Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಇಂದು, ನಾಳೆ ಎಜುಕೇಷನ್ ಎಕ್ಸ್​ಪೋ

Saturday, 20.05.2017, 3:01 AM       No Comments

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ವಿಜಯವಾಣಿ-ದಿಗ್ವಿಜಯ 24×7 ನ್ಯೂಸ್ ಎಜುಕೇಷನ್ ಎಕ್ಸ್​ಪೋಗೆ ಭೇಟಿ ನೀಡಿ ವಿವಿಧ ಕೋರ್ಸ್​ಗಳ ಮಾಹಿತಿ ಪಡೆದು ಗೊಂದಲ ನಿವಾರಿಸಿಕೊಳ್ಳಿ!

ಉನ್ನತ ಶಿಕ್ಷಣ ಬಯಸುವವರ ಹಿತದೃಷ್ಟಿಯಿಂದ ವಿಜಯವಾಣಿ ಹಾಗೂ ‘ದಿಗ್ವಿಜಯ 247 ನ್ಯೂಸ್ ಜಂಟಿಯಾಗಿ ಶನಿವಾರ ಮತ್ತು ಭಾನುವಾರ (ಮೇ 20, 21) ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸುತ್ತಿರುವ ‘ಎಜುಕೇಷನ್ ಎಕ್ಸ್​ಪೋ 2017-ಫಾರ್ ದಿ ಜನರೇಷನ್ ನೆಕ್ಸ್ಟ್’ ನಡೆಯಲಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕರ್ನಾಟಕ ಕೊಳಚೆ ನಿಮೂಲನಾ ಮಂಡಳಿ ಅಧ್ಯಕ್ಷ ಆರ್.ವಿ. ದೇವರಾಜ್ ಶನಿವಾರ ಬೆಳಗ್ಗೆ 9.30ಕ್ಕೆ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬಿಜೆಪಿ ನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಪಾಲಿಕೆ ಸದಸ್ಯ ಡಿ.ಎನ್. ರಮೇಶ್ ಮತ್ತಿತರರು ಪಾಲ್ಗೊಳ್ಳುವರು.

ಎಸ್ಸೆಸ್ಸೆಲ್ಸಿ ಮತ್ತು ಪಿಯು ನಂತರ ಉನ್ನತ ಶಿಕ್ಷಣ ಪಡೆಯಲು ಯಾವ್ಯಾವ ಕಾಲೇಜಿನಲ್ಲಿ ಯಾವ ಕೋರ್ಸ್​ಗಳು ಲಭ್ಯ ಇವೆ, ಆಯಾ ಕಾಲೇಜುಗಳಲ್ಲಿ ಏನೇನು ಸೌಲಭ್ಯಗಳಿವೆ ಎಂಬ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುವುದು. ಮೇಳದಲ್ಲಿ ಹಲವು ವಿಚಾರಸಂಕಿರಣಗಳನ್ನೂ ಆಯೋಜಿಸಲಾಗುತ್ತಿದ್ದು, ಶಿಕ್ಷಣ ತಜ್ಞರು ಮಾಹಿತಿ ನೀಡುವ ಜತೆಗೆ ವಿದ್ಯಾರ್ಥಿಗಳ ಗೊಂದಲ ನಿವಾರಿಸಲಿದ್ದಾರೆ.

ಎರಡೂ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಸಂವಾದ ನಡೆಯಲಿವೆ. ಶನಿವಾರ ಬೆಳಗ್ಗೆ 11 ಗಂಟೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಉಪಕುಲಸಚಿವ ಡಾ.ಷಣ್ಮುಗಪ್ಪ- ‘ಸ್ಕೋಪ್ ಇನ್ ಮೆಡಿಕಲ್ ಆಂಡ್ ಪ್ಯಾರಾ ಮೆಡಿಕಲ್ ಸಿಲಬೈ’, ಮಧ್ಯಾಹ್ನ 12ಕ್ಕೆ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ಗೀತಾ – ‘ಚಾರ್ಟಡ್ ಅಕೌಂಟ್ಸ್ ಕೋರ್ಸ್ ಆಂಡ್ ಆಪರ್ಚುನಿಟೀಸ್’ ಕುರಿತು ಉಪನ್ಯಾಸ ನೀಡುವರು. ಭಾನುವಾರ ಬೆಳಗ್ಗೆ 11 ಗಂಟೆಗೆ ಆರ್.ವಿ.

ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಸುಬ್ರಹ್ಮಣ್ಯ- ‘ಆಪಾರ್ಚುನಿಟೀಸ್ ಇನ್ ಇಂಜಿನಿಯರಿಂಗ್ ಡಿಸಿಪ್ಲೀನ್ಸ್’ ಹಾಗೂ 12ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಿಆರ್​ಒ ರವಿ- ‘ಸಿಇಟಿ- ಕೌನ್ಸೆಲಿಂಗ್’ ಹಾಗೂ 3ಕ್ಕೆ ಅಂತಾರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಸಂದರ್ಶನ ಪ್ರಾಧ್ಯಾಪಕ ಡಾ. ಕೆ.ಪಿ. ಪುತ್ತ್ತೂರಾಯ – ‘ಟಿಪ್ಸ್ ಫಾರ್ ಸಕ್ಸಸ್​ಫುಲ್ ಲೈಫ್’ ವಿಚಾರವಾಗಿ ಉಪನ್ಯಾಸ ನೀಡುವರು.

ಸಂವಾದದಲ್ಲೂ ಪಾಲ್ಗೊಳ್ಳಬಹುದು

ಯಾವ್ಯಾವ ಕೋರ್ಸ್​ಗಳಿಗೆ ಪ್ರತಿಕ್ರಿಯೆ ಹೇಗಿದೆ? ಉದ್ಯೋಗದ ಲಭ್ಯತೆ, ಯಾವ ಕೋರ್ಸ್ ಪ್ರವೇಶಕ್ಕೆ ಯಾವ ಪರೀಕ್ಷೆ ಎದುರಿಸಬೇಕು, ಪರೀಕ್ಷೆಗಾಗಿ ಮಾಡಿಕೊಳ್ಳಬೇಕಾದ ಸಿದ್ಧತೆ, ಎಲ್ಲೆಲ್ಲಿ ತರಬೇತಿ ಪಡೆಯಬಹುದು, ವಿದ್ಯಾರ್ಥಿವೇತನದ ಲಭ್ಯತೆ, ಆನ್​ಲೈನ್ ಕೋರ್ಸ್ ಸೇರಿ ಹಲವು ವಿಷಯಗಳ ಕುರಿತು ಶಿಕ್ಷಣ ತಜ್ಞರಿಂದಲೇ ಮಾಹಿತಿ ದೊರೆಯಲಿದೆ. ಡಿಪ್ಲೊಮಾ, ಇಂಜಿನಿಯರಿಂಗ್, ನಿರ್ವಹಣಾಶಾಸ್ತ್ರ, ವೈದ್ಯಕೀಯ ಮತ್ತು ದಂತವೈದ್ಯಕೀಯ, ಫ್ಯಾಷನ್, ಆನಿಮೇಷನ್, ಬಾಹ್ಯಾಕಾಶ ಸಂಶೋಧನೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಪರಿಣತರು ಸಂವಾದದಲ್ಲಿ ಪಾಲ್ಗೊಳ್ಳುವರು. ಸಂವಾದದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಮತ್ತು ಪಾಲಕರು ಅಗತ್ಯ ಮಾಹಿತಿ ಪಡೆಯುವ ಜತೆಗೆ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು.

ಪ್ರವೇಶ ಉಚಿತ

ಸ್ಥಳ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ

ಪ್ರವೇಶ ಉಚಿತ

ತಜ್ಞರಿಂದ ವಿಚಾರಗೋಷ್ಠಿ

ಮಾಹಿತಿ, ಮಾರ್ಗದರ್ಶನ

ಭಾಗವಹಿಸಲಿರುವ ಸಂಸ್ಥೆಗಳು

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಗೂ ಗೀತಂ ವಿಶ್ವವಿದ್ಯಾಲಯ ಪ್ಲಾಟಿನಂ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಪಿಇಎಸ್ ವಿಶ್ವವಿದ್ಯಾಲಯ ಡೈಮಂಡ್ ಹಾಗೂ ಎಐಎಂಎಸ್ ಇನ್​ಸ್ಟಿಟ್ಯೂಟ್, ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆ, ಲೋಹಿತ್ಸ್ ಅಕಾಡೆಮಿ, ದಿ ವಿಷನ್ ನೀಟ್ ಅಕಾಡೆಮಿ, ರಾಮಯ್ಯ ವಿಶ್ವವಿದ್ಯಾಲಯ, ವೇಮನ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೋಲ್ಡನ್ ಪ್ರಾಯೋಜಕತ್ವ ವಹಿಸಿಕೊಂಡಿವೆ.

ಉಚಿತ ಸಾರಿಗೆ ವ್ಯವಸ್ಥೆ

ಎಕ್ಸ್​ಫೋಗಾಗಿ ಕ್ರೇಂಬಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಾರಿಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ಹೀಗಾಗಿ ಆಸಕ್ತ ವಿದ್ಯಾರ್ಥಿಗಳು ಸೂಚಿಸಲಾಗಿರುವ ಮಾರ್ಗಗಳಿಗೆ ಸೂಕ್ತ ಸಮಯಕ್ಕೆ ಬಂದು ಇದರ ಸೌಲಭ್ಯ ಪಡೆದುಕೊಳ್ಳಬಹುದು.

ರೂಟ್ 01: ಬಿಟಿಎಂ ಬಡಾವಣೆ (ವಾಟರ್ ಟ್ಯಾಂಕ್ ಬೆ.8.30), ಜಯನಗರ 5ನೇ ಹಂತ (ಕಾಫಿಡೇ ಬೆ.8.45), ಬನಶಂಕರಿ (ಬಸ್ ನಿಲ್ದಾಣದ ಹೊರಗೆ ಬೆ.9.00), ಜಯನಗರ 8ನೇ ಹಂತ (ಜೆಎಸ್​ಎಸ್ ಕಾಲೇಜು ಬೆ.9.15), ಕೆ.ಆರ್.ರಸ್ತೆ (ಎಸ್​ಬಿಐ ಬ್ಯಾಂಕ್ ಬೆ.9.25). ಮಾಹಿತಿಗೆ ಮೊ:88844 32439 ಸಂರ್ಪಸಬಹುದು.

ರೂಟ್ 02: ಯಲಹಂಕ (ಶೇಷಾದಿಪುರಂ ಕಾಲೇಜು ಬೆ.8.30), ಶೇಷಾದ್ರಿಪುರಂ ಕಾಲೇಜು (ಬೆ.9.15), ಹೆಬ್ಬಾಳ (ಪೊಲೀಸ್ ಠಾಣೆ ಎದುರು ಬೆ.9.15), ಯಶವಂತಪುರ (ಪೊಲೀಸ್ ಠಾಣೆ ಎದುರು ಬೆ.9.45), ಮಲ್ಲೇಶ್ವರಂ (18ನೇ ಕ್ರಾಸ್ ಬಸ್ ನಿಲ್ದಾಣ ಬೆ.10), ಶೇಷಾದ್ರಿಪುರಂ (ನಟರಾಜ ಚಿತ್ರಮಂದಿರ ಎದುರು ಬೆ.10.30), ಮೆಜೆಸ್ಟಿಕ್(ಮೇಲ್ಸೇತುವೆ ಹತ್ತಿರ ಬೆ.11). ಹೆಚ್ಚಿನ ಮಾಹಿತಿಗೆ ಮೊ: 88844 32438 ಸಂರ್ಪಸಬಹುದು.

ರೂಟ್ 03: ಕೆಂಗೇರಿ (ಅಂಚೆ ಕಚೇರಿ ಎದುರು ಬೆ.8.30), ಯೂನಿವರ್ಸಿಟಿ (ಹೊರ ವರ್ತಲ ರಸ್ತೆ ಬೆ.8.45), ಹೊರವರ್ತಲ ರಸ್ತೆ (ಬೆ.9.00), ನಾಗರಭಾವಿ (ಡಾ.ಅಂಬೇಡ್ಕರ್ ಕಾಲೇಜು ಬೆ.9.15), ನಾಗರಭಾವಿ ವೃತ್ತ (9.30), ಚಂದ್ರಾಲೇಔಟ್ (ಬಸ್ ನಿಲ್ದಾಣ ಬೆ.9.45), ವಿಜಯನಗರ (ಬಸ್ ನಿಲ್ದಾಣ ಬೆ.10), ಮಾಗಡಿ ರಸ್ತೆ (ಟೋಲ್​ಗೇಟ್ 10.15), ಟೋಲ್​ಗೇಟ್ (ಬೆ.10.20). ಹೆಚ್ಚಿನ ಮಾಹಿತಿಗೆ ಮೊ:88844 32485 ಸಂರ್ಪಸಬಹುದು.

ರೂಟ್ 04: ಬನಶಂಕರಿ (ಬೆ.8.30), (ಬಿಡಿಎ ಕಾಂಪ್ಲೆಕ್ಸ್ ಬೆ.8.45), ದೇವೇಗೌಡ ಪೆಟ್ರೋಲ್ ಬಂಕ್ (ಬೆ.9.00), ಕಾಮಾಕ್ಯ (ಬಸ್ ಡಿಪೋ ಬೆ.9.15), ಕತ್ತರಿಗುಪ್ಪೆ ಬಸ್ ನಿಲ್ದಾಣ (ಬೆ.9.20), ಶ್ರೀನಿವಾಸನಗರ (ಬಾಟಾ ಶೋರೂಂ ಬೆ.9.30), ಹನುಮಂತನಗರ (ಮಾರುತಿ ವೃತ್ತ ಬೆ.9.45). ಹೆಚ್ಚಿನ ಮಾಹಿತಿಗೆ ಮೊ: 88844 32441 ಸಂರ್ಪಸಬಹುದು.

Leave a Reply

Your email address will not be published. Required fields are marked *

Back To Top