Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಇಂದಿನಿಂದ ಶಬರಿಮಲೆ ಯಾತ್ರೆ

Wednesday, 15.11.2017, 3:00 AM       No Comments

ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗರ್ಭಗುಡಿ ಬಾಗಿಲು ನ.15ರ ಸಾಯಂಕಾಲ ತೆರೆಯುವುದರೊಂದಿಗೆ ಯಾತ್ರೆ ಆರಂಭಗೊಳ್ಳಲಿದೆ. 41 ದಿವಸಗಳ ತನಕ ಮಂಡಲ ಪೂಜಾ ಋತು ಜರುಗಲಿದ್ದು, ಡಿ.26ರಂದು ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.

ಮೂರು ದಿನಗಳ ನಂತರ ಮಕರಜ್ಯೋತಿ ಮಹೋತ್ಸವಕ್ಕಾಗಿ ಮತ್ತೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. 2018 ಜನವರಿ 14ರಂದು ಮಕರಜ್ಯೋತಿ ಉತ್ಸವ ನಡೆಯಲಿದೆ. ಶಬರಿಮಲೆ ಯಾತ್ರೆ ಆರಂಭಗೊಳ್ಳುತ್ತಿದ್ದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಶಬರಿಮಲೆ ಸನ್ನಿಧಾನ ಸಹಿತ ಆಸುಪಾಸು ಅರಣ್ಯ ಪ್ರದೇಶಗಳಲ್ಲೂ ಆಕಾಶಮಾರ್ಗವಾಗಿ ನಿಗಾವಹಿಸಲು ಡ್ರೋನ್ ಕಣ್ಗಾವಲಿನ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುವುದು. ಶಬರಿಮಲೆ ಕರ್ತವ್ಯಕ್ಕಾಗಿ ಪ್ರತಿ ಜಿಲ್ಲೆಗಳಿಂದ ವಿಶೇಷ ಪೊಲೀಸ್ ಅಧಿಕಾರಿಗಳ ನೇಮಕಾತಿ ಆರಂಭಗೊಂಡಿದೆ. ಶಬರಿಮಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 105 ಕೋಟಿ ರೂ. ಮಂಜೂರು ಮಾಡಿದೆ.

Leave a Reply

Your email address will not be published. Required fields are marked *

Back To Top