Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಇಂದು ಖಗ್ರಾಸ ಸೂರ್ಯ ಗ್ರಹಣ ಅಮೆರಿಕದಲ್ಲಿ ಗೋಚರ

Monday, 21.08.2017, 3:00 AM       No Comments

ಮಿಯಾಮಿ: ಅಮೆರಿಕದಲ್ಲಿ ಇಂದು (ಸೋಮವಾರ) ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಸೂರ್ಯನ ವ್ಯಾಸ ಚಂದ್ರನಿಗಿಂತ 400 ಮೀಟರ್ ಅಗಲವಾಗಿರಲಿದೆ. ಹಾಗಾಗಿ ಗ್ರಹಣದ ಛಾಯೆ ಸಂಪೂರ್ಣ ಅಮೆರಿಕವನ್ನು ಆವರಿಸಲಿದೆ. 99 ವರ್ಷಗಳ ಬಳಿಕ 21ನೇ ಶತಮಾನದಲ್ಲಿ ಅಮೆರಿಕದಲ್ಲಿ ಸಂಭವಿಸಲಿರುವ ಮೊದಲ ಖಗ್ರಾಸ ಸೂರ್ಯಗ್ರಹಣ ಇದಾಗಿದೆ. ಆದರೆ, ಗ್ರಹಣ ಸಂಭವಿಸುವ ವೇಳೆಗೆ ಭಾರತದಲ್ಲಿ ಕತ್ತಲಾಗಿರುವುದರಿಂದ ಗ್ರಹಣ ಗೋಚರವಾಗುವುದಿಲ್ಲ.ಪೆಸಿಫಿಕ್ ಮಹಾಸಾಗರದಲ್ಲಿ ಬೆಳಗ್ಗೆ 8 ಗಂಟೆ 46 ನಿಮಿಷಕ್ಕೆ (ಸ್ಥಳೀಯ ಕಾಲಮಾನ) ಗ್ರಹಣ ಆರಂಭವಾಗಲಿದೆ. ಒರೆಗಾನ್​ನ ಲಿಂಕನ್ ಬೀಚ್​ನಲ್ಲಿ ಬೆಳಗ್ಗೆ 10 ಗಂಟೆ 16 ನಿಮಿಷಕ್ಕೆ ಸೂರ್ಯನಿಗೆ ಚಂದ್ರ ಸಂಪೂರ್ಣ ಅಡ್ಡಲಾಗುತ್ತಾನೆ. 1918ರಲ್ಲಿ ‘ದಿ ಗ್ರೇಟ್ ಅಮೆರಿಕನ್ ಎಕ್ಲಿಪ್ಸ್‘ ಎಂದು ಕರೆಯಲಾಗುವ ಖಗ್ರಾಸ ಸೂರ್ಯಗ್ರಹಣ ಸಂಭವಿಸತ್ತು. ಖಗ್ರಾಸ ಸೂರ್ಯಗ್ರಹಣ ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಿದೆ.

 

Leave a Reply

Your email address will not be published. Required fields are marked *

Back To Top