Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಇಂದು ಮಹಾ ಸರ್​ಪ್ರೖೆಸ್?

Thursday, 21.12.2017, 3:05 AM       No Comments

ಹುಬ್ಬಳ್ಳಿ/ನವದೆಹಲಿ: ದಶಕಗಳ ಕಾಲದಿಂದ ನನೆಗುದಿಗೆ ಬಿದ್ದಿರುವ ಮಹದಾಯಿ, ಕಳಸಾ- ಬಂಡೂರಿ ಸಮಸ್ಯೆಗೆ ಹುಬ್ಬಳ್ಳಿಯಲ್ಲಿ ಗುರುವಾರ ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ಪರಿಹಾರ ಸೂತ್ರ ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸಹಿತ ರಾಜ್ಯದ ಹಲವು ಬಿಜೆಪಿ ನಾಯಕರು, ಗೋವಾ ಸಿಎಂ ಮನೋಹರ ಪರಿಕ್ಕರ್ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನವದೆಹಲಿಯಲ್ಲಿ ಬುಧವಾರ ಮಹತ್ವದ ಸಭೆ ನಡೆಸಿದ್ದು, ನೀರು ಹಂಚಿಕೆ ಸಂಬಂಧ ಸಂಧಾನಸೂತ್ರವೊಂದು ಸಿದ್ಧಗೊಂಡಿದೆ ಎನ್ನಲಾಗಿದೆ. ಮಂಗಳವಾರ ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಯಡಿಯೂರಪ್ಪ ಬುಧವಾರ

ಬೆಳಗ್ಗೆ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಜತೆಗೂಡಿ ದೆಹಲಿಗೆ ತೆರಳಿ ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಕುತೂಹಲಕ್ಕೆ ಇಂದು ತೆರೆ: ಹಲವು ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿರುವ ಹುಬ್ಬಳ್ಳಿ ನೆಲ ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಬಿಜೆಪಿ ನಾಯಕರು ಸಿಹಿ ಸುದ್ದಿ ನೀಡಲಿದ್ದಾರೆಯೇ? ಎಂಬುದು ಡಿ. 21ರಂದು ಗೊತ್ತಾಗಲಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಬುಧವಾರ ಬಂದ್​ಗೆ ಕರೆ ನೀಡಲಾಗಿತ್ತು. ಗುರುವಾರ ಬಿಕ್ಕಟ್ಟಿಗೆ ಪರಿಹಾರ ಸಿಗದಿದ್ದರೆ ರೈತರ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಬಹುದು.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ರಾಜಕೀಯ ಮೇಲುಗೈ ಸಾಧಿಸುವ ಪ್ರಯತ್ನ ನಡೆಸಿದೆ. ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಮಹದಾಯಿ ಬಿಕ್ಕಟ್ಟಿಗೆ ಪರಿಹಾರ ಸೂತ್ರವನ್ನು ಬಳಸಬಹುದು. ಬಿಜೆಪಿಯ ಲಿಂಗಾಯತ ಮುಖಂಡರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ದೂರ ಉಳಿದಿದ್ದಾರೆ. ಮಹದಾಯಿ ಬಿಕ್ಕಟ್ಟು ಪರಿಹಾರಕ್ಕೆ ಗೋವಾ ಕಾಂಗ್ರೆಸ್ ಪಕ್ಷದ ನಿಲುವು ಸಹ ಪ್ರಾಮುಖ್ಯತೆ ಪಡೆಯುತ್ತದೆ.

ಯೋಗಿ ಆದಿತ್ಯನಾಥ ಭಾಗಿ

ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 50 ಸಾವಿರಕ್ಕೂ ಹೆಚ್ಚು ಜನ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗುರುವಾರ ಮಧ್ಯಾಹ್ನ 2.30ಕ್ಕೆ ನಗರಕ್ಕೆ ಬಂದಿಳಿಯುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೂರುಸಾವಿರ ಮಠದಲ್ಲಿ ವಿಶ್ರಾಂತಿ ಪಡೆದು, ಸಂಜೆ 4ಕ್ಕೆ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ.

ಕಾಮಗಾರಿಯೇ ಮುಗಿದಿಲ್ಲ- ಗೋವಾ ನೀರು ಬಿಟ್ಟರೂ ಜನರಿಗೆ ಅದು ತಲುಪುವುದು ಅನುಮಾನ

ಕಳಸಾ-ಬಂಡೂರಿ ಉಪನದಿ ನೀರು ಬಿಡಲು ಗೋವಾ ಸರ್ಕಾರ ಒಪ್ಪಿಗೆ ನೀಡಿದರೂ ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ಶೀಘ್ರ ನೀರು ಹರಿಯಬಹುದೇ? 40 ಹಳ್ಳಿಗಳಿಗೆ ಕುಡಿಯುವ ನೀರು ದೊರಕಬಹುದೇ? ಎಂಬ ಪ್ರಶ್ನೆ ಉದ್ಭವಿಸಿದೆ. ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಕಳಸಾ ನಾಲಾ ನೀರು ಮಲಪ್ರಭಾ ನದಿಗೆ 15 ದಿನಗಳಲ್ಲಿ ಹರಿಸಬಹುದು. ಬಂಡೂರಿಯಿಂದ ನೀರು ಮಲಪ್ರಭಾ ನದಿಗೆ ಹರಿಯಬೇಕಾದರೆ ಒಂದೂವರೆ ವರ್ಷದಷ್ಟು ಕಾಲಾವಕಾಶದ ಅಗತ್ಯವಿದೆ. ಕಳಸಾ ಹಳ್ಳದ ಪ್ರದೇಶದಲ್ಲಿ ಇನ್ನು ಕೇವಲ 70 ಮೀ.ನಷ್ಟು ನಾಲಾ ಕಾಮಗಾರಿ ನಡೆಸಬೇಕು ಹಾಗೂ ಗೋವಾದತ್ತ ಹರಿಯುವ ಕಳಸಾ ನೀರನ್ನು ಕರ್ನಾಟಕದತ್ತ ತಿರುಗಿಸಲು ಚಿಕ್ಕ ತಡೆಗೋಡೆ ಕಟ್ಟಬೇಕು. ಗೋವಾ-ಕರ್ನಾಟಕ ಭಾಗದಲ್ಲಿ ನಿರ್ವಿುಸಿರುವ ತಾತ್ಕಾಲಿಕ ತಡೆಗೋಡೆ ತೆರವುಗೊಳಿಸಿದರೆ ಆಯಿತು. ಆಗ 3 ಟಿಎಂಸಿಯಷ್ಟು ನೀರು ಮಲಪ್ರಭಾ ನದಿ ಹರಿದುಬರುತ್ತದೆ. ಆದರೆ, ಬಂಡೂರಿ ನಾಲಾ ನೀರು ಪಡೆಯಲು ಕೈಗೊಳ್ಳಬೇಕಿರುವ ಸುಮಾರು 8 ಕಿಮೀನಷ್ಟು ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದೆ. ಬಂಡೂರಿಯಲ್ಲಿ ಇದುವರೆಗೆ ನಾಲಾ ನಿರ್ವಣಕ್ಕಾಗಿ ಯಾವುದೇ ಕಾಮಗಾರಿ ನಡೆದಿಲ್ಲ.

ಇಕ್ಕಟ್ಟಿನಲ್ಲಿ ಪರಿಕ್ಕರ್

ರಾಜ್ಯಕ್ಕೆ ನೀರು ಬಿಡಲು ಗೋವಾ ಸಿಎಂ ಪರಿಕ್ಕರ್ ಒಪ್ಪಿದರೆ, ಅಲ್ಲಿ ವಿರೋಧದ ಅಲೆ ಏಳುವ ಸಾಧ್ಯತೆಯಿದೆ. ಮಿತ್ರಪಕ್ಷ ಹಾಗೂ ವಿರೋಧ ಪಕ್ಷಗಳು ನೀರು ಬಿಡಲು ವಿರೋಧ ವ್ಯಕ್ತಪಡಿಸಿದಲ್ಲಿ ಮನೋಹರ ಪರಿಕ್ಕರ್ ಇಕ್ಕಟ್ಟಿನಲ್ಲಿ ಸಿಲುಕಲಿದ್ದಾರೆ.

ಕೋರ್ಟ್​ಗೆ ತಿಳಿಸಬೇಕು

ಸಂಧಾನ ಸೂತ್ರ ಏನೇ ಇದ್ದರೂ, ಮೊದಲು ಗೋವಾ ಸರ್ಕಾರ ನೀರು ಹರಿಸುವ ಕುರಿತ ಪ್ರಸ್ತಾವವನ್ನು ಕರ್ನಾಟಕ ಸರ್ಕಾರ ಮತ್ತು ಮಹದಾಯಿ ನ್ಯಾಯಾಧಿಕರಣಕ್ಕೆ ಸಲ್ಲಿಸಬೇಕಾಗುತ್ತದೆ. ಈ ಸೂತ್ರ ಸಮರ್ಪಕವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಅನಿಸಿದರೆ ಮಾತ್ರ ಕೋರ್ಟ್​ನಲ್ಲಿ ಗೋವಾ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಒಪ್ಪಬಹುದು. ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿದೆ ಎಂಬ ಭಾವನೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಇರುವ ಕಾರಣ ಬಿಜೆಪಿ ನಾಯಕರ ಸೂತ್ರವನ್ನು ತೂಗಿ-ಅಳೆದು ನೋಡಿಯೇ ರಾಜ್ಯ ಅಭಿಪ್ರಾಯ ನೀಡಲಿದೆ. ನ್ಯಾಯಾಧಿಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರೂ, ಗೋವಾ ಸರ್ಕಾರದ ಪ್ರಸ್ತಾವಕ್ಕೆ ನ್ಯಾಯಾಧಿಕರಣ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ.

ಕಾಂಗ್ರೆಸ್ ವಿರೋಧ

ಮಹದಾಯಿ ನೀರು ಪೂರೈಕೆ ಸಂಬಂಧ ಗೋವಾ ಬಿಜೆಪಿ ಸರ್ಕಾರ ಯಾವ ನಿರ್ಣಯ ತೆಗೆದುಕೊಂಡರೂ ಗೋವಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಬೇಕು ಎಂಬ ಸಂದೇಶ ವರಿಷ್ಠರಿಂದ ರವಾನೆಯಾಗಿದೆ. ‘ಮಹದಾಯಿ ವಿವಾದ ನಮ್ಮಿಂದ ಬಗೆಹರಿಯಿತು’ ಎಂದು ಬೀಗಲು ಬಿಜೆಪಿಗೆ ಅವಕಾಶ ನೀಡಬೇಡಿ. ಹಾಗೇ ಮಹದಾಯಿ ಸಂಧಾನ ಸೂತ್ರಕ್ಕೆ ಕಾಂಗ್ರೆಸ್ ವಿರೋಧಿಸಿತು ಎಂಬ ಜನಾಕ್ರೋಶ ರೂಪುಗೊಳ್ಳದಂತೆಯೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಲಾಗಿದೆ.

ಮಹದಾಯಿ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರು ಕಣ್ಣೀರು ಒರೆಸುವ ತಂತ್ರ ಅನುಸರಿಸುತ್ತಿದ್ದು, ಇದೊಂದು ಚುನಾವಣೆ ನಾಟಕ. ಈ ಹಿಂದೆ ಅನೇಕ ಬಾರಿ ಪ್ರಧಾನಿ ಮೋದಿ ಬಳಿ ಸಮಸ್ಯೆ ಪರಿಹರಿಸಲು ಕೇಳಿಕೊಳ್ಳಲಾಗಿತ್ತು. ಈ ವರೆಗೆ ಇತ್ಯರ್ಥಗೊಂಡಿಲ್ಲ. ಆದರೆ ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಮಸ್ಯೆ ಇತ್ಯರ್ಥಗೊಳಿಸುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಒತ್ತಡದಲ್ಲಿ ಬಿಜೆಪಿ

ಕಳೆದ ನವೆಂಬರ್​ನಲ್ಲಿ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆದ ಸಂದರ್ಭದಲ್ಲಿ ಮಹದಾಯಿ ಹೋರಾಟಗಾರರು ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ನಿವಾಸದ ಮುಂದೆ ಧರಣಿ ಕುಳಿತಿದ್ದರು. ಆಗ ಅಲ್ಲಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ, ಡಿ. 15ರ ಒಳಗಾಗಿ ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡುವುದಾಗಿ ಘೊಷಿಸಿದ್ದರು. ಈಗ ಈ ಗಡುವು ಮುಗಿದಿದ್ದು, ಬಿಜೆಪಿಯ ಪರಿವರ್ತನಾ ಯಾತ್ರೆ ಗುರುವಾರ 50ನೇ ದಿನ ಪೂರೈಸಲಿದೆ. ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸಿಹಿ ಸುದ್ದಿ ನೀಡುವ ಒತ್ತಡಕ್ಕೆ ಬಿಜೆಪಿ ಸಿಲುಕಿದೆ. ಮಹದಾಯಿ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಯೇ ಪರಿಹಾರ ಎಂಬುದು ಹೋರಾಟಗಾರರ ಬಲವಾದ ನಂಬಿಕೆಯಾಗಿದೆ. ಪ್ರತಿಪಕ್ಷಗಳ ನಿಲುವು ಸಹ ಅದೇ ಆಗಿದೆ.ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಸದ್ಯದಲ್ಲೇ ಚುನಾವಣೆ ಎದುರಾಗುವ ಕಾರಣ ವಿವಾದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಬಿಜೆಪಿಗೂ ಅನಿವಾರ್ಯವಾಗಿದೆ.

ಪರಿಹಾರ ಸೂತ್ರ ಏನಿರಬಹುದು...

ಅಮಿತ್ ಷಾ ನಡೆಸಿದ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯದ ಮುಖಂಡರು ಮಹದಾಯಿ ಪರಿಹಾರ ಸೂತ್ರವನ್ನು ಬಹಿರಂಗ ಪಡಿಸಿಲ್ಲ. ಕಳಸಾ-ಬಂಡೂರಿ ನಾಲಾ ಯೋಜನೆಗೆ ಅಗತ್ಯವಿರುವ 7.6 ಟಿಎಂಸಿ ನೀರು ಬದಲು ತಕ್ಷಣ 3-4 ಟಿಎಂಸಿ ನೀರು ಬಿಡುಗಡೆಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿದೆಯೆಂದು ಅಥವಾ ನ್ಯಾಯಾಧಿಕರಣದಿಂದ ಹೊರಗೆ ಪರಿಹಾರ ಕಂಡುಕೊಳ್ಳಲು ಗೋವಾ ಸರ್ಕಾರ ಸಿದ್ಧವಿದೆಯೆಂದು, ಇಲ್ಲವೇ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದಾರೆಂದು ಸಮಾವೇಶದಲ್ಲಿ ಪ್ರಕಟಿಸಬಹುದು.


ಬಿಜೆಪಿ ಸೂತ್ರಕ್ಕೆ ಕಾಂಗ್ರೆಸ್ ಒಪ್ಪುವುದೇ?

| ಕೆ. ರಾಘವ ಶರ್ಮ ನವದೆಹಲಿ

ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಕೊನೆಗೂ ಪರಿಹಾರ ಸೂತ್ರವೊಂದನ್ನು ಹುಡುಕಿದ್ದಾರೆ. ಈ ಸೂತ್ರ ಮಹದಾಯಿ ವಿವಾದಕ್ಕೆ ಶಾಶ್ವತ ಪರಿಹಾರವಾಗುವುದೇ? ಮಹದಾಯಿ ಕಣಿವೆ ಜನರು ಈ ಸೂತ್ರದಿಂದ ತೃಪ್ತಿಯಾಗು ತ್ತಾರೆಯೇ? ಮಹದಾಯಿ ವಿಷಯದಲ್ಲಿ ರಾಜಕೀಯದಾಟ ಕೊನೆಗೊಳ್ಳಬಹುದೇ? ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಸೂತ್ರಕ್ಕೆ ಕಾಂಗ್ರೆಸ್ ಒಪ್ಪುವುದೇ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಗದಿದ್ದರೂ, ದಿಲ್ಲಿಯಲ್ಲಿ ಬಿಜೆಪಿ ನಾಯಕರು ನಡೆಸಿದ ಸಭೆ ಜನರಲ್ಲಿ ಹೊಸ ಆಶಾಭಾವ ಮೂಡಿಸಿರುವುದಂತೂ ನಿಜ. ಮಹದಾಯಿ ನೀರನ್ನು ಕಳಸಾ ನಾಲೆಯ ಮೂಲಕ ಮಲಪ್ರಭಾಕ್ಕೆ ಹರಿಸಿ ಅಲ್ಲಿಂದ ನೀರನ್ನು ಹುಬ್ಬಳ್ಳಿ-ಧಾರವಾಡ ಮತ್ತು ಸ ಅದನ್ನು ನಾವು ಪರಿವರ್ತನಾ ರ್ಯಾಲಿಯ ಸಭೆಯಲ್ಲಿ ಜನರ ಮುಂದೆ ಬಹಿರಂಗಪಡಿಸಲಿದ್ದೇವೆ’ ಎಂದಷ್ಟೇ ಮಾಹಿತಿ ನೀಡಿದರು.

ಮಹದಾಯಿಯಿಂದ 7.5 ಟಿಎಂಸಿ ನೀರು ಹರಿಸಲು ಗೋವಾ ಒಪ್ಪಿಗೆ ನೀಡಬೇಕು ಎಂಬುದು ರಾಜ್ಯದ ಮಹದಾಯಿ ಕಣಿವೆ ಜನರ ಬೇಡಿಕೆ. ಇದಕ್ಕೆ ಗೋವಾ ಕಾಂಗ್ರೆಸ್ ಮತ್ತು ಸ್ಥಳೀಯರ ವಿರೋಧವಿದ್ದದ್ದರಿಂದಲೇ ಗೋವಾ ಸರ್ಕಾರ ಕೂಡ ಇದನ್ನು ತಿರಸ್ಕರಿಸಿತ್ತು. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹದಾಯಿ ವಿವಾದ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿರುವ ಹಿನ್ನೆಲೆಯಲ್ಲಿ ಅಮಿತ್ ಷಾ ಅವರು ಪರಿಕ್ಕರ್ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್, ಸಂಸದರಾದ ಪ್ರಹ್ಲಾದ ಜೋಷಿ, ಸುರೇಶ ಅಂಗಡಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯೆಲ್, ಮುರಳೀಧರ ರಾವ್ ಪಾಲ್ಗೊಂಡಿದ್ದರು. ುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಸಬೇಕು ಎಂಬುದು ಸದ್ಯದ ಯೋಜನೆ. ಅಮಿತ್ ಷಾ ಜತೆ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ‘ಗೋವಾ ಸಿಎಂ ಮತ್ತು ಬಿಜೆಪಿ ಅಧ್ಯಕ್ಷರೊಂದಿಗೆ ಸಕಾರಾತ್ಮಕ ಚರ್ಚೆ ನಡೆದಿದ್ದು, ಪರಿಹಾರ ಸೂತ್ರವೇನು ಎಂಬುದನ್ನು ಅವರು ನಮಗೆ ಫ್ಯಾಕ್ಸ್ ಮೂಲಕ ಕಳುಹಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *

Back To Top