಾರ್ತಿಕ್​ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *

one × 5 =

Back To Top