Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :

ಇಂದು ನೈಟ್​ರೈಡರ್ಸ್ ಲಯನ್ಸ್

Friday, 21.04.2017, 3:00 AM       No Comments

ಕೋಲ್ಕತ: ಹ್ಯಾಟ್ರಿಕ್ ಗೆಲುವು ಹಾಗೂ ತವರಿನ ಪ್ರಚಂಡ ಪ್ರಭುತ್ವದ ವಿಶ್ವಾಸದಲ್ಲಿರುವ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್-10ರಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ. ಸತತ ಸೋಲುಗಳಿಂದ ಕಂಗೆಟ್ಟು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ಲಯ ಕಂಡುಕೊಳ್ಳುವ ಗುರಿಯಲ್ಲಿದೆ. ತವರಿನ ಹೊರಗೆ ಹಾಗೂ ತವರಿನಲ್ಲಿ ತಲಾ 2 ಪಂದ್ಯ ಗೆದ್ದುಕೊಂಡಿರುವ ಕೆಕೆಆರ್ 1 ಪಂದ್ಯದಲ್ಲಿ ಮಾತ್ರವೇ ಸೋತಿದೆ. ಕಳೆದ ವರ್ಷ ಲೀಗ್ ಹಂತವನ್ನು ಅಗ್ರಸ್ಥಾನದೊಂದಿಗೆ ಮುಗಿಸಿದ್ದ ಗುಜರಾತ್ ಲಯನ್ಸ್ ಈ ಬಾರಿ ಲಯ ಕಂಡುಕೊಳ್ಳಲು ಒದ್ದಾಡುತ್ತಿದೆ. 5 ಪಂದ್ಯವಾಡಿರುವ ಗುಜರಾತ್ 1 ಪಂದ್ಯದಲ್ಲಿ ಮಾತ್ರವೇ ಜಯ ಕಂಡಿದೆ.

ಕೋಲ್ಕತ ನೈಟ್​ರೈಡರ್ಸ್: ಕಳೆದ ಪಂದ್ಯ: ಡೆಲ್ಲಿ ವಿರುದ್ಧ 4 ವಿಕೆಟ್ ಗೆಲುವು ·ಸಂಭಾವ್ಯ ತಂಡ: ಗಂಭೀರ್ (ನಾಯಕ), ಗ್ರಾಂಡ್​ಹೊಮ್ ಉತ್ತಪ್ಪ, ಮನೀಷ್ ಪಾಂಡೆ, ಯೂಸುಫ್ ಪಠಾಣ್, ಸೂರ್ಯಕುಮಾರ್, ವೋಕ್ಸ್, ಸುನೀಲ್ ನಾರಾಯಣ್, ಕುಲದೀಪ್/ಪೀಯುಷ್ ಚಾವ್ಲ, ಉಮೇಶ್ ಯಾದವ್, ಕೌಲ್ಟರ್ ನಿಲ್. ·ಬಲ: ತವರಿನಲ್ಲಿ ಅಭೂತಪೂರ್ವ ದಾಖಲೆ; ಲಯದಲ್ಲಿರುವ ಬ್ಯಾಟ್ಸ್​ಮನ್​ಗಳು; ಗಂಭೀರ್ ನಾಯಕತ್ವ. ·ದೌರ್ಬಲ್ಯ: ದಿಢೀರ್ ಕುಸಿಯುವ ಭೀತಿ; ಉಮೇಶ್ ಯಾದವ್ ಅಸ್ಥಿರ ನಿರ್ವಹಣೆ.

ಗುಜರಾತ್ ಲಯನ್ಸ್: ಕಳೆದ ಪಂದ್ಯ: ಆರ್​ಸಿಬಿ ವಿರುದ್ಧ 21 ರನ್ ಸೋಲು ·ಸಂಭಾವ್ಯ ತಂಡ: ರೈನಾ (ನಾಯಕ), ಡ್ವೇನ್ ಸ್ಮಿತ್, ಮೆಕ್ಕಲಂ, ಫಿಂಚ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಇಶಾನ್ ಕಿಶನ್, ಆಂಡ್ರ್ಯೂ ಟೈ, ಥಂಪಿ, ಧವಳ್ ಕುಲಕರ್ಣಿ/ಪ್ರದೀಪ್ ಸಂಗ್ವಾನ್, ಶಿವಿಲ್ ಕೌಶಿಕ್/ಜಕಾತಿ. ·ಬಲ: ಸ್ಪೋಟಕ ಬ್ಯಾಟ್ಸ್​ಮನ್​ಗಳು; ಬಸಿಲ್ ಥಂಪಿ ಬೌಲಿಂಗ್; ಅನುಭವಿ ಸ್ಪಿನ್ನರ್ ಜಡೇಜಾ. ·ದೌರ್ಬಲ್ಯ: ಜಡೇಜಾ ನೀರಸ ನಿರ್ವಹಣೆ; ಮೊದಲ ಮುಖಾಮುಖಿಯಲ್ಲಿ 10 ವಿಕೆಟ್ ಸೋಲು; ಕ್ಲಿಕ್ ಆಗದ ಬ್ಯಾಟಿಂಗ್.

ಆರಂಭ: ರಾತ್ರಿ 8, ·ಎಲ್ಲಿ: ಕೋಲ್ಕತ; ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಮ್ಯಾಕ್ಸ್

-ಏಜೆನ್ಸೀಸ್

Leave a Reply

Your email address will not be published. Required fields are marked *

18 + twenty =

Back To Top