Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಇಂದು ಮಹತ್ವದ ಸಿಎಲ್​ಪಿ

Wednesday, 15.11.2017, 3:00 AM       No Comments

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ತಲೆ ನೋವಿಗೆ ಕಾರಣವಾಗುವಂತಹ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಶಾಸಕರು ಉತ್ಸುಕರಾಗಿರುವ ಕಾರಣ, ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಸದಾಶಿವ ವರದಿ: ಪರಿಶಿಷ್ಟರಲ್ಲಿ ಮೀಸಲು ವರ್ಗೀಕರಣ ಮಾಡುವ ಸಲುವಾಗಿ ರಚನೆಯಾಗಿದ್ದ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ ಮಾಡಲು ಶಾಸಕರು ನಿರ್ಧರಿಸಿದ್ದಾರೆ. ಈ ವರದಿ ಜಾರಿಗೆ ಮುಂದಾಗುವ ಮೂಲಕ ಬಿಜೆಪಿ ಜತೆಗಿರುವ ಎಡಗೈ ಸಮುದಾಯವನ್ನು ಸೆಳೆಯಬಹುದೆಂದು ಕೆಲ ಶಾಸಕರು ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್​ನ ಉನ್ನತ ಮೂಲಗಳು ಹೇಳಿವೆ. ಬಲಗೈ ಹಾಗೂ ಸ್ಪೃಶ್ಯ ಪರಿಶಿಷ್ಟ ವರ್ಗಗಳು ಈ ವರದಿಗೆ ವಿರೋಧ ವ್ಯಕ್ತಪಡಿಸುತ್ತವೆ. ಆದ್ದರಿಂದಲೇ ಈ ವರದಿ ಬಗ್ಗೆ ನಡೆಯವ ಚರ್ಚೆ ಕುತೂಹಲ ಕೆರಳಿಸಿದೆ.

ಜಾತಿ ಸಮೀಕ್ಷೆ ವರದಿ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಸಮೀಕ್ಷೆ ವರದಿ ಜಾರಿಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಸುದ್ದಿ ಇದೆ. ಆ ವರದಿ ಜಾರಿಯಾದರೆ ಪಕ್ಷಕ್ಕೆ ಅನುಕೂಲವೆಂಬ ಭಾವನೆ ಇರುವ ಶಾಸಕರ ಸಂಖ್ಯೆಯು ಹೆಚ್ಚಿದೆ. ಅಂತಹ ಶಾಸಕರೆಲ್ಲ ಶಾಸಕಾಂಗ ಸಭೆಯಲ್ಲಿ ವರದಿ ಜಾರಿಗೆ ಒತ್ತಾಯ ಮಾಡಲಿದ್ದಾರೆ ಎನ್ನಲಾಗಿದೆ. ಜತೆಗೆ ಖಾಸಗಿ ವೈದ್ಯರ ನಿಯಂತ್ರಣ ಮಸೂದೆ, ಚುನಾವಣೆಗೆ ಪಕ್ಷದ ಸಿದ್ಧತೆ, ಗಣಪತಿ ಆತ್ಮಹತ್ಯೆ ಪ್ರಕರಣ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಶಾಸಕರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

Back To Top